ರಾಜ್ಯ

ಕೆಫೆ ಕಾಫಿ ಡೇ ಸ್ಥಾಪಕ ಸಿದ್ದಾರ್ಥ್ ಆತ್ಮಹತ್ಯೆ: ಎಫ್‌ಎಸ್‌ಎಲ್ ವರದಿಯಲ್ಲಿ ಬಹಿರಂಗ

Raghavendra Adiga

ಮಂಗಳೂರು: ಕೆಫೆ ಕಾಫಿ ಡೇ ಸಂಸ್ಥಾಪಕ ವಿಜಿ ಸಿದ್ದಾರ್ಥ್ ಹೆಗ್ಡೆ ಸಾವಿಗೆ ಸಂಬಂಧಿಸಿದ ಪ್ರಕರಣದ ವಿಧಿವಿಜ್ಞಾನ ಪ್ರಯೋಗಾಲಯದ ಅಂತಿಮ ವರದಿ ಹೊರಬಂದಿದ್ದು ಸಿದ್ದಾರ್ಥ್ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಖಚಿತಪಡಿಸಿದೆ.

ಕಳೆದ ಸೋಮವಾರ ಸಿದ್ಧಾರ್ಥ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ತಜ್ಞರಿಗೆ ಎಫ್‌ಎಸ್‌ಎಲ್ ವರದಿ ತಲುಪಿದೆ. ಅಂತಿಮ ವರದಿಯನ್ನು ಶುಕ್ರವಾರ ಪ್ರಕರಣದ ತನಿಖಾಧಿಕಾರಿಗೆ ತಲುಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಉಳ್ಳಾಲದ  ಸೇತುವೆಯಿಂದ ನೇತ್ರಾವತಿ ನದಿಗೆ ಹಾರಿದ ಸಿದ್ಧಾರ್ಥನ ಶವ ಎರಡು ದಿನಗಳ ನಂತರ ಸ್ಥಳದಿಂದ ಸ್ವಲ್ಪ ದೂರದಲ್ಲಿ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ತಮ್ಮ ವರದಿಯನ್ನು ಪ್ರಾದೇಶಿಕ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಬೆಂಗಳೂರಿನಿಂದ ಇನ್ನೋವಾ ಕಾರಿನಲ್ಲಿ ಮಂಗಳೂರಿಗೆ ಬಂದಿದ್ದ ಉದ್ಯಮಿ ಸಿದ್ದಾರ್ಥ ಜುಲೈ ೨೯ ಸಂಜೆ ಏಳರಿಂದ ನಾಪತ್ತೆಯಾಗಿದ್ದರು. ಕಡೆಯದಾಗಿ ಅವರು ಉಳ್ಳಾಲ ನೇತ್ರಾವತಿ ಸೇತುವೆ ಮೇಲೆ ಕಾಣಿಸಿಕೊಂಡಿದ್ದರು.ಅದಾಗಿ ಎರಡು ದಿನಗಳ ನಂತರ ಜುಲೈ ೩೧ ಬೆಳಿಗ್ಗೆ ಕೊಯ್ಗಿ ಬಝಾರ್ ಸಮೀಪದ ನದಿಯಲ್ಲಿ ಸಿದ್ದಾರ್ಥ್ ಶವವಾಗಿ ಪತ್ತೆಯಾಗಿದ್ದರು.

ಈ ಮಧ್ಯೆ, ಪ್ರಾಥಮಿಕ ಪೋಸ್ಟ್‌ಮಾರ್ಟಂ ವರದಿಯನ್ನು ತನಿಖಾ ಅಧಿಕಾರಿಗೆ ಕಳುಹಿಸಲಾಗಿದ್ದು, ಎಫ್‌ಎಸ್‌ಎಲ್ ವರದಿಯನ್ನು ಸ್ವೀಕರಿಸಿದ ನಂತರ ಅಂತಿಮ ವರದಿಯನ್ನು ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ. ಇದೀಗ ಬಹಿರಂಗವಾಗಿರುವ ವರದಿಯಲ್ಲಿ ಸಿದ್ದಾರ್ಥ್ ಉಸಿರುಗಟ್ಟುವಿಕೆ ಕಾರಣ ಎಂಬುದು ಪತ್ತೆಯಾಗಿದೆ. 

SCROLL FOR NEXT