ರಾಜ್ಯ

ಕೊಪ್ಪಳ: ವೈದ್ಯರ ನಿರ್ಲಕ್ಷ್ಯ‌ಕ್ಕೆ ಬಾಣಂತಿ ಕೋಮಾ ಸ್ಥಿತಿಗೆ

Srinivas Rao BV

ಕೊಪ್ಪಳ: ವೈದ್ಯರ ನಿರ್ಲಕ್ಷ್ಯ‌ಕ್ಕೆ ಗರ್ಭಿಣಿ ಸಾವನ್ನಪ್ಪಿದ ಘಟನೆ ವರದಿಯಾದ ಬೆನ್ನಲ್ಲೇ ಕೊಪ್ಪಳದಲ್ಲಿ ಮತ್ತೊಂದು ಇಂಥಹದ್ದೇ ಘಟನೆ ವರದಿಯಾಗಿದೆ. 

ಕಳೆದ ಮೂರು ತಿಂಗಳಿನಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಾಣಂತಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೆರಿಗೆಗೆ ಬಂದ ಮಹಿಳೆ  ಅನ್ನಪೂರ್ಣ ಅವರನ್ನು ವೈದ್ಯರ ನಿರ್ಲಕ್ಷ್ಯ ಕೋಮಾ ಸ್ಥಿತಿಗೆ ತಂದಿದೆ ಎಂದು  ಪಾಲಕರು ಆರೋಪಿಸಿದ್ದಾರೆ. 

ತಾಯಿ ಕೋಮಾದಲ್ಲಿರುವುದರಿಂದ ತಾಯಿ ಇದ್ದರೂ ಮೂರು ತಿಂಗಳ ಗಂಡು ಮಗು ತಬ್ಬಲಿಯಾದಂತಾಗಿದೆ.  ಶಸ್ತ್ರ ಚಿಕಿತ್ಸೆ ಮಾಡಿ ಹೆರಿಗೆ ಮಾಡಿದ ವೈದ್ಯರ ಎಡವಟ್ಟಿನಿಂದ ಈ ರೀತಿ ಆಗಿದೆ ಎಂದು ಡಾ.ಶಿವಗಂಗಾ ವಿರುದ್ಧ ಪಾಲಕರು ಆರೋಪಿಸಿದ್ದಾರೆ.

ಘಟನೆಗೆ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿಗೆ ಪೋಷಕರು ದೂರು ಸಲ್ಲಿಸಿದ್ದು ಕೊಪ್ಪಳ ಜಿಲ್ಲಾಸ್ಪತ್ರೆಗೇ ಸೂಕ್ತ ಚಿಕಿತ್ಸೆ ಬೇಕಾದ ಸ್ಥಿತಿ ನಿರ್ಮಾಣವಾಗಿದೆ. 

SCROLL FOR NEXT