ಬಿಎ ಸನದಿ 
ರಾಜ್ಯ

ಕನ್ನಡದ ಹಿರಿಯ ಸಾಹಿತಿ ಬಿಎ ಸನದಿ ವಿಧಿವಶ

ಕನ್ನಡದ ಹಿರಿಯ ಕವಿ, ಲೇಖಕ ಬಿಎ ಸನದಿ (86) ಭಾನುವಾರ ವಿಧಿವಶರಾದರು. ಕುಮಟಾದ ತಮ್ಮ ನಿವಾಸದಲ್ಲಿ ಕವಿ ಸನದಿ ಅನಾರೋಗ್ಯದ ಕಾರಣದಿಂದ ಕೊನೆಯುಸಿರೆಳೆದಿದ್ದಾರೆ.

ಕುಮಟಾ: ಕನ್ನಡದ ಹಿರಿಯ ಕವಿ, ಲೇಖಕ ಬಿಎ ಸನದಿ  (86) ಭಾನುವಾರ ವಿಧಿವಶರಾದರು. ಕುಮಟಾದ ತಮ್ಮ ನಿವಾಸದಲ್ಲಿ ಕವಿ ಸನದಿ ಅನಾರೋಗ್ಯದ ಕಾರಣದಿಂದ  ಕೊನೆಯುಸಿರೆಳೆದಿದ್ದಾರೆ. 
ಮೃತರ ಪಾರ್ಥಿವ ಶರೀರವನ್ನು ಬೆಳಗಾವಿಯ ಸಿಂದೋಳಿಯ ಮೂಲ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಬಳಿಕ ಲ್ಲಿಯೇ ಅಂತಿಮ ವಿಧಿಗಳನ್ನು ನೆರವೇರಿಸಲಾಗಿದೆ.
ಬೆಳಗಾವಿಯ ಸಿಂದೋಳಿಯಲ್ಲಿ  1933 ರ ಆಗಸ್ಟ್ 18 ರಂದು ಜನಿಸಿದ್ದ ಸನದಿ ಕವಿತೆ, ಕಥೆ, ಅನುವಾದ, ವಿಮರ್ಶೆಗಳನ್ನು ರಚಿಸಿ ಹೆಸರಾಗಿದ್ದರು, ಅಲ್ಲದೆ ಅದೆಲ್ಲಕ್ಕೆ ಮಿಗಿಲಾಗಿ ಆದರ್ಶ ಶಿಕ್ಷಕ ಎಂದು ಹೆಸರು ಮಾಡಿದ್ದರು.
 ಕವಿತೆ, ಕಥೆಗಳು, ನಾಟಕಗಳು ಮತ್ತು ಮಕ್ಕಳ ಸಾಹಿತ್ಯ ಸೇರಿದಂತೆ 60 ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದ ಸನದಿ ಪದವಿ ನಂತರ ಪ್ರೌಢಶಾಲೆಯಲ್ಲಿ ಶಿಕ್ಷಕನಾಗಿ  ವೃತ್ತಿಜೀವನ ನಡೆಸಿದ್ದು ರಾಜ್ಯ ಸರ್ಕಾರದ ಮೀಣ ಅಭಿವೃದ್ಧಿ ಇಲಾಖೆಯಲ್ಲಿ ಸಮಾಜ ಶಿಕ್ಷಣಾಧಿಕಾರಿಯಾಗಿ, ವಾರ್ತಾ ಇಲಾಖೆಗೆ ಸೇರಿ (ಬೆಂಗಳೂರು) ಪಂಚಾಯತ್ ರಾಜ್‌ ಪತ್ರಿಕೆಯ ಸಹಾಯಕ ಸಂಪಾದಕರಾಗಿ, ಕಲಬುರ್ಗಿಗೆ ವರ್ಗಾವಣೆಗೊಂಡು ವಿಭಾಗದ ಕ್ಷೇತ್ರ ಪ್ರಚಾರಾಧಿಕಾರಿಯಾಗಿ, ಅಹಮದಾಬಾದಿಗೆ ವರ್ಗವಾಗಿ ಪಶ್ಚಿಮ ವಲಯದ ಪ್ರದರ್ಶನಾಧಿಕಾರಿಯಾಗಿ, ಮುಂಬೈ ಆಕಾಶವಾಣಿಯ ಕುಟುಂಬ ಕಲ್ಯಾಣ ಅಧಿಕಾರಿಯಾಗಿ, ವಿಸ್ತರಣಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.,
ಸನದಿ 'ಆಶಾಕಿರಣ', 'ನೆಲಸಂಪಿಗೆ', 'ತಾಜಮಹಲು', 'ಹಿಮಗಿರಿಯ ಮುಡಿಯಲ್ಲಿ'ಯಿಂದ ಹಿಡಿದು 'ನಮ್ಮ ಪ್ರೀತಿ'ಯವರೆಗೆ 18 ಕವನ ಸಂಕಲನಗಳು ಮತ್ತು THIRSTY WORDS ಎಂಬ ಆಂಗ್ಲ ಕವನ ಸಂಕಲನವನ್ನೂ ಪ್ರಕಟಿಸಿದ್ದು ಅವರ ವೈವಿದ್ಯಮಯ ಸಾಹಿತ್ಯ ಸೇವೆಗಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಪಂಪ ಪ್ರಶಸ್ತಿ, ಸಿರಿಗನ್ನಡ ಪ್ರಶಸ್ತಿ, ಸಂದೇಶ ಪ್ರಶಸ್ತಿ, , ಕಾರಂತ ಸಾಹಿತ್ಯ ಪ್ರಶಸ್ತಿ, ಗುರು ನಾರಾಯಣ ಪ್ರಶಸ್ತಿ ಮತ್ತು ಕವಿಬೇಂದ್ರೆ ಟ್ರಸ್ಟ್ ಪ್ರಶಸ್ತಿಗಳು ಲಭಿಸಿದ್ದವು. 
ಹಲವು ಕನ್ನಡ ಕೃತಿಗಳ ಭಾಷಾಂತರ್ಕಾರರಾಗಿರುವ ಸನದಿ ಅವರ ಭಾಷ್ಂತರ ಕಾರ್ಯವನ್ನು ಮೆಚಿ ಗಿ ಕುವೆಂಪು ಭಾಷಾ ಭಾರತಿ (ಅನುವಾದ ಅಕಾಡೆಮಿ) ಮತ್ತು ಮಕ್ಕಳ ಸಾಹಿತ್ಯಕ್ಕೆ ನೀಡಿದ ಕೊಡುಗೆಗಳಿಗಾಗಿ ಬಾಲ ವಿಕಾಸ್ ಅಕಾಡೆಮಿ ಪ್ರಶಸ್ತಿ ಸಹ ಅವರಿಗೆ ಒಲಿದಿದ್ದವು.ಕರ್ನಾಟಕ ವಿಶ್ವವಿದ್ಯಾಲಯವು 2014 ರಲ್ಲಿ ಗೌರವ ಡಾಕ್ಟರೇಟ್ ಪದವಿ ನೀಡಿದ್ದರೆ  ಕೆನಡಾದಲ್ಲಿ 2013ರಲ್ಲಿ ನಡೆಇದ್ದ ಟೊರೊಂಟೊ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅವರನ್ನು ಮಲೇಷಿಯಾ, ಯುಎಇ ಮತ್ತು ಅಮೆರಿಕಾದಲ್ಲಿ ಕನ್ನಡ ಸಂಸ್ಥೆಗಳು ಆಹ್ವಾನಿಸಿ ಗೌರವಿಸಲಾಗಿತ್ತು.
ಗಣ್ಯರ ಸಂತಾಪ
ಹಿರಿಯ ಸಾಹಿತಿ ಸನದಿಯವರ ನಿಧನಕ್ಕೆ ಕನ್ನಡ ಸಾಹಿತ್ಯ ಲೋಕದ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.ಸಾಹಿತಿ ಡಾ. ಸರಜೂ ಕಾಟ್ಕರ,  ಯ.ರು. ಪಾಟೀಲ,, ಹಿರಿಯ ಸಾಹಿತಿ ಚಂದ್ರಕಾಂತ ಪೋಕಳೆ, ಡಾ. ರಾಮಕೃಷ್ಣ ಮರಾಠೆ, ಸಾಹಿತಿ ರವಿ ಕೋಟಾರಗಸ್ತಿ, ಶಿಕ್ಷ ಕ, ಸಾಹಿತಿ ಶಿವರಾಯ ಏಳುಕೋಟಿ, ಉಪನ್ಯಾಸಕ, ಸಾಹಿತಿ ಡಾ. ಎಸ್‌.ಎಸ್‌. ಅಂಗಡಿ ಮೊದಲಾದವರು ಸನದಿಯವರ ಕೊಡುಗೆಗಳನ್ನು ಸ್ಮರಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Video: ದೆಹಲಿಗೆ ಬಂದಿಳಿದ ರಷ್ಯಾ ಅಧ್ಯಕ್ಷ ಪುಟಿನ್; ಖುದ್ದು ಪಾಲಂ ಏರ್​​ಪೋರ್ಟ್​​ಗೆ ತೆರಳಿ ಸ್ವಾಗತಿಸಿದ ಪ್ರಧಾನಿ ಮೋದಿ

'ಭರವಸೆ ಈಡೇರಿಸಲು ಸಾಧ್ಯವಾಗಲಿಲ್ಲ.. ಸಮಸ್ಯೆ ಬಗೆಹರಿಸಲು ಪ್ರಯತ್ನ': IndiGo ಸಿಇಒ ವಿಷಾದ

ದ್ವೇಷ ಭಾಷಣ, ದ್ವೇಷ ಅಪರಾಧಗಳ(ಪ್ರತಿಬಂಧಕ) ವಿಧೇಯಕ ಸೇರಿ 8 ಮಸೂದೆಗಳಿಗೆ ಸಚಿವ ಸಂಪುಟ ಅನುಮೋದನೆ

News headlines 04-12-2025| ದರ್ಶನ್ ಇರುವ ಸೆಲ್ ಗೆ ಟಿವಿ ಭಾಗ್ಯ!; ಮಂಡ್ಯ: ಮಸೀದಿಗೆ ನುಗ್ಗಲು ಯತ್ನಿಸಿದ ಹನುಮ ಮಾಲಾಧಾರಿಗಳು; ಜಾನುವಾರು ಹತ್ಯೆ ಪ್ರತಿಬಂಧಕ ಸೇರಿ 8 ವಿಧೇಯಕಕ್ಕೆ ಸಂಪುಟ ಅನುಮೋದನೆ; 2ನೇ ಪೋಕ್ಸೋ ಪ್ರಕರಣದಲ್ಲೂ ಮುರುಘಾ ಶ್ರೀ ಖುಲಾಸೆ

ಎಸ್‌ಐಆರ್ ಕರ್ತವ್ಯಕ್ಕೆ ಹೆಚ್ಚುವರಿ ಸಿಬ್ಬಂದಿ ನಿಯೋಜನೆಗೆ ರಾಜ್ಯಗಳಿಗೆ ಸುಪ್ರೀಂ ನಿರ್ದೇಶನ; ಒತ್ತಡ ಕಡಿಮೆ ಮಾಡಲು ಆದೇಶ

SCROLL FOR NEXT