ಸಂಗ್ರಹ ಚಿತ್ರ 
ರಾಜ್ಯ

ತುಮಕೂರು: ಅಂತರ್ಜಾತಿ ವಿವಾಹವಾಗಿದ್ದ ಜೋಡಿಯನ್ನು ಬೆನ್ನಟ್ಟಿ ಹಲ್ಲೆ, ಯುವಕ ಸಾವು

ಪರಸ್ಪರ ಪ್ರೀತಿಸಿ ಮದುವೆಗೆ ಆಗಿದ್ದ  ಅಂತರ್ಜಾತಿಯ ಯುವಜೋಡಿಯೊಂದನ್ನು  ಗುರುವಾರ ಸಂಜೆ ಕೊರಟಗೆರೆ ಬಳಿಯ ಜಿ ನಾಗೇನಹಳ್ಳಿಯಲ್ಲಿ ಆರು ಮಂದಿಯ ಗ್ಯಾಂಗ್‌ ಬೆನ್ನಟ್ಟಿ ಹಲ್ಲೆ ಮಾಡಿದೆ, ಈ ವೇಳೆ ಯುವಕ ಮೃತಪಟ್ಟು ಯುವತಿ ಗಂಭೀರ ಗಾಯಗೊಂಡಿದ್ದಾಳೆ. 

ತುಮಕೂರು: ಪರಸ್ಪರ ಪ್ರೀತಿಸಿ ಮದುವೆಗೆ ಆಗಿದ್ದ  ಅಂತರ್ಜಾತಿಯ ಯುವಜೋಡಿಯೊಂದನ್ನು  ಗುರುವಾರ ಸಂಜೆ ಕೊರಟಗೆರೆ ಬಳಿಯ ಜಿ ನಾಗೇನಹಳ್ಳಿಯಲ್ಲಿ ಆರು ಮಂದಿಯ ಗ್ಯಾಂಗ್‌ ಬೆನ್ನಟ್ಟಿ ಹಲ್ಲೆ ಮಾಡಿದೆ, ಈ ವೇಳೆ ಯುವಕ ಮೃತಪಟ್ಟು ಯುವತಿ ಗಂಭೀರ ಗಾಯಗೊಂಡಿದ್ದಾಳೆ.

ಮೃತ ಯುವಕ ಶ್ರೀನಿವಾಸ್ (25) ಕಳೆದ ಹದಿನೈದು ದಿನಗಳ ಹಿಂದೆ ಉದ್ಯಮಿ ಲೋಕೇಶ್ ಅವರ ಪುತ್ರಿ ಆಶಿತಾ ಅವರ ಜತೆ ವಿವಾಹವಾಗಿದ್ದ ್ ಬಳಿಕ ವಧುವನ್ನು ಆಂಧ್ರಪ್ರದೇಶದ ತಮ್ಮ ಊರಾದ ಸಂಕಮ್ಮನಹಳ್ಳಿಗೆ ಕರೆದೊಯ್ದಿದ್ದ.

ಇದಾಗಿ ಗುರುವಾರ ಜೋಡಿಯು ಕಾರಿನಲ್ಲಿ (ಕೆಎ -41, ಎನ್ -8888) ಬಾಗಲಗುಂಟೆಗೆ ಹಿಂದಿರುಗುತ್ತಿದ್ದಾಗ ಹಲ್ಲೆಕೋರರು ಗುಂಪಾಗಿ ಬಂದು ದಾಳಿ ಮಾಡಿದ್ದಾರೆ. ಗುರುವಾರ ಸಂಜೆ 6.30 ರ ಸುಮಾರಿಗೆ ಕೊರಟಗೆರೆ-ಬೆಂಗಳೂರು ರಾಜ್ಯ ಹೆದ್ದಾರಿ ಬಳಿ ವಾಹನವನ್ನು ಹಿಂಬಾಲಿಸಿದ ಗುಂಪು ಜೋಡಿಯ ಮೇಲೆ ಹಲ್ಲೆ ನಡೆಸಿದೆ.

ಯುವಕ  ಶ್ರೀನಿವಾಸ್ ಮೇಲೆ ಮಾರಕ ಆಯುಧಗಳಿಂದ ಹಲ್ಲೆ ನಡೆಸಿದ ಗುಂಪು  ಯುವಕ ಸತ್ತನೆನ್ನುವುದನ್ನು ಖಚಿತಪಡಿಸಿಕೊಳ್ಳುವವರೆಗೆ ಆತನನ್ನು ಹೊಡೆಯುವುದು ಬಿಡಲಿಲ್ಲ. ಇನ್ನು ಗಂಭೀರ ಗಾಯಗೊಂಡ ಯುವತಿಯನ್ನು ಪೋಲೀಸರು ರಕ್ಷಿಸಿದ್ದಾರೆ.

"ಸುಪಾರಿ" ಕೊ;ಲೆ ಹಾಗೂ ಹಳೆ ವೈಷಮ್ಯದ ಹಿನ್ನೆಲೆ ಈ ಕೊಲೆ ನಡೆದಿರಬಹುದು ಎಂದು ಪೋಲೀಸರು ಶಂಕಿಸಿದ್ದಾರೆ. "ಆರು ಆರೋಪಿಗಳಲ್ಲಿ ನಾಲ್ವರನ್ನು ಪತ್ತೆ ಮಾಡಿದ್ದು ಶೀಘ್ರವೇ ಬಂಧಿಸಲಾಗುತ್ತದೆ"ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ನಡಾಫ್ ಹೇಳಿದ್ದಾರೆ.

ಪೋಲೀಸ್ ಕ್ರಿಮಿನಲ್ ಗಳ ಪಟ್ಟಿಯಲ್ಲಿ ಹೆಸರಿದ್ದ ಶ್ರೀನಿವಾಸ್ ಬೆಂಗಳೂರಿನ ಬಾಗಲಗುಂಟೆ ಪ್ರದೇಶದಲ್ಲಿ ಹಣ್ಣು ಮಾರಾಟಗಾರರಾಗಿದ್ದು, ಗ್ಯಾಂಗ್‌ನೊಂದಿಗೆ ವೈಶಮ್ಯ ಹೊಂದಿದ್ದ ಎಂದು ಹೇಳಲಾಗಿದೆ. ಇನ್ನು ಲವೇ ವಾರಗಳ ಹಿಂದೆ ಇಬ್ಬರೂ ತಮ್ಮ ಮದುವೆಯನ್ನು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಾಯಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಹೆಸರು ಬಹುತೇಕ ಫೈನಲ್? ಕಾಂಗ್ರೆಸ್‌ನಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ..!

ದೆಹಲಿ ಸಭೆ ಬಳಿಕ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಮಯ್ಯ ಸಜ್ಜು: ಬೆಂಬಲಿಗರ ಜೊತೆ ಮಹತ್ವದ ಸಭೆ, ಹೆಚ್ಚಿದ ಕುತೂಹಲ

ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ; ಕಾಂಗ್ರೆಸ್ ಪವರ್ ಶಿಫ್ಟ್‌ಗೆ ಕೌಂಟ್‌ಡೌನ್ ಶುರು, ಡಿಕೆಶಿಗೆ ಸಿಎಂ ಪಟ್ಟ..?

ಬೆಂಗಳೂರಿಗೂ ಎಂಟ್ರಿ ಕೊಟ್ಟಿತೇ ಮಹಾಮಾರಿ ಎಬೋಲಾ? ಆಫ್ರಿಕಾದಿಂದ ಬಂದ ಮಹಿಳೆಯಲ್ಲಿ ಸೋಂಕಿನ ಲಕ್ಷಣ ಪತ್ತೆ, ಆರೋಗ್ಯ ಇಲಾಖೆ ಹೈ ಅಲರ್ಟ್

CMRL ಹಣ ಅಕ್ರಮ ವರ್ಗಾವಣೆ ಪ್ರಕರಣ: ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್ ನಿವಾಸದ ಮೇಲೆ ED ದಾಳಿ..!

SCROLL FOR NEXT