ವಿಶ್ವ ದಾಖಲೆ ಬರೆದ ಕಾರವಾರದ ಯುಕೆಜಿ ಬಾಲಕ
ಕಾರವಾರ: ಕಾರವಾರ ಮೂಲದ 5 ವರ್ಷದ ಬಾಲಕ ಸ್ಪಿನ್ನಿಂಗ್ ಸ್ಕೇಟಿಂಗ್ ನಲ್ಲಿ ವಿಶ್ವದಾಖಲೆ ನಿರ್ಮಾಣ ಮಾಡಿದ್ದಾನೆ.
ಕಾರವಾರದ ಕೈಗಾ ರೋಲರ್ ಸ್ಕೇಟಿಂಗ್ ಕ್ಲಬ್ ನ ಸದಸ್ಯನಾಗಿರುವ ಐದು ವರ್ಷದ, ಯುಕೆಜಿ ವಿದ್ಯಾರ್ಥಿ ಮೊಹಮದ್ ಸಾಕಿಬ್ ಬರೊಬ್ಬರಿ 25 ನಿಮಿಷಗಳ ಸ್ಪಿನ್ನಿಂಗ್ ಸ್ಕೇಟಿಂಗ್ ಮಾಡುವ ಮೂಲಕ ವಿಶ್ವದಾಖಲೆ ನಿರ್ಮಾಣ ಮಾಡಿದ್ದಾನೆ.
ನಗರದ ಖಾಸಗಿ ಹೋಟೆಲ್ ನಲ್ಲಿ ಭಾನುವಾರ ಈ ದಾಖಲೆಯ ಪ್ರದರ್ಶನ ನಡೆಯಿತು. ರೆಕಾರ್ಡ್ ಹೋಲ್ಡರ್ಸ್ ರಿಪಬ್ಲಿಕ್ ಯುಕೆಯ ಪ್ರಸಾದ ಗಾವಡೆ, ಹೈರೇಂಜ್ ಬುಕ್ ಆಫ್ ರೆಕಾರ್ಡ್ಸ್ ನ ಬಸವರಾಜ್ ಜಿ., ಏಷ್ಯನ್ ಬುಕ್ ಆಫ್ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ನ ಹರೀಶ ಈ ಸಂದರ್ಭದಲ್ಲಿ ಹಾಜರಿದ್ದು, ದಾಖಲೆಯಾಗಿದೆ ಎಂದು ಘೊಷಿಣೆ ಮಾಡಿದರು. ಇದೇ ವೇಳೆ ವಿಶ್ವ ದಾಖಲೆ ನಿರ್ಮಾಣ ಮಾಡಿದ ಸಾಕಿಬ್ ಗೆ ಪ್ರಮಾಣಪತ್ರ ಕೂಡ ವಿತರಿಸಿದರು.
ಭಾನುವಾರ ಕಾಲಿಗೆ ಸ್ಕೇಟಿಂಗ್ ಕಟ್ಟಿಕೊಂಡು ತನ್ನ ಕಾಲನ್ನು 180 ಡಿಗ್ರಿ ಅಗಲಿಸಿ ಮುಮ್ಮುಖ ಬಾಗಿ ಎರಡೂ ಕೈಗಳನ್ನು ನೆಲಕ್ಕೆ ಊರಿ ನೂರು ಸುತ್ತುಗಳನ್ನು ಸಾಕಿಬ್ ಹೊಡೆದ. ಅಂತೆಯೇ ಈ ದಾಖಲೆಯ ಪ್ರದರ್ಶನವನ್ನು ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದು, ಅದನ್ನು ಲಿಮ್ಕಾ ಬುಕ್ ಆಫ್ ರೆಕಾರ್ಡ್ ಗೆ ಕಳಿಸಲಾಗುವುದು ಎಂದು ಬಾಲಕನ ತಂದೆ ಮೊಹಮದ್ ರಫೀಕ್, ತಾಯಿ ಸಬೀನಾ ತಿಳಿಸಿದ್ದಾರೆ.
ಈ ಬಗ್ಗೆ ಹೆಮ್ಮೆಯಿಂದ ಮಾತನಾಡಿರುವ ಸಾಕಿಬ್ ಪೋಷಕರು, 'ಎರಡನೇ ವಯಸ್ಸಿನಿಂದಲೇ ಸಾಕಿಬ್ ದಿನಕ್ಕೆ ಎರಡು, ಮೂರು ಗಂಟೆ ಲಿಂಬೋ ಸ್ಕೇಟಿಂಗ್ ಅನ್ನು ತರಬೇತುದಾರ ದಿಲೀಪ್ ಹಣಬರ ಮೂಲಕ ಕಲಿಯುತ್ತಿದ್ದ. ಅವನ ಪರಿಶ್ರಮದಿಂದಲೇ ಈ ದಾಖಲೆ ಸಾಧ್ಯವಾಯಿತು ಎಂದು ಸಾಕಿಬ್ ಪೋಷಕರಾದ ಮೊಹಮದ್ ರಫೀಕ್, ತಾಯಿ ಸಬೀನಾ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics