ರಾಜ್ಯ

ಬೆಂಗಳೂರು ಗ್ರಾಮಾಂತರ ಪ್ರದೇಶದ ಸ್ತನ್ಯ ಕ್ಸಾನ್ಸರ್ ಮಹಿಳೆಯರಿಗೆ ಉಚಿತ ಚಿಕಿತ್ಸೆ !

Nagaraja AB

ಬೆಂಗಳೂರು: ರೋಟರಿ ಕ್ಲಬ್ ಹಾಗೂ ಸಕ್ರಾ ವರ್ಲ್ಡ್ ಆಸ್ಪತ್ರೆ ಜಂಟಿ ಸಹಯೋಗದಲ್ಲಿ ಸ್ತನ್ಯ ಕ್ಯಾನ್ಸರ್ ನಿಂದ ನರಳುತ್ತಿರುವ  ಬೆಂಗಳೂರು ಗ್ರಾಮಾಂತರ ಪ್ರದೇಶದ ಬಡ ಮಹಿಳೆಯರಿಗೆ ಉಚಿತ ಚಿಕಿತ್ಸೆ  ನೀಡಲಾಗುತ್ತಿದೆ.

ಕರ್ನಾಟಕ , ತಮಿಳುನಾಡಿನ  ಹಳ್ಳಿಗಳು, ಬೆಂಗಳೂರು ಗ್ರಾಮಾಂತರ ಸ್ತನ್ಯ ಕ್ಯಾನ್ಸ್ ರ್ ರೋಗಿಗಳ ತಪಾಸಣೆ ನಡೆಸಿ  ಉಚಿತವಾಗಿ ಚಿಕಿತ್ಸೆ ನೀಡಲು ಒಪ್ಪಂದ ಮಾಡಿಕೊಳ್ಳಲಾಗಿದೆ.

 ಅಲ್ಟ್ರಾಸೊನೊಗ್ರಾಮ್ ಉಪಕರಣ ಹೊಂದಿದ್ದ ಮೊಬೈಲ್ ಸ್ತನ್ಯ ಕ್ಸಾನ್ಸರ್ ತಪಾಸಣಾ ಕ್ಲಿನಿಕ್  ತೆರೆಯಲಾಗುವುದು, ರಾಷ್ಟ್ರೀಯ ಕ್ಯಾನ್ಸರ್ ನೋಂದಣಿ ವರದಿ ಪ್ರಕಾರ ಭಾರತದಲ್ಲಿ ವಯಸ್ಸಿಗೆ ಹೊಂದಿಕೊಂಡಂತೆ ಶೇ, 25.8 ರಷ್ಟು ಸ್ತನ ಕ್ಯಾನ್ಸರ್ ಘಟನೆಗಳು ಕಂಡುಬಂದಿದ್ದು, ಶೇ, 12.7 ರಷ್ಟು ಮಂದಿ ಸಾವನ್ನಪ್ಪುತ್ತಿದ್ದಾರೆ. ಒಂದು ವೇಳೆ ಬೇಗನೆ ಚಿಕಿತ್ಸೆ ಕೊಡಿಸಿದ್ದರೆ ಸ್ತನ ಕ್ಯಾನ್ಸರ್ ನಿಂದ ಸಾಯುವವರ ಸಂಖ್ಯೆಯನ್ನು ಕಡಿಮೆ ಮಾಡಬಹುದಾಗಿದೆ.

ರೋಗ ಆರಂಭಿಕ ಹಂತದಲ್ಲಿ ಚಿಕಿತ್ಸೆ ಪಡೆದರೆ ಸಂಪೂರ್ಣವಾಗಿ ಸ್ತನ ಕ್ಯಾನ್ಸರ್  ನಿರ್ಮೂಲನೆ ಮಾಡಬಹುದು. ಆದಾಗ್ಯೂ, ಶೇ. 50 ಕ್ಕೂ ಹೆಚ್ಚು ಪ್ರಕರಣಗಳು ಮೂರು ಅಥವಾ ನಾಲ್ಕನೇ ಹಂತದಲ್ಲಿ ಪತ್ತೆಯಾದಾಗ ಮರಣಕ್ಕೆ ಕಾರಣವಾಗಬಹುದು ಎಂದು ಸಕ್ರಾ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ  ತಾಕ್ಸಿ ಮಕಿ ತಿಳಿಸಿದ್ದಾರೆ.

SCROLL FOR NEXT