ಉಡುಪಿ: ಕಾಂಗ್ರೆಸ್ ಬೆಂಬಲಿಗರ ಮನೆ ಮೇಲೆ ಐಟಿ ದಾಳಿ 
ರಾಜ್ಯ

ಉಡುಪಿ: ಕಾಂಗ್ರೆಸ್ ಬೆಂಬಲಿಗರ ಮನೆ ಮೇಲೆ ಐಟಿ ದಾಳಿ

ಚುನಾವಣೆ ಸಮಯದಲ್ಲಿ ಮನೆಯಲ್ಲಿ ಅಕ್ರಮವಾಗಿ ಹಣ ಇರಿಸಿಕೊಂಡಿದ್ದಾರೆನ್ನುವ ಮಾಹಿತಿ ಮೇರೆಗೆ ಉಡುಪಿ ಜಿಲ್ಲೆಯ ಇಬ್ಬರು ಕಾಂಗ್ರೆಸ್ ಬೆಂಬಲಿಗರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಉಡುಪಿ: ಚುನಾವಣೆ ಸಮಯದಲ್ಲಿ ಮನೆಯಲ್ಲಿ ಅಕ್ರಮವಾಗಿ ಹಣ ಇರಿಸಿಕೊಂಡಿದ್ದಾರೆನ್ನುವ ಮಾಹಿತಿ ಮೇರೆಗೆ ಉಡುಪಿ ಜಿಲ್ಲೆಯ ಇಬ್ಬರು ಕಾಂಗ್ರೆಸ್ ಬೆಂಬಲಿಗರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಉಡುಪಿ-ಚಿಕ್ಕಮಗಳೂರು ಮೈತ್ರಿ ಅಭ್ಯರ್ಥಿಯಾದ ಪ್ರಮೋದ್ ಮದ್ವರಾಜ್ ಬೆಂಬಲಿಗರೆನ್ನಲಾದ ಉದ್ಯಾವರ ನಿವಾಸಿ  ಫೈನಾನ್ಸ್ ಮ್ಯಾನೇಜರ್ ಕಟ್ಟೆ ಗುಡ್ಡೆ ಸದಾಶಿವ್ ಹಾಗೂ ಪಿತ್ರೋಡಿ ನಿವಾಸಿ ಲಕ್ಷ್ಮಣ ಸಂಪಿಗೆ ನಗರ ಎನ್ನುವವರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಸದಾಶಿವ ಅವರ ಮನೆಯಲ್ಲಿ ಕೆಲ ಗಂಟೆಗಳ ಕಾಲ ದಾಕಲೆ ಪರಿಶೀಲನೆ ನಡೆಸಿದ್ದ ಬಳಿಕ ಅವರನ್ನು ಐಟಿ ಕಛೇರಿಗೆ ಕರೆಸಿ ವಿಚಾರಣೆ ನಡೆಸಿದರೆ ಲಕ್ಷ್ಮಣ ಅವರ ಮನೆ ಶೋಧನೆ ಮಾಡಿದ್ದಾರೆ.
ಇದರ ನಡುವೆ ಶುಕ್ರವಾರ ಬೆಳಿಗ್ಗೆ ಕಟಪಾಡಿ-ಶಿರ್ವ ರಸ್ತೆಯಲ್ಲಿ ದಾಖಲೆಗಳಿಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ 1,25,690 ರು. ನಗದನ್ನು ಫ್ಲೈಯಿಂಗ್ ಸ್ಕ್ವಾಡ್ ತಂಡ ವಶಕ್ಕೆ ಪಡೆದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಧಮ್ ಇದ್ರೆ ನನ್ನ ಕೊಲ್ಲಿ.. ಕನಿಷ್ಠ 1 ಸಾವಿರ ಕ್ಷಿಪಣಿಗಳು ಲೋಡ್ ಆಗಿ ನಿಂತಿವೆ': ಇರಾನ್ ಗೆ Donald Trump ಎಚ್ಚರಿಕೆ

ಭಾರತ–ನ್ಯೂಜಿಲ್ಯಾಂಡ್ ಸಂಬಂಧ ಕಾರ್ಯತಂತ್ರ ಪಾಲುದಾರಿಕೆಗೆ ಉನ್ನತಿ; 5 ವರ್ಷಗಳಲ್ಲಿ 35,000 ಕೋಟಿ ರೂ. ವ್ಯಾಪಾರದ ಗುರಿ

ಕದನ ವಿರಾಮ ಅಂತ್ಯ; ಹೊಸ ಮಾತುಕತೆಗೆ ಡೊನಾಲ್ಡ್ ಟ್ರಂಪ್ ಒಪ್ಪಿಗೆ – 'ಶರಣಾಗುವುದಿಲ್ಲ' ಎಂದ ಇರಾನ್

ಬೆಂಗಳೂರು: ತಾಯಿ, ಅಜ್ಜಿ, ಮಾವನನ್ನು ಕೊಂದು ಆರೋಪಿ ಆತ್ಮಹತ್ಯೆ!

ಪ್ರಿಯಾಂಕ್ ಖರ್ಗೆ RSS ಸಚಿವರು- ಪರಮೇಶ್ವರ್ 'ಗೊತ್ತಿಲ್ಲ' ಸಚಿವರು: ಶೋಭಾ ಕರಂದ್ಲಾಜೆ