ರಾಜ್ಯ

ಆರ್ಥಿಕ ದುರ್ಬಲರಿಗೆ ಮೀಸಲು ಜಾರಿ ವಿಚಾರ: ರಾಜ್ಯ ಸರ್ಕಾರಕ್ಕೆ ಸುಪ್ರೀಂ ನೋಟೀಸ್

Raghavendra Adiga
ನವದೆಹಲಿ: ಇದಾಗಲೇ ಜಾರಿಯಲ್ಲಿರುವ ಮೀಸಲಾತಿಗೆ ಹೆಚ್ಚುವರಿಯಾಗಿ ಆರ್ಥಿಕವಾಗಿ ದುರ್ಬಲವಾಗಿರುವ ವರ್ಗಗಳಿಗೆ (ಇಡಬ್ಲ್ಯೂಎಸ್) ಶೇ 10 ರಷ್ಟು ಕೋಟಾವನ್ನು ಜಾರಿಗೆ ತರಬೇಕೆಂದು ಕೋರಿ ಸಲ್ಲಿಸಿದ ಮನವಿಗೆ ಉತ್ತರಿಸಲು ಸುಪ್ರೀಂ ಕೋರ್ಟ್ ಸೋಮವಾರ ಕರ್ನಾಟಕ ಹಾಗೂ ತಮಿಳುನಾಡು  ಸರ್ಕಾರಗಳಿಗೆ ಸೂಚನೆ ನೀಡಿದೆ.
ನ್ಯಾಯಮೂರ್ತಿಗಳಾದ ಎಸ್‌ಎ ಬೊಬ್ಡೆ ಮತ್ತು ಬಿ.ಆರ್. ಗವಾಯಿ ಅವರನ್ನೊಳಗೊಂಡ ನ್ಯಾಯಪೀಠವು ಎಲ್ಲಾ ರಾಜ್ಯಗಳಿಗೆ 103 ನೇ ಸಾಂವಿಧಾನಿಕ ತಿದ್ದುಪಡಿ ಕಾಯ್ದೆ 2019 ಅನ್ವಯವಾಗಲಿದೆ. ಇದು ಸರ್ಕಾರಿ ಉದ್ಯೋಗಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಇಡಬ್ಲ್ಯೂಎಸ್ ವರ್ಗಕ್ಕೆ ಶೇ 10 ರಷ್ಟು ಮೀಸಲಾತಿ ತರಲು ಇದು ಅನುಮೋದನೆ ನೀಡುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಕರ್ನಾಟಕ ಹಾಗೂ ತಮಿಳುನಾಡು ಎರಡೂ 2019 ರ ಸಾಂವಿಧಾನಿಕ ತಿದ್ದುಪಡಿ ಕಾಯ್ದೆಯನ್ನು ಇಲ್ಲಿಯವರೆಗೆ ಜಾರಿಗೆ ತಂದಿಲ್ಲ ಅಥವಾ ಜಾರಿಗೊಳಿಸಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ. ವಕೀಲ ಜಿ ಎಸ್ ಮಣಿ ಸಲ್ಲಿಸಿದ್ದ ಅರ್ಜಿಯಲ್ಲಿ ಎರಡು ರಾಜ್ಯಗಳು ಅದರ ಅನುಷ್ಠಾನಕ್ಕೆ ವಿಶೇಷ ನಿಬಂಧನೆಗಳನ್ನು ಮಾಡಬೇಕೆಂದು ಕೋರಿವೆ.
ಪರಿಶಿಷ್ಟ ಜಾತಿ (ಎಸ್‌ಸಿ), ಪರಿಶಿಷ್ಟ ಪಂಗಡ (ಎಸ್‌ಟಿ), ಹಿಂದುಳಿದ ವರ್ಗ (ಬಿ.ಸಿ) ಮತ್ತು ಅತ್ಯಂತ ಹಿಂದುಳಿದ ವರ್ಗಗಳಿಗೆ (ಎಂಬಿಸಿ) ಸೇರಿದ ಜನರಿಗೆ ಇದಾಗಲೇ ಅಸ್ತಿತ್ವದಲ್ಲಿರುವ ಕೋಟಾ ಪ್ರಯೋಜನಗಳಿಗೆ ತೊಂದರೆಯಾಗದಂತೆ ಇಡಬ್ಲ್ಯೂಎಸ್ ಮೀಸಲಾತಿಯನ್ನು ಜಾರಿಗೆ ತರಲಾಗಿದೆ ಎಂದು ಅದು ಹೇಳಿದೆ. ಎಸ್‌ಸಿ, ಎಸ್‌ಟಿ, ಒಬಿಸಿ  ಎಂಬಿಸಿಗಳಿಗೆ ತಮಿಳುನಾಡು ಶೇ 69 ರಷ್ಟು ಕೋಟಾ ನೀಡಿದರೆ, ಕರ್ನಾಟಕದಲ್ಲಿ ಮೀಸಲಾತಿ ಶೇಕಡಾ 70 ರಷ್ಟಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಕೆಲವು ರಾಜಕೀಯ ಕಾರಣಗಳಿಗಾಗಿ ತಮಿಳುನಾಡಿನ ಕೆಲವು ಪ್ರಾದೇಶಿಕ ಪಕ್ಷಗಳು ಇಡಬ್ಲ್ಯೂಎಸ್ಗೆ 10 ಶೇಕಡಾ ಮೀಸಲಾತಿಯನ್ನು ವಿರೋಧಿಸುತ್ತಿದ್ದಾರೆ.ರಾಜ್ಯದ ಆಡಳಿತ ಪಕ್ಷವೂ ಇದನ್ನು ಟೀಕಿಸುತ್ತಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
SCROLL FOR NEXT