ರಾಜ್ಯ

ಬೆಂಗಳೂರು: ಫೇಸ್ ಬುಕ್ ನಕಲಿ ಸ್ನೇಹಿತರಿಂದ ವಂಚನೆ, ಚಿನ್ನಾಭರಣ ಕಳವು

Nagaraja AB

ಬೆಂಗಳೂರು: ಫೇಸ್ ಬುಕ್ ನಲ್ಲಿ ಪರಿಚಯವಾದ  ಅಪರಿತ ವ್ಯಕ್ತಿಗಳು  ಬಿಯರ್ ನಲ್ಲಿ  ಮತ್ತು ಬರುವ ಔಷಧ ಬೆರೆಸಿ ಪ್ರಜ್ಞೆ ತಪ್ಪಿಸಿ  ವ್ಯಕ್ತಿಯೊಬ್ಬರ ಮನೆಯಿಂದ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.

ಬನಶಂಕರಿ ಮೂರನೇ ಹಂತದ ರಂಗಪ್ಪ ಲೇಔಟ್ ನ ರಮೇಶ್ ಹೆಚ್ ಹೀಗೆ ಚಿನ್ನಾಭರಣ ಕಳೆದುಕೊಂಡಿದ್ದು, ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಗೆ ದೂರು ನೀಡಿದ್ದಾರೆ.ಅಪರಿಚಿತರು ಫೇಸ್ ಬುಕ್ ನಲ್ಲಿ  ಒಂದು ತಿಂಗಳ ಹಿಂದೆ ಪರಿಚಿತರಾದರು ಎಂಬ ಬಗ್ಗೆ ದೂರಿನಲ್ಲಿ ತಿಳಿಸಲಾಗಿದೆ.
ಇನ್ಸೂರೆನ್ಸ್ ಕಂಪನಿಯಲ್ಲಿ ಹೂಡಿಕೆ ಮಾಡಲು ಆಸಕ್ತಿ ಹೊಂದಿದ್ದ ರಮೇಶ್ ಅವರನ್ನು ನಂಬಿಸಿದ ಅಪರಿಚಿತರು ಏಪ್ರಿಲ್ 20 ರಂದು ಭೇಟಿ  ಮಾಡಲು ಹೇಳಿದ್ದಾರೆ. ಅಂದು ಸುಮಾರು 7 ಗಂಟೆ ಸುಮಾರಿನಲ್ಲಿ ಅನ್ನಪೂರ್ಣೇಶ್ವರಿ ಕಾನ್ವೇಷನ್ ಹಾಲ್  ಬಳಿಗೆ ಬಂದಿದ್ದು, ಮದ್ಯ ಸೇವಿಸಲು ನಿರ್ಧರಿಸಿದ್ದಾರೆ. ನಂತರ  ಬಿಯರ್ ನ್ನು ಖರೀದಿಸಿದ್ದು, ರಮೇಶ್ ಅವರ ಮನೆಗೆ ಹೋಗಿದ್ದಾರೆ. ರಮೇಶ್ ಅಡುಗೆ ಮನೆಯೊಳಗೆ ಹೋದಾಗ ಅಪರಿಚತರು ಲೋಟಗಳಲ್ಲಿ ಮತು ಬೆರಿಸಿದ್ದಾರೆ. ಇದನ್ನು ಕುಡಿದ ರಮೇಶ್ ಪ್ರಜ್ಞೆ ತಪ್ಪಿದ್ದಾನೆ.
ಏಪ್ರಿಲ್ 21 ರಂದು ಬೆಳಗ್ಗೆ 6-30ಕ್ಕೆ ಏದ್ದಾಗ ಅಪರಿಚಿತರು ನಾಪತ್ತೆಯಾಗಿದ್ದರು. ನಂತರ ಅಲ್ಮೇರಾ ಪರಿಶೀಲಿಸಿದಾಗ ಚಿನ್ನಾಭರಣ ಕಳವು ಆಗಿರುವುದು ಕಂಡುಬಂದಿತ್ತು. ಎರಡು ಚಿನ್ನದ ಚೈನ್ , ಎರಡು ಉಂಗುರ, ಕೆಲ ಬೆಳ್ಳಿ ವಸ್ತುಗಳು, ವಾಚ್, ಮೊಬೈಲ್ ಪೋನ್ ನೊಂದನ್ನು ಕಳ್ಳತನ ಮಾಡಲಾಗಿದೆ ಎಂದು ಅವರು ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
SCROLL FOR NEXT