ಮೊಹಮ್ಮದ್ ನಲಪಾಡ್ 
ರಾಜ್ಯ

ಆರ್​ಸಿಬಿ ಪಂದ್ಯದ ವೇಳೆ ಮೊಹಮ್ಮದ್ ನಲಪಾಡ್ 'ಚೌಕಿದಾರ್ ಚೋರ್ ಹೈ' ಘೋಷಣೆ, ವಿಡಿಯೋ ವೈರಲ್!

ಉದ್ಯಮಿಯೊಬ್ಬರ ಮಗನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಜೈಲಿಗೆ ಹೋಗಿ ಬಂದಿದ್ದ ಶಾಂತಿನಗರದ ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್...

ಬೆಂಗಳೂರು: ಉದ್ಯಮಿಯೊಬ್ಬರ ಮಗನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಜೈಲಿಗೆ ಹೋಗಿ ಬಂದಿದ್ದ ಶಾಂತಿನಗರದ ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಇದೀಗ ಆರ್​ಸಿಬಿ ಪಂದ್ಯದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತಮ್ಮ ಬೆಂಬಲಿಗರೊಂದಿಗೆ ಸೇರಿಕೊಂಡು ಚೌಕಿದಾರ್ ಚೋರ್ ಹೈ ಎಂದು ಘೋಷಣೆ ಕೂಗಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಐಪಿಎಲ್ ಪಂದ್ಯದ ವೇಳೆ ತಂಡವನ್ನು ಹುರಿದುಂಬಿಸುವ ಬದಲು ಗ್ಯಾಲರಿಯಲ್ಲಿ ತಮ್ಮ ಬೆಂಬಲಿಗರೊಂದಿಗೆ ಚೌಕಿದಾರ್ ಚೋರ್ ಹೈ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆ ಕೂಗಿದ್ದಾರೆ.
ಆರ್​ಸಿಬಿ ಪಂದ್ಯದ ವೇಳೆ ಕ್ರೀಡಾಭಿಮಾನ ಪ್ರದರ್ಶಿಸುವ ಬದಲು ಮೋದಿ ವಿರುದ್ಧ ಘೋಷಣೆ ಕೂಗುವ ಮೂಲಕ ತಮ್ಮ ಉದ್ಧಟನ ಪ್ರದರ್ಶಿಸಿದ್ದಾರೆ. ಸದ್ಯ ವಿಡಿಯೋ ವೈರಲ್ ಆಗಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕ್ಷೇತ್ರ ಪುನರ್ ವಿಂಗಡಣೆ, ಮಹಿಳಾ ಮೀಸಲಾತಿ ಸೇರಿ 3 ಮಸೂದೆಗಳ ಕುರಿತು ಚರ್ಚೆಗೆ 15 ಗಂಟೆ ನಿಗದಿ; ನಾಳೆ ಸಂಜೆ 4 ಗಂಟೆಗೆ ಮತದಾನ..!

ನಾಳೆ ರಾಜ್ಯಸಭೆ ಉಪಸಭಾಪತಿ ಚುನಾವಣೆ, ವಿಪಕ್ಷಗಳ ಬಹಿಷ್ಕಾರ: ಮೂರು ಕಾರಣ ಕೊಟ್ಟ ಜೈರಾಮ್ ರಮೇಶ್!

ಕ್ಷೇತ್ರ ಪುನರ್ವಿಂಗಡಣೆ ಕುರಿತು ವದಂತಿಗಳ ಹರಡದಿರಿ: ವಿಪಕ್ಷಗಳಿಗೆ ಕಿರಣ್ ರಿಜಿಜು ಮನವಿ

ಇರಾನ್ ವಿರುದ್ಧ ಪ್ರತೀಕಾರ: ರಷ್ಯಾ ತೈಲ ವಿನಾಯಿತಿ ವಿಸ್ತರಣೆ ಇಲ್ಲ ಎಂದ ಅಮೆರಿಕಾ; ಜಾಗತಿಕ ಮಾರುಕಟ್ಟೆಗೆ ಶಾಕ್, ಭಾರತದ ಮೇಲೂ ಪರಿಣಾಮ ಸಾಧ್ಯತೆ..!

ಹಾರ್ಮುಜ್ ಜಲಸಂಧಿ ದಿಗ್ಬಂಧನ: ಹಿಂದೆ ಸರಿಯದಿದ್ದರೆ ಗಲ್ಪ್ ವ್ಯಾಪಾರ ಸಂಪೂರ್ಣ ಅಸ್ತವ್ಯಸ್ತ; ಅಮೆರಿಕಾಗೆ ಇರಾನ್ ಖಡಕ್ ಎಚ್ಚರಿಕೆ..!

SCROLL FOR NEXT