ರಾಜ್ಯ

ನಿರ್ಭಯಾ ನಿಧಿ ಬಳಕೆ: ಕರ್ನಾಟಕ ಸೇರಿ ಹಲವು ರಾಜ್ಯಗಳು ವಿಫಲ

Manjula VN

ನಿಧಿಯಡಿಯಲ್ಲಿ ಕರ್ನಾಟಕಕ್ಕೆ ಸಿಕ್ಕಿದ್ದು ರೂ.191 ಕೋಟಿ, ಬಳಸಿದ್ದು ರೂ.13 ಕೋಟಿ

ನವದೆಹಲಿ: 2012ರ ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದ ಬಳಿಕ ಮಹಿಳೆಯರ ಸುರಕ್ಷತೆಗಾಗಿ 2013ರಲ್ಲಿ ಆಗಿನ ಯುಪಿಎ ಸರ್ಕಾರ ಸ್ಥಾಪನೆ ಮಾಡಿದ್ದ ನಿರ್ಭಯಾ ನಿಧಿಯಲ್ಲಿ ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳು ಒಂದೇ ಒಂದು ರೂಪಾಯಿಯನ್ನೂ ಬಳಕೆ ಮಾಡಿಲ್ಲ ಎಂಬ ಆತಂಕಕಾರಿ ವಿಚಾರ ಇದೀಗ ಬೆಳಕಿಗೆ ಬಂದಿದೆ. 

ಇನ್ನು ಶೇ.7ರಷ್ಟು ಮಾತ್ರ ನಿಧಿ ಬಳಕೆ ಮಾಡಿಕೊಂಡ ಕರ್ನಾಟಕ ರಾಜ್ಯವೂ ನಿರ್ಭಯಾ ನಿಧಿ ಬಳಕೆಯಲ್ಲಿ ತೀರಾ ಹಿಂದೆ ಬಿದ್ದಿದೆ. ಕರ್ನಾಟಕಕ್ಕೆ ರೂ.191 ಕೋಟಿ ಮೀಸಲಿಡಲಾಗಿತ್ತು. ಈ ಪೈಕಿ ಕೇವಲ ರೂ.13 ಕೋಟಿ ಮಾತ್ರವೇ ಸಬ್ದಳಕೆ ಮಾಡಿಕೊಂಡಿದೆ. 

ನಿರ್ಭಯಾ ನಿಧಿಗೆ ಕೇಂದ್ರ ಸರ್ಕಾರ ಒಟ್ಟಾರೆ ರೂ.1649 ಕೋಟಿ ಬಿಡುಗಡೆ ಮಾಡಿದೆ. ಈ ಪೈಕಿ ರಾಜ್ಯಗಳು ಮಾತ್ರ ಕೇಂದ್ರಾಡಳಿತ ಪ್ರದೇಶಗಳು ಕೇವಲ ರೂ.147 ಕೋಟಿ ಮಾತ್ರ ಪಡೆದುಕೊಂಡಿವೆ ಎಂದು ಸಚಿವ ಸ್ಮೃತಿ ಇರಾನಿಯವರೇ ಮಾಹಿತಿ ನೀಡಿದ್ದಾರೆ. 

ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ದೆಹಲಿ, ತೆಲಂಗಾಣ ಮತ್ತು ಉತ್ತರಪ್ರದೇಶ ರಾಜ್ಯಗಳಿಗ ನಿರ್ಭಯಾ ನಿಧಿಯಡಿ ಎತಿ ಹೆಚ್ಚು ಅನುದಾನ ಮೀಸಲಿಡಲಾಗಿದೆ. ಆದರೆ, ತನಗೆ ಮೀಸಲಾಗಿದ್ದ ರೂ.190.67 ಕೋಟಿ ನಲ್ಲಿ ತಮಿಳುನಾಡು ಕೇವಲ ರೂ.6 ಕೋಟಿ ಮಾತ್ರ ಸದ್ಬಳಕೆ ಮಾಡಿಕೊಂಡಿದೆ. 

ಇನ್ನು ಮಹಾರಾಷ್ಟ್ರ, ಸಿಕ್ಕಿಂ, ತ್ರಿಪುರ, ದಿಯು ಮತ್ತು ದಮನ್ ಗಳು ಈ ನಿಧಿಯ ನಯಾ ಪೈಸೆಯನ್ನೂ ಸಹ ಸದ್ಬಳಕೆ ಮಾಡಿಕೊಂಡಿಲ್ಲ. ಅಲ್ಲದೆ, ದೆಹಲಿಗೆ ಮೀಸಲಾಗಿದ್ದ ರೂ.390 ಕೋಟಿ ಪೈಕಿ ಶೇ.5ರಷ್ಟು ಮಾತ್ರವೇ ದೆಹಲಿ ಸರ್ಕಾರ ಬಳಕೆ ಮಕಾಡಿಕೊಂಡಿದೆ ಎಂದು ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ. 

ಮತ್ತೊಂದೆಡೆ ಈ ನಿಧಿ ಸದ್ಬಳಕೆಗೆ ಸಂಬಂಧಿಸಿದಂತೆ ರಾಜ್ಯಗಳು ಮತ್ತು ಕೇಂದ್ರ ಸರ್ಕಾರ ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿವೆ. ದೆಹಲಿಯಲ್ಲಿ ಮಹಿಳೆಯರ ಸುರಕ್ಷತೆಗಾಗಿ ನಿರ್ಧರಿಸಲಾಗಿದ್ದ ಸಿಸಿ ಕ್ಯಾಮೆರಾಗಳು ಮತ್ತು ಪ್ಯಾನಿಕ್ ಬಟನ್ ಗಳ ಅಳವಡಿಕೆಗೆ ಬಳಸಿಕೊಳ್ಳುತ್ತೇವೆಂಬ ತಮ್ಮ ಕೋರಿಕೆಯನ್ನು ಕೇಂದ್ರ ಸರ್ಕಾರವೇ ನಿರಾಕರಿಸಿತ್ತು. ಇದರಿಂದಾಗಿ ಈ ನಿಧಿಯ ಬಳಕೆ ಸಾಧ್ಯವಾಗಲಿಲ್ಲ ಎಂದು ಕೇಂದ್ರದ ವಿರುದ್ಧ ಕೇಜ್ರಿವಾಲ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

SCROLL FOR NEXT