ರಾಜ್ಯ

ಬೇರೆ ಬೇರೆ ಜೈಲುಗಳಿಗೆ  ಗೌರಿ ಲಂಕೇಶ್ ಹಂತಕರ ಸ್ಥಳಾಂತರ

Nagaraja AB

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಿದ ನಾಲ್ವರನ್ನು ಹಂತಕರನ್ನು  ರಾಜ್ಯದಲ್ಲಿನ ಬೇರೆ ಬೇರೆ ಜೈಲುಗಳಿಗೆ  ಸದ್ಯದಲ್ಲಿ ಸ್ಥಳಾಂತರ ಮಾಡಲಾಗುತ್ತಿದೆ.  

ಗೌರಿ ಲಂಕೇಶ್ ಹತ್ಯೆ ಆರೋಪದ ಮೇಲೆ ಬಂಧಿಸಲಾಗಿರುವ ಅಮೋಲ್ ಕಾಳೆ, ಪರಶುರಾಮ್ ವಾಗ್ಮೋರೆ, ಮನೋಹರ್ ಎಡಾವೆ, ಮತ್ತು ಅಮಿತ್ ದಿಗ್ವೀಕರ್ ಅವರನ್ನು ಬೇರೆ ಬೇರೆ ಜೈಲುಗಳಿಗೆ ಸ್ಥಳಾಂತರ ಮಾಡಬೇಕೆಂದು ಪರಪ್ಪನ ಅಗ್ರಹಾರ ಕಾರಾಗೃಹದ ಅಧಿಕಾರಿಗಳು ವಿಶೇಷ ನ್ಯಾಯಾಲಯದ ಬಳಿ ಮನವಿ ಮಾಡಿಕೊಂಡಿದ್ದಾರೆ.

ಆರೋಪಿಗಳ ಜೀವಕ್ಕೆ ಬೆದರಿಕೆ ಇರುವುದರಿಂದ ಎಲ್ಲರನ್ನೂ ಒಂದೇ ಜೈಲಿನಲ್ಲಿಡುವುದು ಸರಿಯಲ್ಲ, ಸಾಕ್ಷ್ಯ ನಾಶಕ್ಕೂ ಯತ್ನಿಸಬಹುದು. ಈ ಹಿನ್ನೆಲೆಯಲ್ಲಿ  ಬೇರೆ ಬೇರೆ ಜೈಲುಗಳಿಗೆ ಸ್ಥಳಾಂತರ ಮಾಡುವುದು ಉತ್ತಮ ಎಂದು ಜೈಲು ಅಧಿಕಾರಿಗಳು ಹೇಳಿದ್ದಾರೆ.

ಆರೋಪಿ ಕಾಳೆ -ಮೈಸೂರು ಜೈಲಿಗೆ, ವಾಗ್ಮೋರೆ- ತುಮಕೂರು ಎಡಾವೆ- ಶಿವಮೊಗ್ಗ  ಅಮಿತ್ ದಿಗ್ವೇಕರ್ - ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲು ಎಡಿಜಿಪಿ ಎನ್ ಎಸ್ ಮೇಘರಿಕ್ ಆದೇಶ ಹೊರಡಿಸಿದ್ದಾರೆ ಎಂಬುದು ಮೂಲಗಳಿಂದ ತಿಳಿದುಬಂದಿದೆ. 

SCROLL FOR NEXT