ರಾಜ್ಯ

ನಾಗರಹೊಳೆ ಉಪ ಸಂರಕ್ಷಣಾಧಿಕಾರಿ ಎ ಟಿ ಪೂವಯ್ಯಗೆ ಬಾಗ್ ಮಿತ್ರಾ ಪ್ರಶಸ್ತಿ 

Sumana Upadhyaya

ಬೆಂಗಳೂರು: ಕರ್ನಾಟಕದಲ್ಲಿ ಹುಲಿ ಸಂರಕ್ಷಣೆಗಾಗಿ ಮಾಡಿರುವ ಕೆಲಸಕ್ಕೆ ನಾಗರಹೊಳೆ ಹುಲಿ ರಕ್ಷಿತಾರಣ್ಯದ ಎ ಟಿ ಪೂವಯ್ಯ ಅವರಿಗೆ ರಾಷ್ಟ್ರಮಟ್ಟದ ಡಬ್ಲ್ಯುಡಬ್ಲ್ಯುಎಫ್ ಪಾಟಾ ಬಾಗ್ ಮಿತ್ರಾ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.


ವನ್ಯಜೀವಿಗಳ ಸಂರಕ್ಷಣೆಯಲ್ಲಿ ಕೆಲಸ ಮಾಡಿ 32 ವರ್ಷಗಳ ಅನುಭವ ಹೊಂದಿರುವ ಪೂವಯ್ಯ, ನಾಗರಹೊಳೆ, ಬಂಡೀಪುರ, ಪುಷ್ಪಗಿರಿ ಅರಣ್ಯಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಮರದ ಮಾಫಿಯಾಗಳು, ಅತಿಕ್ರಮಣಕಾರರು ಮತ್ತು ಭೂಗಳ್ಳರಿಂದ ವನ್ಯಜೀವಿಗಳನ್ನು ರಕ್ಷಿಸುವ ಅವರ ಕಾರ್ಯವನ್ನು ನೋಡಿ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.


ಇವರಿಗೆ 2008ರಲ್ಲಿ ರಾಷ್ಟ್ರೀಯ ಮಟ್ಟದ ಏಷ್ಯಾ ವನ್ಯಜೀವಿ ಸೇವಾ ಅಭಯಾರಣ್ಯ ಪ್ರಶಸ್ತಿ ಬಂದಿತ್ತು. ಕಳೆದ ಅಕ್ಟೋಬರ್ 9ರಂದು ರಾಜ್ಯಪಾಲ ವಜುಭಾಯಿ ವಾಲಾ ಅವರು 65ನೇ ವನ್ಯಜೀವಿ ಸಪ್ತಾಹ ಸಮಾರೋಪ ಕಾರ್ಯಕ್ರಮದಲ್ಲಿ ಗೌರವಿಸಿದ್ದರು. 

SCROLL FOR NEXT