ಮೈಸೂರಿನ ಹಸ್ತಪ್ರತಿ ಸಂಶೋಧನಾ ಕೇಂದ್ರದ ಒಂದು ದೃಶ್ಯ 
ರಾಜ್ಯ

ಕೌಟಿಲ್ಯನ ‘ಅರ್ಥಶಾಸ್ತ್ರ’ದ ಸ್ಥಿತಿ ಅಧ್ಯಯನಕ್ಕೆ ಮುಂದಾದ ರಾಷ್ಟ್ರೀಯ ಹಸ್ತಪ್ರತಿ ಮಿಷನ್

ಭಾರತದ ಪ್ರಾಚೀನ ಚಿಂತಕ, ದಾರ್ಶನಿಕರಲ್ಲಿ ಒಬ್ಬನಾದ ಕೌಟಿಲ್ಯನ "ಅರ್ಥಶಾಸ್ತ್ರ" ಗ್ರಂಥದ ಕೆಲ ಭಾಗಗಳ ಹಳೆಯ ನಕಲು ಮೈಸೂರಿನಲ್ಲಿದ್ದು ಇದನ್ನು ಸಂರಕ್ಷಿಸುವುದರೊಂದಿಗೆ ಹೆಚ್ಚಿನ ಗಮನದಿಂದ ಹಸ್ತಪ್ರತಿಗಳ ಸ್ಥಿತಿಯನ್ನು ನಿರ್ಣಯಿಸಲು ರಾಷ್ಟ್ರೀಯ ಹಸ್ತಪ್ರತಿಗಳ ಮಿಷನ್ (ಎನ್‌ಎಂಎಂ) ಉತ್ಸಾಹ ತೋರಿಸಿದೆ

ಮೈಸೂರು: ಭಾರತದ ಪ್ರಾಚೀನ ಚಿಂತಕ, ದಾರ್ಶನಿಕರಲ್ಲಿ ಒಬ್ಬನಾದ ಕೌಟಿಲ್ಯನ "ಅರ್ಥಶಾಸ್ತ್ರ" ಗ್ರಂಥದ ಕೆಲ ಭಾಗಗಳ ಹಳೆಯ ನಕಲು ಮೈಸೂರಿನಲ್ಲಿದ್ದು ಇದನ್ನು ಸಂರಕ್ಷಿಸುವುದರೊಂದಿಗೆ ಹೆಚ್ಚಿನ ಗಮನದಿಂದ ಹಸ್ತಪ್ರತಿಗಳ ಸ್ಥಿತಿಯನ್ನು ನಿರ್ಣಯಿಸಲು ರಾಷ್ಟ್ರೀಯ ಹಸ್ತಪ್ರತಿಗಳ ಮಿಷನ್ (ಎನ್‌ಎಂಎಂ) ಉತ್ಸಾಹ ತೋರಿಸಿದೆ

ಕೌಟಿಲ್ಯ (ಚಾಣಕ್ಯ) ಬರೆದ ಅರ್ಥಶಾಸ್ತ್ರ ಮತ್ತು  ಸೇನಾಕಾರ್ಯತಂತ್ರದ ಪ್ರಾಚೀನ ಗ್ರಂಥಕ್ರಿ.ಪೂ 3 ನೇ ಶತಮಾನಕ್ಕೆ ಹಿಂದಿನದು. ಈ ಉದ್ಗ್ರಂಥದ ಉಳಿದಿರುವ ಅತ್ಯಂತ ಹಳೆಯ ತಾಳೆ ಎಲೆಯ ಪ್ರತಿಮೈಸೂರು ವಿಶ್ವವಿದ್ಯಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಮೈಸೂರಿನ ಓರಿಯಂಟಲ್ ರಿಸರ್ಚ್ ಇನ್ಸ್ಟಿಟ್ಯೂಟ್ (ಒಆರ್ ಐ) ವಶದಲ್ಲಿದೆ.

ಈ ಸಂಸ್ಥೆ ವಿಶ್ವಪ್ರಸಿದ್ಧವಾಗಿದ್ದು, ಅರ್ಥಶಾಸ್ತ್ರ, ನಾಟ್ಯಶಾಸ್ತ್ರ ಮತ್ತು ಶಾರದತಿಲಕವನ್ನು ಹೊರತುಪಡಿಸಿ 70,000 ಕ್ಕೂ ಹೆಚ್ಚು ಹಸ್ತಪ್ರತಿಗಳು ಮತ್ತು 40,000 ಅಪರೂಪದ ಪುಸ್ತಕಗಳ ಸಂಗ್ರಹವನ್ನು ಹೊಂದಿದೆ.

ಆದಾಗ್ಯೂ, ಇತ್ತೀಚೆಗೆ, ಅರ್ಥಶಾಸ್ತ್ರ ಗ್ರಂಥದ ಸ್ಥಿತಿ ಹಾಗೂ ಒಆರ್ ಐನಲ್ಲಿ  ಅದರ ಸಂರಕ್ಷಣೆ ಕುರಿತು  ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪ್ರಶ್ನೆಗಳು ಹುಟ್ಟಿಕೊಂಡಿದ್ದವು. ಇದನ್ನು ಗಮನದಲ್ಲಿಟ್ಟುಕೊಂಡು, ನವದೆಹಲಿಯಲ್ಲಿ ಪ್ರಧಾನ ಕಚೇರಿ ಹೊಂದಿರುವ  ರಾಷ್ಟ್ರೀಯ ಹಸ್ತಪ್ರತಿಗಳ ಮಿಷನ್ - ನ್ಯಾಷನಲ್ ಮಿಷನ್ ಫಾರ್ ಮ್ಯಾನ್ ಸ್ಕ್ರಿಪ್ಟ್ಸ್ (ಎನ್‌ಎಂಎಂ) ಒಆರ್ ಐಗೆ  ದಾಖಲೆಗಳ ಸ್ಥಿತಿ ಮತ್ತು ಅದರ ಸಂರಕ್ಷಣೆ ಕುರಿತ ಪ್ರಯತ್ನದ ಬಗೆಗೆ ಪತ್ರ ಬರೆದಿತ್ತು. ಪೂರ್ವಭಾವಿ ಕ್ರಮವಾಗಿ, ಅರ್ಥಶಾಸ್ತ್ರ ಗ್ರಂಥದ ಸ್ಥಿತಿ ಕುರಿತು ತಜ್ಞರ ಮೌಲ್ಯಮಾಪನ ನಡೆಸಲು ಎನ್‌ಎಂಎಂ ತಮ್ಮ ಆಸಕ್ತಿಯನ್ನು ವ್ಯಕ್ತಪಡಿಸಿದೆ. ಹಸ್ತಪ್ರತಿಯ ಮೌಲ್ಯಮಾಪನಕ್ಕಾಗಿ ಒಆರ್ ಐನಿಂದ ಹೆಚ್ಚಿನ ಸಂವಹನಕ್ಕಾಗಿ ರಾಷ್ಟ್ರೀಯ ಸಂಸ್ಥೆ ನಿರೀಕ್ಷೆಯಲ್ಲಿದೆ ಎಂದು ಎನ್ಎಂಎಂ ನಿರ್ದೇಶಕ ಪ್ರತಾಪ್ ನಂದಾ ಝಾ ಪತ್ರಿಕೆಗೆ ತಿಳಿಸಿದ್ದಾರೆ.

"ಒಆರ್ ಐಪ್ರವಾಸೋದ್ಯಮ ಮತ್ತು ಸಂಸ್ಕೃತಿ ಇಲಾಖೆಯ ವ್ಯಾಪ್ತಿಗೆ ಬರದ ಕಾರಣ, ಮೌಲ್ಯಮಾಪನ ಪ್ರಕ್ರಿಯೆಯನ್ನು ಮತ್ತಷ್ಟು ಚುರುಕಾಗಿಸಲು ನಾವು ಸಂಸ್ಥೆಯಿಂದ ಸಂವಹನಕ್ಕಾಗಿ ಕಾಯುತ್ತಿದ್ದೇವೆ .... ಅವರು ಮುಂದೆ ಬಂದರೆ ನಮ್ಮ ಸಿಬ್ಬಂದಿ ಹಸ್ತಪ್ರತಿಯ ಸ್ಥಿತಿಯನ್ನು ಮೌಲ್ಯಮಾಪನ ಮಾಡಬಹುದು ... ಅವರು ತಮ್ಮದೇ ಆದ ವೃತ್ತಿಪರರಿಂದ ಅದೇ ರೀತಿ ಪರೀಕ್ಷಿಸಲು ಬಯಸಿದರೆ  ನಾವು ಅಗತ್ಯ ತರಬೇತಿಯನ್ನು ನೀಡಬಹುದು, ”ಎಂದು ಅವರು ಹೇಳಿದರು.

ಇನ್ನೊಂದೆಡೆ ಅರ್ಥಶಾಸ್ತ್ರದ ಹಸ್ತಪ್ರತಿಯನ್ನು ಉತ್ತಮ ಸ್ಥಿತಿಯಲ್ಲಿ ಕಾಪಾಡಲಾಗುತ್ತಿದೆ ಎಂದು ಒಆರ್ ಐ  ಹೇಳಿಕೆ ತಿಳಿಸಿದೆ. ಆದರೆ ಗ್ರಂಥದ ಮಹತ್ವವನ್ನು ಪರಿಗಣಿಸಿ ರಾಷ್ಟ್ರೀಯ ಸಂಸ್ಥೆ ದನ್ನು ಪರೀಕ್ಷಿಸಲು ಉತ್ಸುಕರಾಗಿದ್ದಾಗಿ ಅದು ತಿಳಿಸಿದೆ.

ದಾಖಲೆಯ ಸ್ಥಿತಿಯ ಆಧಾರದ ಮೇಲೆ, ಇದು ಭವಿಷ್ಯದಲ್ಲಿ ಯಾವುದೇ ಹಾನಿಯನ್ನು ತಡೆಗಟ್ಟುವ ಗುರಿಯನ್ನು ಹೊಂದಿದೆ. ಜತೆಗೆ ತಾಳೆಗರಿ ಹಾಳಾಗದಂತೆ  ದುರಸ್ತಿ ಅಗತ್ಯವಿದ್ದಲ್ಲಿ ಅಂತಹಾ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಲಲಾಗುವುದು ಎಂದು ಪ್ರಕಟಣೆ ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal Floods: ನೇಪಾಳ ಭೀಕರ ಪ್ರವಾಹಕ್ಕೆ ಚೀನಾದ ನಿರ್ಮಾಣ ಕಾರ್ಯವೇ ಕಾರಣ?

'ಸಿಂಹ ಸುಮ್ಮನೆ ಕುಳಿತಿದೆ ಅಂದ್ರೆ ಸುಸ್ತಾಗಿದೆ ಅಂತಲ್ಲ, ಮುಂದಿನ ಬೇಟೆಗೆ ರೆಡಿ ಆಗ್ತಿದೆ ಎಂದರ್ಥ': ಕಿಚ್ಚ ಸುದೀಪ್ ದಿಢೀರ್ ಪೋಸ್ಟ್; ಇಲ್ಲಿದೆ ಕಾರಣ...

ಕಾನ್ಪುರದಲ್ಲಿ ತರಬೇತಿ ವಿಮಾನ ಪತನ: ಕರ್ನಾಟಕದ ಪೈಲಟ್‌ ಅಭಿಷೇಕ್​ ಸೇರಿ ಇಬ್ಬರು ಸಾವು; Video

Toxic Box Office Collection: ಟಾಕ್ಸಿಕ್ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ? ಕನ್ನಡಕ್ಕಿಂತ ಹಿಂದಿಯಲ್ಲಿ ಡಬಲ್ ಗಳಿಕೆ!

Nepal flood: ಮೃತರ ಸಂಖ್ಯೆ 270ಕ್ಕೆ ಏರಿಕೆ, ಸುಮಾರು 288 ಭಾರತೀಯರು ನಾಪತ್ತೆ! 800ಕ್ಕೂ ಹೆಚ್ಚು ಜನರ ರಕ್ಷಣೆ