ರಾಜ್ಯ

ಟ್ವಿಟರ್‌ನಲ್ಲಿ ಹುತಾತ್ಮನ ತಾಯಿ ವೈಯುಕ್ತಿಕ ಮಾಹಿತಿ ಬಹಿರಂಗ: ನೆಟ್ಟಿಗರಿಂದ ಬೆಂಗಳೂರು ಪೋಲೀಸರಿಗೆ ಛೀಮಾರಿ

Raghavendra Adiga

ಬೆಂಗಳೂರು: 2016 ರ ನವೆಂಬರ್ 29 ರಂದು ನಾಗ್ರೋಟದಲ್ಲಿ ಹುತಾತ್ಮರಾದ ಅಕ್ಷಯ್ ಗಿರೀಶ್ ಅವರ ತಾಯಿ ತಮ್ಮ ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನು ಟ್ವಿಟ್ಟರ್ ಹ್ಯಾಂಡಲ್ ನಲ್ಲಿ ಬಹಿರಂಗಪಡಿಸಿದ್ದಕ್ಕಾಗಿ ಬೆಂಗಳೂರು ಟ್ರಾಫಿಕ್ ಪೋಲೀಸರನ್ನು ದೂಷಿಸಿದ್ದಾರೆ.

ಗುರುತು ಅಥವಾ ಸಮವಸ್ತ್ರವಿಲ್ಲದ ವ್ಯಕ್ತಿಯ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಅವರು, "ಕೆಲಸದ ಒತ್ತಡದ ನಡುವೆ ಯಲಹಂಕದಲ್ಲಿ ಪಾರ್ಕ್ ಮಾಡಲಾಗಿದ್ದ ಕಾರುಗಳ ಹಿಂದೆ ನನ್ನ ಕಾರನ್ನು ಪಾರ್ಕ್ ಮಾಡಿದ್ದೆ. ನನ್ನ ಪಾರ್ ಪಾರ್ಕ್ ಮಾಡಿದ  50 ಅಡಿ ಮುಂದೆ "ನೋ ಪಾರ್ಕಿಂಗ್" ಫಲಕವಿತ್ತು. ಆದರೆ ಟ್ರಾಫಿಕ್ ಪೋಲೀಸರು ಕಾರನ್ನು ತೆಗೆದುಕೊಂಡು ಹೋದರು. ಬಳಿಕ ಕಾರನ್ನು ಗುರುತಿಸಿ ಹಿಂದೆ ಕೇಳಿದಾಗ ಸೂಕ್ತ ಗುರುತುಗಳಿಲ್ಲದ ವ್ಯಕ್ತಿ ದಂಡವನ್ನು ಕೇಳಿದನು ಆದರೆ ರಶೀದಿ ನೀಡಲಿಲ್ಲ. ” ಗುರುವಾರ ತಮ್ಮ ಹ್ಯಾಂಡಲ್‌ನಿಂದ ಟ್ವೀಟ್ ಮಾಡಿದ್ದಾರೆ.

ಯಲಹಂಕ ನ್ಯೂ ಟೌನ್‌ನ ಮೇಘನಾ ಗಿರೀಶ್ ಅವರಿಂದ ದಂಡವನ್ನು ಸಂಗ್ರಹಿಸಿದ್ದಾರೆ ಮತ್ತು ಅದಕ್ಕಾಗಿ ರಶೀದಿಯನ್ನು ಸಹ ನೀಡಿಲ್ಲ ಎಂದು ವರದಿಯಾಗಿದೆ.

ಘಟನೆ ಬುಧವಾರ ನಡೆದಿದ್ದು, ರಶೀದಿ ಪಡೆಯಲು ಆಕೆ  ಪೊಲೀಸ್ ಠಾಣೆಗೆ ಹೋಗಬೇಕಾಗಿತ್ತು. ಅವರಿಗೆ ದಂಡ ವಿಧಿಸಿದ ವ್ಯಕ್ತಿ ಅವನ ಮೇಲೆ ಯಾವುದೇ ಗುರುತನ್ನು ಹೊಂದಿಲ್ಲ ಎಂದು ವರದಿಯಾಗಿದೆ. ವ್ಯಕ್ತಿಯ ವರ್ತನೆಯಿಂದ ಕೋಪ ಹಾಗೂ ಅಚ್ಚರಿಗೊಂಡ ಮೇಘನಾ ಟ್ವಿಟ್ಟರ್ ಹ್ಯಾಂಡಲ್ ಮೂಲಕ ಯಲಹಂಕ ಟ್ರಾಫಿಕ್ ಪೋಲೀಸರ ಗಮನ ಸೆಳೆದಿದ್ದಾರೆ.

ಇದಕ್ಕೆ ಪ್ರತಿಕ್ರಯಿಸಿದ ಟ್ರಾಫಿಕ್ ಪೋಲೀಸರು "ನಿನ್ನೆಯಷ್ಟೇ ನೋ ಪಾರ್ಕಿಂಗ್ ಜಾಗದಲ್ಲಿ ಪಾರ್ಕ್ ಮಾಡಿದ ಕಾರಣ ಮೇಘನಾ ಅವರಿಗೆ ದಂಡ ವಿಧಿಸಿ ಚಲನ್ ನೀಡಲಾಗಿದೆ. ಆಕೆ ವಿನಾಕಾರಣ ಬೆಂಗಳೂರು ಟ್ರಾಫಿಕ್ ಪೋಲೀಸರನ್ನು ದೂಷಿಸುತ್ತಿದ್ದಾರೆ"  ಎಂದು ಟ್ವೀಟ್ ಮಾಡಿದ್ದಾರೆ ಅಷ್ಟೇ ಲ್ಲ ಪೊಲೀಸರು ಮೇಘನಾ ಅವರ ಸಂಪೂರ್ಣ ವಿಳಾಸ ಮತ್ತು ವೈಯಕ್ತಿಕ ದೂರವಾಣಿ ಸಂಖ್ಯೆಯನ್ನು ಒಳಗೊಂಡ ಚಲನ್ ಕಾಪಿಯನ್ನೂ ಪೋಸ್ಟ್ ನಲ್ಲಿ ಹಾಕಿದ್ದಾರೆ. ಇದಕ್ಕೆ ಪ್ರತಿಕ್ರಯಿಸಿದ ಓರ್ವ ಬೆಂಗಳೂರು ನಾಗರಿಕರು "ಇದೇ ಪೋಲೀಸರು ಸಾಮಾಜಿಕ ತಾಣಗಳಲ್ಲಿ ವೈಯುಕ್ತಿಕ ವಿವರ ನೀಡಬೇಡಿ, ಹಂಚಿಕೊಳ್ಳಬೇಡ್ ಎಂದು ಬೋಧಿಸುತ್ತಾರೆ" ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.

ಇನ್ನೊಬ್ಬ ವ್ಯಕ್ತಿ ಟ್ವೀಟ್ ಮಾಡಿ "ದಯವಿಟ್ಟು ಕ್ಷಮಿಸಿ, ಆದರೆ  ಬೆಂಗಳೂರು ಪೊಲೀಸರು ಹೆಚ್ಚು ಅನಾರೋಗ್ಯಕರ ತರಬೇತಿ ಹೊಂದಿರುವಂತೆ ಕಾಣುತ್ತಿದೆ.  ನಾಗರಿಕರ ಗೌಪ್ಯತೆಗೆ ಯಾವುದೇ ಗೌರವವಿಲ್ಲ! ಮತ್ತು ಅದರ ಮೇಲೆ ಅವರ ತಪ್ಪನ್ನು ಸಹ ಒಪ್ಪಿಕೊಳ್ಳುವುದಿಲ್ಲ" ಎಂದಿದ್ದಾರೆ. 

ಇದಾಗಿ ಹಲವಾರು ಗಂಟೆಗಳ ಬಳಿಕ ಟ್ರಾಫಿಕ್ ಪೋಲೀಸರು ಆ ಚಲನ್ ಪ್ರತಿಯನ್ನು ಟ್ವಿಟ್ಟರ್ ನಿಂದ ತೆಗೆದು ಹಾಕಿದ್ದಾರೆ. ಆದರೆ ಇದಕ್ಕಾಗಿ ಮೇಘನಾ ಹಲವು ಗಂಟೆಗಳ ಕಾಲ ಕಾದದ್ದಲ್ಲದೆ ಹಲವಷ್ಟು ಬಾರಿ ಟ್ವೀಟ್ ಮಾಡಿದ್ದಾರೆ."ಸದ್ಯ ಟ್ವಿಟ್ ಅನ್ನು ಅಳಿಸಲಾಗಿದೆ. ಇದು ನಮ್ಮ ಕಣ್ತಪ್ಪಿನಿಂದ ಆದ ಕೃತ್ಯ. ಆದರೆ ಬಹು ಗಂಭೀರ ವಿಚಾರವಾಗಿ ಇದನ್ನು ಪರಿಗಣಿಸುತ್ತಿದ್ದು  ಅದಕ್ಕಾಗಿ ನಾವು ಕ್ಷಮೆಯಾಚಿಸುತ್ತೇವೆ." ಹಿರಿಯ ಅಧಿಕಾರಿಯೊಬ್ಬರು ಹೇಳಿಕೆಯಲ್ಲಿ ತಿಳೀಸಿದ್ದಾರೆ.

SCROLL FOR NEXT