ರಾಜ್ಯ

ಬೆಳಗಾವಿ: ಪ್ರವಾಹದಲ್ಲಿ ಕೊಚ್ಚಿ ಹೋದ ಮನೆ, ಬೆಳೆ: ರೈತ ಆತ್ಮಹತ್ಯೆ 

ಭೀಕರ ಪ್ರವಾಹದಲ್ಲಿ ಮನೆ, ಬೆಳೆ ಕೊಚ್ಚಿ ಹೋದರಿಂದ ಮನನೊಂದ ಚಿಕ್ಕೋಡಿ ತಾಲೂಕಿನ ಕಾಲೊಲ್ ಗ್ರಾಮದ ರೈತರೊಬ್ಬರು  ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬೆಳಗಾವಿ: ಭೀಕರ ಪ್ರವಾಹದಲ್ಲಿ ಮನೆ, ಬೆಳೆ ಕೊಚ್ಚಿ ಹೋದರಿಂದ ಮನನೊಂದ ಚಿಕ್ಕೋಡಿ ತಾಲೂಕಿನ ಕಾಲೊಲ್ ಗ್ರಾಮದ ರೈತರೊಬ್ಬರು  ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಕಾಲೊಲ್ ನಿವಾಸಿ ಅಪ್ಪಸಾಬ್ ಕಾಳಪ್ಪ ಮಂಗವಟ್ಟಿ (50 ) ಎಂದು ಮೃತಪಟ್ಟ ದುರ್ದೈವಿಯಾಗಿದ್ದಾರೆ.

ವಿವಿಧ ಬ್ಯಾಂಕುಗಳಿಂದ ಸಾಲ ಶೂಲ ಮಾಡಿ ಮಂಗವಟ್ಟಿ ಕಬ್ಬು ಬೆಳೆದಿದ್ದರು. ಆದರೆ, ಉತ್ತಮ ಬೆಳೆ ಬಂದು ಕಟಾವಿನ ಹಂತದಲ್ಲಿರಬೇಕಾದರೆ ಪ್ರವಾಹಕ್ಕೆ ಸಿಲುಕಿ ಎಲ್ಲವೂ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಇದರಿಂದಾಗಿ ಮನನೊಂದು ಆತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಂಗವಟ್ಟಿಯನ್ನು ಆಸ್ಪತ್ರೆಗೆ ಸೇರಿಸಿ ಬದುಕುಳಿಸಲು ಪ್ರಯತ್ನಿಸಲಾಯಿತಾದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಮೂಲಗಳು ಹೇಳಿವೆ.

ಚಿಕ್ಕೊಡಿ ತಾಲೂಕಿನಲ್ಲಿ ಭಾರೀ ಪ್ರವಾಹದಿಂದಾಗಿ  ಸಾವಿರಾರು ಕಬ್ಬು ಬೆಳೆಗಾರರು ಅಪಾರ ಪ್ರಮಾಣದ ನಷ್ಟ ಅನುಭವಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?