ರಾಜ್ಯ

ಕಳಪೆ ರಸ್ತೆಯಿಂದ ಅಪಘಾತವಾಗಿ ಹಾನಿಯಾದರೆ ಬಿಬಿಎಂಪಿಯಿಂದ ಪರಿಹಾರ ಕೇಳಿ:ಹೈಕೋರ್ಟ್ ಆದೇಶ

Sumana Upadhyaya
ಬೆಂಗಳೂರು: ನಗರದಲ್ಲಿನ ಕಳಪೆ ರಸ್ತೆಯ ಬಗ್ಗೆ ಹೈಕೋರ್ಟ್ ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.
ರಸ್ತೆಯ ಅಥವಾ ಫುಟ್ ಪಾತ್ ನ ಕಳಪೆ ನಿರ್ವಹಣೆಯಿಂದ ನಾಗರಿಕರಿಗೆ ಏನೇ ತೊಂದರೆ ಆದರೂ ಅದಕ್ಕೆ ಬಿಬಿಎಂಪಿಯೇ ಜವಾಬ್ದಾರಿ, ಪಾಲಿಕೆಯೇ ಪರಿಹಾರ ನೀಡಬೇಕೆಂದು ಆದೇಶ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಒಕಾ ಮತ್ತು ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರನ್ನೊಳಗೊಂಡ ವಿಭಾಗೀಯ ಪೀಠ, ನಾಗರಿಕರು ತೆರಿಗೆ ಕಟ್ಟಿದ ನಂತರವೂ ಕಳಪೆ ಕಾಮಗಾರಿಯ ರಸ್ತೆ ಮತ್ತು ಫುಟ್ ಪಾತ್ ಗಳಿಂದ ಸಾಕಷ್ಟು ಸಾವು-ನೋವುಗಳನ್ನು ಎದುರಿಸಬೇಕಾದ ಸ್ಥಿತಿಯಿದೆ. ಕಳಪೆ ರಸ್ತೆಯಿಂದ ಅಪಘಾತವಾಗಿ ಗಾಯಗೊಂಡರೆ ಅದರ ಪರಿಹಾರವನ್ನು ಬಿಬಿಎಂಪಿಯಲ್ಲಿ ನಾಗರಿಕರು ಕೇಳಬಹುದು ಎಂದು ಹೇಳಿದೆ.
ಬಿಬಿಎಂಪಿ ವ್ಯಾಪ್ತಿಯ ರಸ್ತೆಗಳು ಹೊಂಡ ಗುಂಡಿಗಳಿಂದ ಕೆಟ್ಟು ಹೋಗಿದ್ದರೆ ಮತ್ತು ಫುಟ್ ಪಾತ್ ಗಳು ಹಾಳಾಗಿದ್ದರೆ ತಪಾಸಣೆ ಮಾಡಿ ಬಿಬಿಎಂಪಿಗೆ ವರದಿ ಸಲ್ಲಿಸುವಂತೆ ಸಂಚಾರಿ ಪೊಲೀಸರಿಗೆ ಹೈಕೋರ್ಟ್ ಇದೇ ಸಂದರ್ಭದಲ್ಲಿ ಆದೇಶ ನೀಡಿದೆ. 
SCROLL FOR NEXT