ಬೆಂಗಳೂರು: ಮನೆಗೆ ನುಗ್ಗಿದ ಟಿಪ್ಪರ್ ಲಾರಿ, ಸ್ಥಳದಲ್ಲೇ ಇಬ್ಬರ ಸಾವು 
ರಾಜ್ಯ

ಬೆಂಗಳೂರು: ಮನೆಗೆ ನುಗ್ಗಿದ ಟಿಪ್ಪರ್ ಲಾರಿ, ಸ್ಥಳದಲ್ಲೇ ಇಬ್ಬರ ಸಾವು

ಟಿಪ್ಪರ್ ಲಾರಿಯೊಂದು ಮನೆಗೆ ನುಗ್ಗಿದ ಪರಿಣಾಮ ಸ್ಥಳದಲ್ಲೇ ಇಬ್ಬರು ದಾರುಣ ಸಾವಿಗೀಡಾದ ಘಟನೆ ಬೆಂಗಳುರು ಹೊರವಲಯದ ಹೊಸಕೋಟೆ ಬೋಧನಹೊಸಹಳ್ಳಿಉಅಲ್ಲಿ ನಡೆದಿದೆ.

ಬೆಂಗಳೂರು: ಟಿಪ್ಪರ್ ಲಾರಿಯೊಂದು ಮನೆಗೆ ನುಗ್ಗಿದ ಪರಿಣಾಮ ಸ್ಥಳದಲ್ಲೇ ಇಬ್ಬರು ದಾರುಣ ಸಾವಿಗೀಡಾದ ಘಟನೆ ಬೆಂಗಳುರು ಹೊರವಲಯದ ಹೊಸಕೋಟೆ ಬೋಧನಹೊಸಹಳ್ಳಿಉಅಲ್ಲಿ ನಡೆದಿದೆ.
ಶನಿವಾರ ಬೆಳಗಿನ ಜಾವ ಸಂಭವಿಸಿದ ದುರಂತದಲ್ಲಿ ರಘ(26) ಹಾಗೂ ಮಂಜುನಾಥ್ (45)  ಎಂಬುವವರು ಸಾವನ್ನಪ್ಪಿದ್ದಾರೆ. 
ಚಿಕ್ಕತಿರುಪತಿ ಕಡೆಯಿಂದ ಬೆಂಗಳೂರಿಗೆ ಎಮ್.ಸ್ಯಾಂಡ್ ತುಂಬಿಕೊಂಡು ಬರುತ್ತಿದ್ದ ಟಿಪ್ಪರ್ ಲಾರಿ ಬೋಧನಹೊಸಹಳ್ಳಿ ಗ್ರಾಮದ ರಸ್ತೆ ಬದಿಯಲ್ಲಿದ್ದ ಮನೆಗೆ ನುಗ್ಗಿದೆ. ಬೆಳಗಿನ ಜಾವ ಸುಖನಿದ್ರೆಯಲ್ಲಿದ್ದಾಗಲೇ ಈ ದುರಂತ ನಡೆದಿದ್ದು ಲಾರಿ ನುಗ್ಗಿದ ಪರಿಣಾಮ ಮನೆ ಮೇಲ್ಛಾವಣಿ ಮನೆಯಲ್ಲಿ ಮಲಗಿದ್ದವರ ಮೇಲೆ ಕುಸಿದಿದೆ. 
ಘಟನೆ ಮಾಹಿತಿ ಪಡೆದ ತಿರುಮಲಶಟ್ಟಿಹಳ್ಳಿ ಪೋಲೀಸರು ಸ್ಥಳಕ್ಕಾಗಮಿಸಿ ಕ್ರೇನ್ ಸಹಕಾರದಿಂದ ಲಾರಿಯನ್ನು ಬದಿಗೆ ಸರಿಸಿದ್ದು ಮೃತದೇಹವನ್ನು ಹೊರತೆಗೆದಿದ್ದಾರೆ.
ಗ್ರಾಮದ ತಿರುವುನಲ್ಲಿ ಸಾಕಷ್ಟು ಮನೆಗಳಿದ್ದು ಲಾರಿ ಚಾಲಕರು ಸ್ವಲ್ಪ ಎಚ್ಚರ ತಪ್ಪಿದರೆ ಮನೆಗೆ ನುಗ್ಗಿ ಅಪಘಾತವಾಗುತ್ತದೆ. ಹೆದ್ದಾರಿಯಲ್ಲಿ ಸಂಚರಿಸುವ ಲಾರಿಗೆ ವೇಗ ನಿಯಂತ್ರಣವಿಲ್ಲದಿರುವುದು ಇಂತಹಾ ಘಟನೆಗೆ ಕಾರಣವಾಗಿದ್ದು ಪೋಲೀಸರು ಸೂಕ್ತ ಎಚ್ಚರಿಕೆವಹಿಸಬೇಕೆಂದು ಸ್ಥಳೀಯರು ಆಗ್ರ್ಹಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಬ್ರೇಕ್ ಫಾಸ್ಟ್ ಮೀಟಿಂಗ್: ಯಾವುದೇ ನೋವಿಲ್ಲ, ಮನಃಪೂರ್ವಕವಾಗಿ ರಾಜೀನಾಮೆ ನೀಡುತ್ತಿದ್ದೇನೆ; ಸಿದ್ದರಾಮಯ್ಯ ಘೋಷಣೆ

ಮೋದಿಯವರ ಇತ್ತೀಚಿನ ಫಾರಿನ್ ಟ್ರಿಪ್ಪಿನಿಂದ ಭಾರತಕ್ಕೇನು ಲಾಭ? (ಹಣಕ್ಲಾಸು)

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: 4 ಇರಾನ್ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕಾ, ಹೋರ್ಮುಜ್‌ನಲ್ಲಿ ಉದ್ವಿಗ್ನತೆ ತೀವ್ರ..!

ಕ್ಲೈಮ್ಯಾಕ್ಸ್‌ ಹಂತಕ್ಕೆ ಕುರ್ಚಿ ಕದನ: ಸಿಎಂ ಸ್ಥಾನಕ್ಕೆ ಡಿಕೆ ಶಿವಕುಮಾರ್ ಹೆಸರು ಫೈನಲ್?, ಮೇ 31ಕ್ಕೆ ಪ್ರಮಾಣವಚನ ಸಾಧ್ಯತೆ

ಸಿದ್ದು ನಿರ್ಗಮನದ ಬಳಿಕ ಅಸಮಾಧಾನ ತಣಿಸಲು ಕಾಂಗ್ರೆಸ್ ಮಾಸ್ಟರ್‌ಪ್ಲ್ಯಾನ್: 4 DCM ಹುದ್ದೆ ಸೃಷ್ಟಿಗೆ ಚಿಂತನೆ, ಜಮೀರ್, ಪ್ರಿಯಾಂಕ್ ಖರ್ಗೆ, ಎಂಬಿ ಪಾಟೀಲ್ ಹೆಸರು ಫೈನಲ್?

SCROLL FOR NEXT