ಪೇಜಾವರ ವಿಶ್ವೇಶ ತೀರ್ಥ ಶ್ರೀ 
ರಾಜ್ಯ

ಪೇಜಾವರ ಶ್ರೀ  ಆರೋಗ್ಯ ಇನ್ನೂ ಗಂಭೀರವಾಗಿಯೇ ಇದೆ;  ಮಣಿಪಾಲ್ ಆಸ್ಪತ್ರೆ

ಮಣಿಪಾಲ್ ಕಸ್ತೂರಿ ಬಾ ಮಡಿಕಲ್  ಕಾಲೇಜು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ  ಚಿಕಿತ್ಸೆ ಕಲ್ಪಿಸಲಾಗುತ್ತಿರುವ  ಪೇಜಾವರ ವಿಶ್ವೇಶ ತೀರ್ಥ ಶ್ರೀ ಗಳ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಗಂಭೀರವಾಗಿಯೇ ಮುಂದುವರಿದಿದೆ.

ಉಡುಪಿ: ಮಣಿಪಾಲ್ ಕಸ್ತೂರಿ ಬಾ ಮಡಿಕಲ್  ಕಾಲೇಜು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ  ಚಿಕಿತ್ಸೆ ಕಲ್ಪಿಸಲಾಗುತ್ತಿರುವ  ಪೇಜಾವರ ವಿಶ್ವೇಶ ತೀರ್ಥ ಶ್ರೀ ಗಳ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಗಂಭೀರವಾಗಿಯೇ ಮುಂದುವರಿದಿದೆ.

ಶ್ರೀಗಳಿಗೆ  ಕೃತಕ ಉಸಿರಾಟ ವ್ಯವಸ್ಥೆ ಅಳವಡಿಸಲಾಗಿದ್ದು, ಆರೋಗ್ಯ ಸ್ಥಿತಿ  ಗಂಭೀರವಾಗಿಯೇ ಮುಂದುವರಿದಿದೆ ಎಂದು  ಆಸ್ಪತ್ರೆ  ಸೋಮವಾರ ಬಿಡುಗಡೆಗೊಳಿಸಿರುವ ಹೇಳಿಕೆಯಲ್ಲಿ ತಿಳಿಸಿದೆ.

ಉಸಿರಾಟದ ಸಮಸ್ಯೆ ಹಾಗೂ ಹೃದಯ ಸಂಬಂಧಿ ತೊಂದರೆಗಳು ಕಾಣಿಸಿಕೊಂಡ ನಂತರ  ಪೇಜಾವರ ಶ್ರೀಗಳನ್ನು ಶುಕ್ರವಾರ ಮುಂಜಾನೆ  ಕೆಎಂಸಿ ಆಸ್ಪತ್ರೆಗೆ  ದಾಖಲಿಸಲಾಗಿತ್ತು. 

ಭಾನುವಾರ  ಆಸ್ಪತ್ರೆಗೆ ಭೇಟಿ ನೀಡಿದ್ದ  ಸುಪ್ರಸಿದ್ದ  ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ,  ಶ್ರೀ ಮಠದ ಕಿರಿಯ ಶ್ರೀ ವಿಶ್ವ ಪ್ರಸನ್ನ ತೀರ್ಥರು,  ಶ್ರೀಗಳ ಆರೋಗ್ಯ ಸುಧಾರಣೆ ಕುರಿತು  ವೈದ್ಯರಿಂದ  ಮಾಹಿತಿ ಪಡೆದುಕೊಂಡಿದ್ದರು.

ಪೇಜಾವರ ಶ್ರೀಗಳ  ಆಪ್ತ ಕಾರ್ಯದರ್ಶಿ  ವಿಷ್ಣುಮೂರ್ತಿ ಆಚಾರ್ಯ,   ಶ್ರೀಗಳು ಚಿಕಿತ್ಸೆಗೆ  ಸ್ಪಂದಿಸುತ್ತಿದ್ದು, ಅವರ ಆರೋಗ್ಯ ಕುರಿತು ವದಂತಿಗಳನ್ನು ಹಬ್ಬಿಸದಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಸೋಂಕು ತಗುಲುವ ಭೀತಿಯಿಂದ, ಪೇಜಾವರ ಶ್ರೀಗಳ ಬಳಿ  ತೆರಳಲು ಭಕ್ತಾಧಿಗಳನ್ನು ನಿರಾಕರಿಸಲಾಗುತ್ತಿದೆ  ಎಂದು ಸ್ಪಷ್ಟಪಡಿಸಿದರು.

ಶ್ರೀಗಳು ಶೀಘ್ರ ಚೇತರಿಸಿಕೊಳ್ಳಲಿ ಎಂದು ಕೋರಿ  ಭಕ್ತಾಧಿಗಳು  ಸೋಮವಾರ ಕಾರ್ಕಳದ  ಶ್ರೀ ರಾಘವೇಂದ್ರ ಮಠದಲ್ಲಿ  ವಿಷ್ಣ ಸಹಸ್ರನಾಮ  ಪಠಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

ಆರೋಗ್ಯ ಇಲಾಖೆಯಿಂದ ಉರ್ದು ಭಾಷೆ ಆಹ್ವಾನ ಪತ್ರಿಕೆ: ಜನರನ್ನು ದಾರಿ ತಪ್ಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದೀರಾ?

SCROLL FOR NEXT