ರಾಜ್ಯ

ಉ. ಕರ್ನಾಟಕ ಪ್ರವಾಹಕ್ಕೆ ನಿಜವಾದ ಕಾರಣವೇನು, ವಸ್ತುಸ್ಥಿತಿ ಏನು, ತಜ್ಞರು ಹೇಳುವುದೇನು?

ಉತ್ತರ ಕರ್ನಾಟಕ ಭಾಗದ ಅನೇಕ ಜಿಲ್ಲೆಗಳು ಕಳೆದ 10 ದಿನಗಳಿಂದ ಪ್ರವಾಹಕ್ಕೆ ಸಿಲುಕಿ ನಲುಗಿ ಹೋಗಿದೆ. 

ಬೆಳಗಾವಿ: ಉತ್ತರ ಕರ್ನಾಟಕ ಭಾಗದ ಅನೇಕ ಜಿಲ್ಲೆಗಳು ಕಳೆದ 10 ದಿನಗಳಿಂದ ಪ್ರವಾಹಕ್ಕೆ ಸಿಲುಕಿ ನಲುಗಿ ಹೋಗಿದೆ. ಇದು ಪ್ರಕೃತಿ ವಿಕೋಪ ಎಂದು ಹೇಳುವುದಾದರೂ ಕೂಡ ತಜ್ಞರ ಅಭಿಪ್ರಾಯ ಪ್ರಕಾರ ಮಾನವ ನಿರ್ಮಿತ ತಪ್ಪುಗಳಿಂದಲೇ ಇಂದು ಈ ದುಸ್ಥಿತಿ ಬಂದೊದಗಿರುವುದು.

ಮಹಾರಾಷ್ಟ್ರ ರಾಜ್ಯದ ಕೃಷ್ಣಾ ನದಿ ತೀರದಲ್ಲಿ ಭಾರೀ ಮಳೆಯಾಗಿ ಹೆಚ್ಚುವರಿ ನೀರನ್ನು ಅಲ್ಲಿನ ಜಲಾಶಯಗಳಿಂದ ಬಿಟ್ಟಿರುವುದರಿಂದ ಉತ್ತರ ಕರ್ನಾಟಕದಲ್ಲಿ ಮಹಾ ದುರಂತವಾಯಿತು ಎಂದು ಹೇಳಲಾಗುತ್ತಿದ್ದರೂ ಕೂಡ ಆ ಜಿಲ್ಲೆಗಳಲ್ಲಿ ನಿಗದಿತ ನೀರನ್ನು ಬಿಡುಗಡೆ ಮಾಡುತ್ತಿದ್ದರೆ ನೆರೆ ಪ್ರವಾಹದ ತೀವ್ರತೆಯನ್ನು ಕಡಿಮೆ ಮಾಡಬಹುದಾಗಿತ್ತು ಎಂದು ತಜ್ಞರು ಹೇಳುತ್ತಾರೆ.
ಜಲಾಶಯಗಳಲ್ಲಿ ನೀರು ಹಂಚಿಕೆ ಸಂಬಂಧ ಕರ್ನಾಟಕ ಮತ್ತು ಮಹಾರಾಷ್ಟ್ರಗಳ ನಡುವಿನ ಬಿಕ್ಕಟ್ಟಿನಿಂದಾಗಿ ಇಂದು ಕೃಷ್ಣಾ ಕೊಳ್ಳದ ಜನರು ತೊಂದರೆ ಅನುಭವಿಸುವಂತಾಗಿದೆ.

ಮೇ ಮತ್ತು ಜೂನ್ ತಿಂಗಳಲ್ಲಿ ನೀರು ಬಿಡುಗಡೆ ವಿಚಾರದಲ್ಲಿ ಮಹಾರಾಷ್ಟ್ರದ ನಿಲುವು ಮತ್ತು ತನ್ನ ಅಣೆಕಟ್ಟಿನ ನೀರಿನ ಸರಿಯಾದ ಬಳಕೆ ಮಾಡುವಲ್ಲಿ ವೈಫಲ್ಯದಿಂದಾ ಕೃಷ್ಣಾ ತೀರದಲ್ಲಿ ಪ್ರವಾಹ ತೀವ್ರತೆ ಹೆಚ್ಚಾಗಲು ಕಾರಣ ಎಂದು ಕರ್ನಾಟಕ ಸರ್ಕಾರ ವಾದಿಸುತ್ತಿದೆ. ಇದರ ಪರಿಣಾಮ ಮಾತ್ರ ಬೆಳಗಾವಿ, ಬಾಗಲಕೋಟೆ, ರಾಯಚೂರು,ಯಾದಗಿರಿ, ವಿಜಯಪುರ ಜಿಲ್ಲೆಗಳ ಜನರ ಮೇಲಾಗಿದೆ. 


ಉತ್ತರ ಕರ್ನಾಟಕದ ಕೃಷ್ಣಾನದಿ ದಂಡೆಯಲ್ಲಿರುವ ಪ್ರವಾಹಪೀಡಿತ ಗ್ರಾಮಗಳಲ್ಲಿ ಜನರನ್ನು ಅಲ್ಲಿಂದ ಬೇರೆ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಬೇಕು, ತಗ್ಗು ಪ್ರದೇಶಗಳಲ್ಲಿರುವ ಸುಮಾರು 25 ಅಣೆಕಟ್ಟುಗಳನ್ನು ಎತ್ತರ ಮಾಡಬೇಕು ಮತ್ತು ರಸ್ತೆ ನಿರ್ಮಾಣ ಮಾಡಬೇಕೆಂಬ ದಶಕಗಳ ಕಾಲದ ಬೇಡಿಕೆ ಹಾಗೆಯೇ ಉಳಿದಿದೆ.


ಕೃಷ್ಣಾ ನದಿ ತೀರದಲ್ಲಿ ಸುಮಾರು 500 ಗ್ರಾಮಗಳಿದ್ದು 1.5 ಲಕ್ಷ ಹೆಕ್ಟೇರ್ ಭೂಮಿ, ನೀರಾವರಿ ಪ್ರದೇಶಗಳು ಪ್ರವಾಹಪೀಡಿತವಾಗಿವೆ. ಕಳೆದ 45 ವರ್ಷಗಳಲ್ಲಿ ಕರ್ನಾಟಕದಲ್ಲಿ ಈ ಹಿಂದೆ ಇಷ್ಟೊಂದು ಬೃಹತ್ ಪ್ರಮಾಣದ ಪ್ರವಾಹ ಉಂಟಾಗಿರಲಿಲ್ಲವಂತೆ.


ಮಳೆಗಾಲ ಆರಂಭಕ್ಕೆ ಮುನ್ನ ಜಲಾಶಯಗಳಿಂದ ನೀರು ಬಿಡುಗಡೆ ವಿಚಾರದಲ್ಲಿ ಮಹಾರಾಷ್ಟ್ರ ಕರ್ನಾಟಕದ ಜೊತೆ ಸ್ವಲ್ಪ ಹೊಂದಾಣಿಕೆ ಮಾಡುತ್ತಿದ್ದರೆ ಪ್ರವಾಹ ಇಷ್ಟೊಂದು ಭೀತಿಯಾಗುತ್ತಿರಲಿಲ್ಲ. 


ನೆರೆ ರಾಜ್ಯದ ಜಲಾಶಯಗಳಿಂದ ನೀರು ಬಿಡುಗಡೆ ಮಾಡುವಾಗ ನಿಗದಿತ ಸಮಯಗಳಲ್ಲಿ ಅಧಿಕಾರಿಗಳು ಪಕ್ಕದ ರಾಜ್ಯಕ್ಕೆ ಸೂಚನೆ ನೀಡುತ್ತಾರೆ. ಆದರೆ ಈ ಬಾರಿ ಕೊಯ್ನಾ, ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳಿಂದ ಭಾರೀ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಿದ್ದರಿಂದ ಇಷ್ಟೊಂದು ಪ್ರವಾಹ ಉಂಟಾಗಿದೆ. 


ಈ ಪ್ರವಾಹ, ಅಂತರಾಜ್ಯ ನೀರು ಹಂಚಿಕೆ ಬಗ್ಗೆ ಉತ್ತರ ಕರ್ನಾಟಕದ ಕಾರ್ಯಕರ್ತ ಅಶೋಕ್ ಚಂದರ್ಗಿ ಹೇಳುವುದಿಷ್ಟು; ಜಲಾಶಯದಲ್ಲಿ ಅರ್ಧಕ್ಕಿಂತ ಹೆಚ್ಚು ನೀರು ಇದ್ದರೂ ಕೂಡ ಮೇ ಮತ್ತು ಜೂನ್ ತಿಂಗಳಲ್ಲಿ ಮಹಾರಾಷ್ಟ್ರ ಕರ್ನಾಟಕದ ಬೇಡಿಕೆಯಾದ 4 ಟಿಎಂಸಿ ನೀರನ್ನು ಬಿಡುಗಡೆ ಮಾಡಿಲ್ಲ, ಕೃಷ್ಣಾ ತೀರದಲ್ಲಿ ಪ್ರಮುಖ ನೀರಾವರಿ ಯೋಜನೆಗಳನ್ನು ಜಾರಿಗೆ ತರಲು ಮಹಾರಾಷ್ಟ್ರ ಸಿದ್ದವಿಲ್ಲ. ನೀರಾವರಿ ಯೋಜನೆ ಜಾರಿಗೆ ಬಂದರೆ ಕೊಯ್ನಾ ಜಲಾಶಯದಿಂದ ನೀರಿನ ಹರಿವನ್ನು ಬೇರೆಡೆಗೆ ಬದಲಾಯಿಸಬಹುದು, ಈ ಮೂಲಕ ಪ್ರವಾಹವನ್ನು ತಡೆಯಬಹುದು.


ಮಹಾರಾಷ್ಟ್ರ ಮತ್ತು ಕರ್ನಾಟಕ ಸರ್ಕಾರಗಳು ಜೊತೆಯಾಗಿ ಚರ್ಚಿಸಿ ಬದಲಿ ಮಾರ್ಗ ಕಂಡುಕೊಂಡಿದ್ದರೆ ಮತ್ತು ಕೊಯ್ನಾ ಜಲಾಶಯದಿಂದ ಮಾನ್ಸೂನ್ ಗೆ ಮುನ್ನ ಸಾಕಷ್ಟು ನೀರು ಬಿಡುಗಡೆ ಮಾಡಿದ್ದರೆ ಇಂದು ಈ ಪರಿಸ್ಥಿತಿ ಬರುತ್ತಿರಲಿಲ್ಲ. ಈ ತಿಂಗಳು ಭಾರೀ ಪ್ರಮಾಣದಲ್ಲಿ ಮಳೆ ಬಂದಾಗ ಬೇರೆ ದಾರಿಯಿಲ್ಲದೆ ಮಹಾರಾಷ್ಟ್ರ ಕೊಯ್ನಾ ಜಲಾಶಯದಿಂದ ನೀರು ಬಿಡುಗಡೆ ಮಾಡಲೇಬೇಕಾಗಿ ಬಂತು. ಅದರ ಪರಿಣಾಮವೇ ನಾವಿಂದು ನೋಡುತ್ತಿರುವ ಉತ್ತರ ಕರ್ನಾಟಕದ ಪ್ರವಾಹ ಮತ್ತು ಅಪಾರ ಸಾವು, ನೋವು, ಆಸ್ತಿಪಾಸ್ತಿ ನಷ್ಟ.


ಆಗಸ್ಟ್ 5ರ ವೇಳೆಗೆ ಕೃಷ್ಣಾ ತೀರದಲ್ಲಿರುವ ಕೊಯ್ನಾ, ರಾಧಾನಗರಿ ಮತ್ತು ವರ್ನಾ ಜಲಾಶಯ ಸಂಪೂರ್ಣ ತುಂಬಿಹೋಗಿತ್ತು. ಜಲಾಶಯಗಳಲ್ಲಿ ನೀರು ಅರ್ಧ ತುಂಬಿರುವಾಗಲೇ ಮಹಾರಾಷ್ಟ್ರ ಜುಲೈ 25ರಿಂದಲೇ ನೀರು ಬಿಡುಗಡೆಮಾಡಬಹುದಾಗಿತ್ತಲ್ಲವೇ ಎಂದು ಮತ್ತೊಬ್ಬ ತಜ್ಞರು ಕೇಳುತ್ತಾರೆ.


ಮೇ ಮತ್ತು ಜೂನ್ ತಿಂಗಳಲ್ಲಿ ಕರ್ನಾಟಕಕ್ಕೆ ನೀರು ಬಿಡುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಹಿಂದಿನ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಹಲವು ಬಾರಿ ಮನವಿ ಮಾಡಿತ್ತು. ಆ ಸಮಯದಲ್ಲಿ ಉತ್ತರ ಕರ್ನಾಟಕದಲ್ಲಿ ಬರಗಾಲವಿತ್ತು. ಆದರೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನೇತೃತ್ವದ ಮಹಾರಾಷ್ಟ್ರ ಸರ್ಕಾರ ಮನಸ್ಸು ಮಾಡಲಿಲ್ಲ. ಬದಲಿಗೆ ನೀರು ಹಂಚಿಕೆ ಒಪ್ಪಂದಕ್ಕೆ ಸಹಿ ಹಾಕಿ ಎಂದು ಕರ್ನಾಟಕ ಸರ್ಕಾರವನ್ನು ಒತ್ತಾಯಿಸುತ್ತಾ ಬಂದಿದೆ ಎಂದು ಹೇಳುತ್ತಾರೆ.


ಆದರೆ ಕರ್ನಾಟಕದಲ್ಲಿ ನೀರಿನ ಸಂಗ್ರಹಕ್ಕೆ ವ್ಯವಸ್ಥೆ ಇಲ್ಲದಿರುವುದರಿಂದ ಮಹಾರಾಷ್ಟ್ರದೊಂದಿಗೆ ನೀರು ಹಂಚಿಕೆ ಒಪ್ಪಂದಕ್ಕೆ ಸಹಿ ಹಾಕಲು ಕರ್ನಾಟಕ ಇದುವರೆಗೆ ಒಪ್ಪಿಲ್ಲ. 2005ರಲ್ಲಿ ಪ್ರವಾಹ ಉಂಟಾಗಿದ್ದರೂ ಕೂಡ ಇನ್ನೂ ಎರಡೂ ರಾಜ್ಯಗಳ ಸರ್ಕಾರಗಳು ಎಚ್ಚೆತ್ತುಕೊಳ್ಳದಿರುವುದು ವಿಪರ್ಯಾಸ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಂಧನ ಸ್ಥಾವರಗಳ ಮೇಲಿನ ದಾಳಿಯನ್ನು ನಿಲ್ಲಿಸಲು ರಷ್ಯಾ-ಉಕ್ರೇನ್ ಒಪ್ಪಿಕೊಂಡಿವೆ: ಟ್ರಂಪ್ ಘೋಷಣೆ

ಕೊನೆಯ ಓವರ್‌ನಲ್ಲಿ ಭಾರತಕ್ಕೆ ವಿಂಡೀಸ್ ವಿರುದ್ಧ ರೋಚಕ ಜಯ: T20 ಸರಣಿಯಲ್ಲಿ 2-1 ಮುನ್ನಡೆ!

'We're Sorry': ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಬಗ್ಗೆ ತಿಳಿಸಿದ್ದ ಮಹಿಳಾ ಪೊಲೀಸ್; ಹೇಗಿತ್ತು CJP ನಾಯಕನ ಪ್ರತಿಕ್ರಿಯೆ...: ವಿಡಿಯೋ ವೈರಲ್!

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್