ಸಂತೋಷ್ ಹೆಗ್ಡೆ 
ರಾಜ್ಯ

ಪ್ರಜಾಪ್ರಭುತ್ವದ ಮೌಲ್ಯಗಳು ಹಂತ ಹಂತವಾಗಿ ಕುಸಿಯುತ್ತಿವೆ- ಸಂತೋಷ್ ಹೆಗ್ಡೆ ವಿಷಾದ

ಇಂದು ದೇಶದಲ್ಲಿನ ಪ್ರಜಾ ಪ್ರಭತ್ವದ ಮೌಲ್ಯಗಳು ಹಂತ ಹಂತವಾಗಿ ಕುಸಿಯುತ್ತಿದ್ದು ಕೆಲವರು, ಕೆಲವರಿಗಾಗಿ, ಕೆಲವರಿಗೋಸ್ಕರವಾಗಿಯೇ ಸ್ವಾತಂತ್ರ್ಯ ಸೀಮಿತಮಾಗಿದೆ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ  ಸಂತೋಷ್ ಹೆಗ್ಡೆ ವಿಷಾಧಿಸಿದ್ದಾರೆ.

ಬೆಂಗಳೂರು: ಮಾನವೀಯತೆ ಎಂಬುದು ನಮ್ಮ ಸಮಾಜದಲ್ಲಿ ಹಿರಿಯರು ಕಟ್ಟಿದ ಮೌಲ್ಯ, ಮಾನವ ಎಂದು ಹೇಳುವುದು ಪ್ರಮುಖವಲ್ಲ ಅದನ್ನು ಕಾರ್ಯರೂಪಗೊಳಿಸುವುದು ಮಾನವೀಯತೆ‌ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ  ಸಂತೋಷ್ ಹೆಗ್ಡೆ ಅಭಿಪ್ರಾಯ ಪಟ್ಟರು.

ಪತ್ರಕರ್ತರ ಭವನದಲ್ಲಿಂದು ಕರ್ನಾಟಕ ಮಾನವ ಹಕ್ಕುಗಳ ಜನ ಜಾಗೃತಿ ವೇದಿಕೆ ಆಯೋಜಿಸಿದ್ದ, ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದು ದೇಶದಲ್ಲಿನ ಪ್ರಜಾ ಪ್ರಭತ್ವದ ಮೌಲ್ಯಗಳು ಹಂತ ಹಂತವಾಗಿ ಕುಸಿಯುತ್ತಿದ್ದು ಕೆಲವರು, ಕೆಲವರಿಗಾಗಿ, ಕೆಲವರಿಗೋಸ್ಕರವಾಗಿಯೇ ಸ್ವಾತಂತ್ರ್ಯ ಸೀಮಿತಮಾಗಿದೆ. ಜನಪ್ರತಿನಿಧಿಗಳು ಜನರ ಸೇವಕರಲ್ಲ ಮಾಲೀಕರೆಂಬ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಒಬ್ಬ ವ್ಯಕ್ತಿಯಿಂದ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿಲ್ಲ. ಅದು ಇಡೀ ಸಮಾಜದಿಂದಲೇ ಆಗುತ್ತಿದೆ. ತಳಮಟ್ಟದ ಜನರಿಗೆ ಸಂವಿಧಾನದ ಆಶಯದಂತೆ ಸಿಗಬೇಕಾದ ಎಲ್ಲಾ ಸೌಲಭ್ಯಗಳು ಇಂದು ಶ್ರೀಮಂತರ ಪಾಲಾಗುತ್ತಿವೆ. ಸಾಮಾಜಿಕ ಮೌಲ್ಯಗಳ ಹರಣದಿಂದ ಗೌರವಯುತವಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಯಾರಲ್ಲಿ ಅಧಿಕಾರ, ಶಕ್ತಿ, ಹಣವಿದೆಯೋ ಅಂತಹ ವ್ಯಕ್ತಿಗಳ ಅಭಿವೃದ್ಧಿಯಾಗುತ್ತಿದೆ. ಬಡವರ, ಹಿಂದುಳಿದವರ ಅಭಿವೃದ್ಧಿ ಯಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?