ಬಿಎಂಟಿಸಿ ಕಂಡಕ್ಟರ್ ಮೇಲೆ ಆ್ಯಸಿಡ್ ದಾಳಿ ಪ್ರಕರಣ : ಬಾಮೈದ ಸೇರಿ ಇಬ್ಬರ ಬಂಧನ 
ರಾಜ್ಯ

ಬಿಎಂಟಿಸಿ ಕಂಡಕ್ಟರ್ ಮೇಲೆ ಆ್ಯಸಿಡ್ ದಾಳಿ ಪ್ರಕರಣ : ಬಾಮೈದ ಸೇರಿ ಇಬ್ಬರ ಬಂಧನ

ಬಿಎಂಟಿಸಿ ಮಹಿಳಾ ಕಂಡಕ್ಟರ್ ಓರ್ವಳ ಮೇಲೆ ನಡೆದಿದ್ದ  ಆ್ಯಸಿಡ್ ದಾಳಿಪ್ರಕರಣಕ್ಕೆ ಸಂಬಂಧಿಸಿ ಮಹಿಳೆಯ ಭಾವಮೈದ ಸೇರಿ ಇಬ್ಬರನ್ನು ಪೋಲೀಸರು ಬಂಧಿಸಿದ್ದಾರೆ. 

ಬೆಂಗಳೂರು: ಬಿಎಂಟಿಸಿ ಮಹಿಳಾ ಕಂಡಕ್ಟರ್ ಓರ್ವಳ ಮೇಲೆ ನಡೆದಿದ್ದ  ಆ್ಯಸಿಡ್ ದಾಳಿಪ್ರಕರಣಕ್ಕೆ ಸಂಬಂಧಿಸಿ ಮಹಿಳೆಯ ಭಾವಮೈದ ಸೇರಿ ಇಬ್ಬರನ್ನು ಪೋಲೀಸರು ಬಂಧಿಸಿದ್ದಾರೆ.

ಬೆಂಗಳುರು ಉತ್ತರ ವಿಭಾಗದ ಬಾಗಲಗುಂಟೆ ಠಾಣೆ ಪೊಲೀಸರುಗಾಯತ್ರಿನಗರದ ಅರುಣ್ ನಾಯಕ್ (38) ಮತ್ತು ನಾಗಸಂದ್ರದ ಕುಮಾರ್ ನಾಯಕ್ (30) ಎನ್ನುವವರನ್ನು ಬಂಧಿಸಿದ್ದು ಇದರಲ್ಲಿ ಅರುಣ್ ಬಿಎಂಟಿಸಿ ಬಸ್ ಚಾಲಕ, ನಿರ್ವಾಹಕನಾಗಿದ್ದ. ಸಂತ್ರ್ಸ್ಥೆ ಇಂದಿರಾ ಈತನ ಸಂಬಂಧಿಯಾಗಿದ್ದಲ್ಲದೆ ಸಲುಗೆಯಿಂದ ಇದ್ದರೆಂದು ಹೇಳಲಾಗಿದೆ.

ಆದರೆ ಕಾರಣಾಂತರದಿಂದ ಇಂದಿರಾ ಇತ್ತೀಚೆಗೆ ಅರುಣ್ ಜತೆ ಅಂತರ ಕಾಯ್ದುಕೊಂಡಿದ್ದು ಇದರಿಂಡ ಆರೋಪಿ ಅರುಣ್ ಕ್ರುದ್ದನಾಗಿದ್ದ. ಡಿ.19ರಂದು ಬೆಳಗಿನ ಜಾವ 5.30ರ ಸುಮಾರಿನಲ್ಲಿ ಬಸ್ ನಿರ್ವಾಹಕರಾಗಿದ್ದ ಇಂದಿರಾ ಮನೆಯಿಂದ ಬಸ್ ಡಿಪೋಗೆ ತೆರಳುವಾಗ ತನ್ನ ಸ್ನೇಹಿತನೊಡನೆ ಸೇರಿ ಬೈಕನ್ನೇರಿ ಬಂದು ಆ್ಯಸಿಡ್ ಎರಚಿ ಪರಾರಿಯಾಗಿದ್ದ,

ಆ್ಯಸಿಡ್ ದಾಳಿಯ ಬಳಿಕ ಇಂದಿರಾ ಕುತ್ತಿಗೆ ಹಾಗೂ ಇತರೆ ಭಾಗಗಳಲ್ಲಿ ಗಾಯಗಳಾಗಿದ್ದು ಈ ಸಂಬಂಧ ಆಕೆ ಪೋಲೀಸರಿಗೆ ದೂರಿತ್ತಿದ್ದರು. ದೂರು ಹಿನ್ನೆಲೆ ತನಿಖೆ ಕೈಗೊಂಡ ಇನ್ಸ್‍ಪೆಕ್ಟರ್ ವೆಂಕಟೇಗೌಡ ಮತ್ತು ಸಿಬ್ಬಂದಿಗಳ ತಂಡ  ಆರೋಪಿಗಳ ಬಂಧಿಸುವಲ್ಲಿ ಸಫಲವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇದು 'ತುರ್ತು ಪರಿಸ್ಥಿತಿಯಂತಹ ಸ್ಥಿತಿ'; ಹೋರಾಟ ಈಗಷ್ಟೇ ಆರಂಭ; ದೇಶಾದ್ಯಂತ CJP ಪ್ರತಿಭಟನೆ ನಡೆಯಲಿದೆ: ಸೌರವ್ ದಾಸ್

'ಸುಳ್ಳಿನ ದಾಳಿಯಿಂದ ನನ್ನ ಕುಗ್ಗಿಸಲು ಸಾಧ್ಯವಿಲ್ಲ': ವಾಟ್ಸಪ್ ಸ್ಟೇಟಸ್ ಮೂಲಕ HDKಗೆ ಹಾಸನ ಡಿಸಿ ಲತಾಕುಮಾರಿ ಟಾಂಗ್

'ಪ್ರೇಮದ ಊರಲಿ' ಚಿತ್ರ ವೀಕ್ಷಣೆಗೆ ಹೋಗಿದ್ದವರಿಗೆ ಶಾಕ್; ಮನೆಯಲ್ಲಿ ಕಳ್ಳ ಲಾಕ್, ಸಿಕ್ಕಿಬಿದ್ದಿದ್ದೇ ರೋಚಕ!

ಸಿಜೆಪಿ ಪ್ರತಿಭಟನೆ: ಮೆಟ್ರೋ, ಇಂಟರ್ನೆಟ್ ಸೇವೆ ಸ್ಥಗಿತ, ಅಕ್ರಮ ಬಂಧನಕ್ಕೆ ಸುಪ್ರೀಂ ಕೋರ್ಟ್ ಬ್ರೇಕ್; ಕೇಂದ್ರಕ್ಕೆ ಸೂಚನೆ

'ಸತ್ತ ಮೇಲೂ ಕಾಡ್ತಿದ್ದಾನೆ'; ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನಲ್ಲೂ ನಾನಾ ಪಾಟೇಕರ್ ಹೆಸರು ಎಳೆತಂದ ತನುಶ್ರೀ ದತ್ತಾ; ನೆಟ್ಟಿಗರ ಆಕ್ರೋಶ!