ರಾಜ್ಯ

ದುರಸ್ತಿ ಕಾರ್ಯ: ಬೆಂಗಳೂರಿನ ಹಲವೆಡೆ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ

Sumana Upadhyaya

ಬೆಂಗಳೂರು: ಕಾವೇರಿ ನೀರು ಪೂರೈಕೆಯ ಮೊದಲನೇ, ಎರಡನೇ ಮತ್ತು ಮೂರನೇ ಹಂತದಲ್ಲಿ ನವೀಕರಣ ಕಾಮಗಾರಿ ಮತ್ತು ಇತರ ದುರಸ್ತಿ ಕಾರ್ಯ ನಡೆಯಲಿರುವುದರಿಂದ ನಾಳೆ ರಾತ್ರಿ 10 ಗಂಟೆಯಿಂದ ನಾಡಿದ್ದು ಸಂಜೆ 4 ಗಂಟೆಯವರೆಗೆ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಇದರಿಂದಾಗಿ ಯಶವಂತಪುರ, ವಸಂತ ನಗರ, ಮುತ್ಯಾಲನಗರ, ಆರ್ ಟಿ ನಗರ, ಸಂಜಯ್ ನಗರ, ಸದಾಶಿವನಗರ, ಹೆಬ್ಬಾಳ, ಭಾರತಿ ನಗರ, ಸುಧಾಮನಗರ, ಪ್ಯಾಲೆಸ್ ಗುಟ್ಟಹಳ್ಳಿ, ಮಚಲಿಬೆಟ್ಟ, ಹೆಬ್ಬಾಳ, ಭಾರತಿ ನಗರ, ಫ್ರೇಜರ್ ಟೌನ್, ವಿಲ್ಸನ್ ಗಾರ್ಡನ್, ಹೊಂಬೆಗೌಡ ನಗರ, ಪಿಲ್ಲಣ್ಣ ಗಾರ್ಡನ್, ಬನ್ನಪ್ಪ ಪಾರ್ಕ್, ಶಿವಾಜಿನಗರ, ಜೀವನ್ ಭೀಮಾ ನಗರ, ಚಿಕ್ಕಲಾಲ್ ಬಾಗ್, ಗವಿಪುರಂ, ಬ್ಯಾಟರಾಯನಪುರ, ಮೆಜೆಸ್ಟಿಕ್, ಕಸ್ತೂರ್ಬಾ ರಸ್ತೆ, ಮಡಿವಾಳ, ಯಲಚೇನಹಳ್ಳಿ, ಇಸ್ರೊ ಲೇ ಔಟ್, ಪೂರ್ಣಪ್ರಜ್ಞ ಲೇ ಔಟ್, ನೀಲಸಂದ್ರ, ಕೆ ಆರ್ ಮಾರ್ಕೆಟ್, ಸಂಪಂಗಿರಾಮನಗರ, ಕುಮಾರಸ್ವಾಮಿ ಲೇ ಔಟ್, ಬನಶಂಕರಿ, ಬಿಎಸ್ ಕೆ 2 ಮತ್ತು 3ನೇ ಹಂತ, ಜಯನಗರ, ಜೆ ಪಿ ನಗರ, ಬನಗಿರಿನಗರ, ಬಸವನಗುಡಿ, ಓಕಳಿಪುರಂ, ಚಾಮರಾಜಪೇಟೆ, ಪದ್ಮನಾಭನಗರ, ಹೊಸಕೆರೆಹಳ್ಳಿ, ಬೈರಸಂದ್ರ, ಲಿಂಗರಾಜಪುರಂ, ಜಾನಕಿರಾಮ ಲೇಔಟ್, ಆರ್ ಎಸ್ ಪಾಳ್ಯ, ಜಾನ್ಸನ್ ಮಾರ್ಕೆಟ್, ಆಡುಗೋಡಿ, ದೊಮ್ಮಲೂರು, ಬಿಟಿಎಂ ಲೇ ಔಟ್, ಸಿ ಎಲ್ ಆರ್, ಬಾಪೂಜಿನಗರ, ಮೈಸೂರು ರಸ್ತೆ, ಶ್ರೀರಾಮ್ ಪುರ, ಇಂದಿರಾನಗರ 1 ಹಂತ, ಶ್ರೀನಗರ, ಅಲಸೂರು, ಶಾಂತಿನಗರ, ಕೋರಮಂಗಲ, ವಿಜಯನಗರ, ಚೋಳರಪಾಳ್ಯ, ಮುನೇಶ್ವರನಗರ, ವಿ ವಿ ಪುರಂ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

SCROLL FOR NEXT