ರಾಜ್ಯ

ಪ್ರವಾಹಕ್ಕೆ 12 ಬಲಿ; ರಾಷ್ಟ್ರೀಯ ವಿಪತ್ತು ಸ್ಥಿತಿ ಎಂದು ಘೋಷಿಸಲು ಪ್ರಧಾನಿಗೆ ದೇವೇಗೌಡರ ಆಗ್ರಹ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಎದುರಾಗಿರುವ ಜಲಸಂಕಷ್ಟವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ ಪರಿಹಾರ ಹಾಗೂ ಪುನರ್ವಸತಿಗೆ ...

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಎದುರಾಗಿರುವ ಜಲಸಂಕಷ್ಟವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ ಪರಿಹಾರ ಹಾಗೂ ಪುನರ್ವಸತಿಗೆ ನೆರವು ನೀಡಬೇಕೆಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಆಗ್ರಹಿಸಿದ್ದಾರೆ.

The flood situation in Karnataka has worsened.
I strongly urge @PMOIndia to declare the floods in Karnataka as National disaster of severe nature and extend additional support at the earliest.@narendramodi #KarnatakaFlood

— H D Devegowda (@H_D_Devegowda) August 9, 2019

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಇದು ಅತ್ಯಂತ ಭಯಾನಕ ಜಲಸಂಕಷ್ಟವಾಗಿದ್ದು, ಕರ್ನಾಟಕದ ಬಹುತೇಕ ಜಿಲ್ಲೆಗಳು ತೊಂದರೆಗೊಳಗಾಗಿವೆ. ಈ ಸ್ಥಿತಿಯಲ್ಲಿ ತೊಂದರೆಗೊಳಗಾಗಿರುವ ಜನ, ಜಾನುವಾರಗಳ ರಕ್ಷ ಣೆಗೆ ಸಮರೋಪಾದಿಯಲ್ಲಿ ಕೆಲಸ ನಡೆಯಬೇಕಾಗಿದೆ. ಅದಕ್ಕಾಗಿ ಇದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು ಹೇಳಿದ್ದಾರೆ.

ಕೃಷ್ಣಾ ನದಿಗೆ ಪ್ರವಾಹ ಆತಂಕ ಮೂಡಿಸಿದೆ. ಅತ್ಯಂತ ಸಣ್ಣ ನದಿ ಪಾತ್ರ ಹೊಂದಿರುವ ಮಲಪ್ರಭೆಯಲ್ಲಿ 1 ಲಕ್ಷ ಕ್ಯೂಸೆಕ್‌ ನೀರು ಬಂದಿದೆ.   ಮಳೆ ಪ್ರವಾಹದಿಂದಾಗಿ ಇದುವರೆಗೂ ಸುಮಾರು 12 ಮಂದಿ ಪ್ರಾ ಣ ಕಳೆದು ಕೊಂಡಿದ್ದಾರೆ ಎಂದು ಬಾಗಲಕೋಟೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಘೋಷಿಸಿದ್ದಾರೆ.

ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರು ಪರಿಹಾರವನ್ನು ಸಿಎಂ ಘೋಷಿಸಿದ್ದಾರೆ,  ಪ್ರವಾಹ ಪರಿಹಾರ ಕಾರ್ಯಗಳಿಗೆ ತಕ್ಷಣವೇ  100 ಕೋಟಿ ರು ಬಿಡುಗಡೆ ಮಾಡಲಾಗಿದೆ ಎಂದು ಹೇಳಿದ್ದಾರೆ. 

ಕೊಡಗು ಜಿಲ್ಲೆಯ ಭಾಗಮಂಡಲದ ಕೂರಂಗಾಲ ಗುಡ್ಡಗಾಡು ಪ್ರದೇಶದಲ್ಲಿ  ಗುಡ್ಡ ಕುಸಿತದಿಂದಾಗಿ ಒಂದೇ ಕುಟುಂಬದ ನಾಲ್ಕು ಮಂದಿ ಸಾವನ್ನಪ್ಪಿದ್ದು, ಒಬ್ಬರು ಕಾಣೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ಪ್ರವಾಹಕ್ಕೆ ಆರು ಮಂದಿ ಬಲಿಯಾಗದ್ದಾರೆ ಬೆಳಗಾವಿಯಲ್ಲಿರುವ 4,019 ಸರ್ಕಾರಿ ಕಟ್ಟಡಗಳಿಗೆ ಹಾನಿಯಾಗಿದೆ .

For any flood related emergencies and rescue work please contact the given control room numbers.#KarnatakaFloodspic.twitter.com/I51Fx3Zq5f

— CM of Karnataka (@CMofKarnataka) August 7, 2019

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್