ರಾಜ್ಯ

ಸರ್ಕಾರ, ಸಂತ್ರಸ್ತರ ನೆರವಿಗೆ ನಿಲ್ಲುವೆ : ಹೆಚ್.ಡಿ.ಕುಮಾರಸ್ವಾಮಿ

ರಾಜ್ಯ ಸರ್ಕಾರ ಪ್ರವಾಹ ಪರಿಸ್ಥಿತಿ ನಿಭಾಯಿಸುವಲ್ಲಿ ತನ್ನ ಪಾಲಿನ ಕೆಲಸ ಮಾಡುತ್ತಿದೆ. ಇಂತಹ ಸಂದರ್ಭದಲ್ಲಿ ನಾನು ರಾಜಕೀಯ ಮಾಡುವುದಿಲ್ಲ. ಕೇಂದ್ರ ಸರ್ಕಾರ ಅನುದಾನ ಹಂಚಿಕೆ,ನೆರವು ನೀಡುವಲ್ಲಿ ಯಾವುದೇ ತಾರತಮ್ಯ ಮಾಡಬಾರದು. 

ಬೆಳಗಾವಿ: ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ನೆರೆಪೀಡಿತ ಪ್ರದೇಶಗಳಲ್ಲಿ ಪ್ರವಾಸ ಆರಂಭಿಸಿದ್ದಾರೆ.

ಶನಿವಾರ ಬೆಳಿಗ್ಗೆ ಬೆಳಗಾವಿಗೆ ಆಗಮಿಸಿದ ಕುಮಾರಸ್ವಾಮಿ ಅಧಿಕಾರಿಗಳಿಂದ ಪ್ರವಾಹ ಪರಿಸ್ಥಿತಿ ಹಾಗೂ ಪರಿಹಾರ ಕಾರ್ಯಗಳ ಕುರಿತು ಮಾಹಿತಿ ಪಡೆದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವಾಹದಿಂದ ಜಿಲ್ಲೆಯಲ್ಲಿ ಭಾರೀ ಹಾನಿಯುಂಟಾಗಿದೆ. ಪ್ರವಾಹ ಸಂತ್ರಸ್ತರಿಗೆ ನೆರವು ‌ನೀಡಲು ಅಗತ್ಯ ಕ್ರಮ ಕೈಗೊಳ್ಳುತ್ತೇನೆ. ಮಧುರೈ ಯಿಂದ 10 ಸಾವಿರ ಹೊದಿಕೆಗಳನ್ನು ತರಿಸಿ ಸಂತ್ರಸ್ತರಿಗೆ ‌ನೀಡಲಾಗುವುದು ಎಂದರು.

ರಾಜ್ಯ ಸರ್ಕಾರ ಪ್ರವಾಹ ಪರಿಸ್ಥಿತಿ ನಿಭಾಯಿಸುವಲ್ಲಿ ತನ್ನ ಪಾಲಿನ ಕೆಲಸ ಮಾಡುತ್ತಿದೆ. ಇಂತಹ ಸಂದರ್ಭದಲ್ಲಿ ನಾನು ರಾಜಕೀಯ ಮಾಡುವುದಿಲ್ಲ. ಕೇಂದ್ರ ಸರ್ಕಾರ ಅನುದಾನ ಹಂಚಿಕೆ,ನೆರವು ನೀಡುವಲ್ಲಿ ಯಾವುದೇ ತಾರತಮ್ಯ ಮಾಡಬಾರದು. 

ರಾಜ್ಯದ ಜನರ ಸಂಕಷ್ಟಗಳಿಗೆ ಎಲ್ಲಾ ರೀತಿಯಲ್ಲೂ ನೆರವಾಗಬೇಕು. ಮೂರು ದಿನಗಳಿಂದ ಅನಾರೋಗ್ಯ ತಮ್ಮ ನ್ನು ಬಾಧಿಸಿದ್ದು, ಹೀಗಾಗಿ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಸಾಧ್ಯವಾಗಿರಲಿಲ್ಲ. ನೆರೆಹಾವಳಿ ಪ್ರದೇಶಗಳಿಗೆ ತಡವಾಗಿ ಭೇಟಿ ನೀಡಿದ್ದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅವಶ್ಯಕತೆಯಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಮೆರಿಕದ ನಿರ್ಬಂಧ ಲೆಕ್ಕಿಸದೇ ಭಾರತ ರಷ್ಯಾ ತೈಲ ಆಮದು ಮುಂದುವರಿಸಲಿದೆ: ಸುಜಾತಾ ಶರ್ಮಾ

ಭಾರತದ ಮೊದಲ ಬುಲೆಟ್ ರೈಲಿನ 'ಫಸ್ಟ್ ಲುಕ್' ರಿಲೀಸ್‌: ಸಂಚಾರ ಯಾವಾಗಿಂದ ಆರಂಭ?

'ಅಮ್ಮ ಕ್ಯಾಂಟೀನ್‌' ಆಧುನೀಕರಿಸಲು ತಮಿಳುನಾಡು ಸಿಎಂ ವಿಜಯ್ ಆದೇಶ; ಅಚ್ಚರಿ ಮೂಡಿಸಿದ ದಳಪತಿ ನಡೆ

Bengaluru Rains: ವರುಣಾರ್ಭಟಕ್ಕೆ ನದಿಯಂತಾದ ರಸ್ತೆಗಳು; 5 ದಿನ ಮಳೆ ಸಾಧ್ಯತೆ, ತಾಪಮಾನ ಗಣನೀಯ ಇಳಿಕೆ: ಹವಾಮಾನ ಇಲಾಖೆ

Indian Stock Market: ಚೇತರಿಸಿಕೊಂಡ Sensex 77 ಅಂಕ ಏರಿಕೆ, ರೂಪಾಯಿ ಮೌಲ್ಯ 96.35ಕ್ಕೆ ಕುಸಿತ, ಕಚ್ಚಾತೈಲ ಬೆಲೆ ಏರಿಕೆ!

SCROLL FOR NEXT