ರಾಜ್ಯ

ವಿಶ್ವದ ಮೊದಲ ಕೊಂಕಣಿ-ಕೊಂಕಣಿ-ಇಂಗ್ಲೀಷ್-ಕನ್ನಡ ನಿಘಂಟು ಡಿ 20ರಂದು ಬಿಡುಗಡೆ

Lingaraj Badiger

ಮಂಗಳೂರು: ವಿಶ್ವದ ಮೊದಲ ಕೊಂಕಣಿ-ಕೊಂಕಣಿ-ಇಂಗ್ಲೀಷ್-ಕನ್ನಡ ನಿಘಂಟು ನಗರದಲ್ಲಿ ಡಿ 20ರಂದು ಬಿಡುಗಡೆಯಾಗಲಿದೆ. 

ಸೆಂಟ್ ಆಂತೋನಿ ಧಾರ್ಮಿಕ ದತ್ತಿ ಸಂಸ್ಥೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮಂಗಳೂರು ಬಿಷಪ್ ಡಾ.ಪೀಟರ್ ಪಾಲ್ ಸಲ್ಡಾನ ನಿಘಂಟು ಬಿಡುಗಡೆ ಮಾಡಲಿದ್ದಾರೆ. 

ನಿಘಂಟು ಸಂಪಾದಕ ಪ್ರೊ ಸ್ಟೀಫನ್ ಕ್ಟಾಡ್ರೋಸ್ ನಗರದಲ್ಲಿ ಗುರುವಾರ ಈ ವಿಷಯ ತಿಳಿಸಿದ್ದು, ಕೊಂಕಣಿ ಗೋವಾದಲ್ಲಿ ಅಧಿಕೃತ ಭಾಷೆಯಾಗಿದ್ದು, ಭಾರತದ ಅಧಿಕೃತ ಭಾಷೆಗಳಲ್ಲಿ ಒಂದಾಗಿದೆ. 2001ರ ಭಾರತದ ಜನಗಣತಿಯಂತೆ ಭಾರತದಲ್ಲಿ 25 ಲಕ್ಷ ಕೊಂಕಣಿ ಭಾಷಿಕರಿದ್ದಾರೆ ಎಂದು ಹೇಳಿದರು.

ಹೊಸ ನಿಘಂಟು ಕೊಂಕಣಿ ಭಾಷೆ ಉಳಿವಿಗೆ ಮತ್ತು ಭಾಷೆಯನ್ನು ಸುಲಲಿತವಾಗಿ ಮಾತನಾಡಲು ನೆರವಾಗಲಿದೆ. ನಿಘಂಟಿನಿಂದ ಪದಕೋಶ ಹೆಚ್ಚಿಸಿಕೊಳ್ಳಬಹುದು ಎಂದು ಅವರು ಹೇಳಿದ್ದಾರೆ.

SCROLL FOR NEXT