ಗಾಜನೂರಿನಲ್ಲಿರುವ ಡಾ. ರಾಜ್ ಅವರ ಮನೆ 
ರಾಜ್ಯ

ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದಾಗಿ ಡಾ. ರಾಜ್ ಗೆ ನ್ಯಾಯ ಸಿಗಲಿಲ್ಲ!

ನಮ್ಮ ಹೆಮ್ಮೆಯ ಪುತ್ರನನ್ನು ನಾವು ಕಳೆದು ಕೊಂಡಿದ್ದೇವೆ, ರಾಜಣ್ಣ ಅವರಿಗೆ ನ್ಯಾಯ ಸಿಗುತ್ತದೆ ಎಂಬ ಭರವಸೆ ನಮಗೆ ಇತ್ತು, ಆದರೆ ಅವರ ಸಾವಿನ ನಂತರವೂ./...

ಬೆಂಗಳೂರು: ನಮ್ಮ ಹೆಮ್ಮೆಯ ಪುತ್ರನನ್ನು ನಾವು ಕಳೆದು ಕೊಂಡಿದ್ದೇವೆ, ರಾಜಣ್ಣ ಅವರಿಗೆ ನ್ಯಾಯ ಸಿಗುತ್ತದೆ ಎಂಬ ಭರವಸೆ ನಮಗೆ ಇತ್ತು, ಆದರೆ ಅವರ ಸಾವಿನ ನಂತರವೂ ಸೂಕ್ತ ನ್ಯಾಯ ಸಿಗಲಿಲ್ಲ ಎಂದು ವರನಟ ಡಾ. ರಾಜ್ ಅವರ ತವರೂರಾದ ಗಾಜನೂರು ಮಂದಿಯ ಅಭಿಪ್ರಾಯ.
ಡಾ.ರಾಜ್ ಕುಮಾರ್ ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಕೋರ್ಟ್ ಸಾಕ್ಷ್ಯಾಧಾರಗಳ ಕೊರತೆಯ ಕಾರಣದಿಂದಾಗಿ ಎಲ್ಲಾ ಆರೋಪಿಗಳನ್ನು ಖುಲಾಸೆ ಮಾಡಿರುವುದು ವರನಟನ ಕುಟುಂಬಕ್ಕೆ ಮಾತ್ರವಲ್ಲದೇ ಗಾಜನೂರು ಮಂದಿಯಲ್ಲಿ ಬೇಸರ ಮೂಡಿಸಿದೆ.
ಡಾ.ರಾಜ್ ಅಪಹರಣ ಕೇಸ್  18 ವರ್ಷ ಹಳೇಯದ್ದು, 2006 ರಲ್ಲಿ ನಟಸಾರ್ವಭೌಮ ವಿಧಿವಶರಾದರು, ಅದಾದ ನಂತರ ಕಾಡುಗಳ್ಳ ವೀರಪ್ಪನ್ ಮತ್ತು ಆತನ ಸಹಚರರನ್ನು ಎಸ್ ಟಿಎಫ್  ಅಧಿಕಾರಿಗಳು ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಿದ್ದರು, ಹೀಗಾಗಿ ಕೇಸ್ ಬಹಳ ಕುತೂಹಲ ಮೂಡಿಸಿತ್ತು. 2000 ದ ಜುಲೈ 10 ರಂದು  ಗಾಜನೂರಿನಿಂದ ರಾಜಕುಮಾರ್ ಅವರನ್ನು ಅಪಹರಿಸಿದ್ದ ವೀರಪ್ಪನ್ ಸುಮಾರು 108 ದಿನಗಳ ಕಾಲ ಒತ್ತೆಯಾಳಾಗಿರಿಸಿಕೊಂಡಿದ್ದ, ನಂತರ ತನ್ನ ಬೇಡಿಕೆ  ಈಡೇರಿದ ನಂತರ ರಾಜ್ ಕುಮಾರ್ ಅವರನ್ನು ರಿಲೀಸ್ ಮಾಡಲಾಗಿತ್ತು.
ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಜನರ ಕೈವಾಡದ ಬಗ್ಗೆ ಪೊಲೀಸರು ತನಿಖೆ ನಡೆಸಬೇಕಿತ್ತು, ಸ್ಥಳೀಯ ಜನರ ಸಹಕಾರವಿಲ್ಲದೇ ಕಿಡ್ನಾಪ್ ಮಾಡುವುದು ಕಷ್ಟ ಎಂದು ಡಾ.ರಾಜ್ ಅವರನ್ನು ಹಲವು ವರ್ಷಗಳಿಂದ ಹತ್ತಿರದಿಂದ ನೋಡಿದ್ದ ಬಾಲಯ್ಯ ಎಂಬಾತ ಹೇಳಿದ್ದಾರೆ.
ಸ್ಥಳೀಯ ರಾಜಕಾರಣಿಗಳ ರಾಜಕೀಯ ಇಚ್ಚಾಶಕ್ತಿ ಕೊರತೆಯಿಂದಾಗಿ ರಾಜ್ ಕಿಡ್ನಾಪ್ ಕೇಸ್ ನಲ್ಲಿ ನ್ಯಾಯ ಸಿಗಲಿಲ್ಲ ಎಂದು ರಾಜ್ ಕುಮಾರ್ ಸಂಬಂಧಿ ರಾಜಗೋಪಾಲ್ ಹೇಳಿದ್ದಾರೆ,. ಅನಾರೋಗ್ಯದ ಕಾರಣದಿಂದಾಗಿ ಪಾರ್ವತಮ್ಮ ರಾಜ್ ಕುಮಾರ್ ಕೋರ್ಟ್ ಗೆ ಹಾಜರಾಗಲು ಸಾಧ್ಯವಾಗಲಿಲ್ಲ,. ಆದರೆ ಅಪ್ಪಾಜಿ ಅಥವಾ ವೀರಪ್ಪನ್ ಬದುಕಿದ್ದರೇ ಕೇಸ್ ತೀರ್ಪು ಬೇರೆ ಇರುತ್ತಿತ್ತು ಎಂದು ಹೇಳಿದ್ದಾರೆ.
ಅಣ್ಣಾವ್ರಿಗೆ ನ್ಯಾಯ ಸಿಗದಿರುವುದು ದುಃಖ ತಂದಿದೆ, ಹಲವು ವರ್ಷಗಳ ಸಮಯ ಹಿಡಿದಿದ್ದರಿಂದ ಕೇಸ್ ಗಂಭೀರತೆ ಕಳೆದು ಕೊಂಡಿದೆ ಎಂದು ಅಂಗಡಿ ಮಾಲೀಕರೊಬ್ಬರು ಹೇಳಿದ್ದಾರೆ. 
ಗಾಜನೂರಿನಲ್ಲಿ ರಾಜ್ ಕುಮಾರ್ ಸ್ಮಾರಕ ನಿರ್ಮಾಣ ಮಾಡುವುದಾಗಿ ಹೇಳಿದ್ದ ತಮಿಳುನಾಡು ಮತ್ತು ಕರ್ನಾಟಕ ಸರ್ಕಾರ ನೀಡಿದ್ಧ ಭರವಸೆ ಹುಸಿಯಾಗಿದೆ,  

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ದಿನದ ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥರು ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

ಡೆವಿಲ್‌' ಸಿನಿಮಾದ 'ಇದ್ರೆ ನೆಮ್ಮದಿಯಾಗಿ ಇರಬೇಕು' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT