ರಾಜ್ಯ

ಚಾಲನೆಗಾಗಿ ಕಾಯುತ್ತಿದೆ ನಗರದಲ್ಲಿ ನಿರ್ಮಾಣಗೊಂಡಿರುವ ಅಕ್ರಮ ವಲಸಿಗರನ್ನಿಡುವ ಮೊದಲ ನಿರಾಶ್ರಿತ ಕೇಂದ್ರ

Manjula VN

ಬೆಂಗಳೂರು: ಅಕ್ರಮವಾಗಿ ನೆಲೆಸಿರುವ ವಿದೇಶಿಗರನ್ನು ಗಡಿಪಾರು ಮಾಡುವವರೆಗೂ ಬಂಧನದಲ್ಲಿರಿಸಲು ನಿರ್ಮಾಣವಾಗುತ್ತಿದ್ದ ನಿರಾಶ್ರಿತ ಕೇಂದ್ರ ಬಹುತೇಕ ಪೂರ್ಣಗೊಂಡಿದ್ದು, ಚಾಲನೆಗೆ ಸಿದ್ಧಗೊಂಡು ನಿಂತಿದೆ ಎಂದು ವರದಿಗಳು ತಿಳಿಸಿವೆ. 

ನೆಲಮಂಗಲ ಹತ್ತಿರದ ಸೊಂಡೆಕೊಪ್ಪದಲ್ಲಿದ್ದ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ವಿದ್ಯಾರ್ಥಿಗಳ ವಸತಿ ನಿಲಯವನ್ನು ನಿರಾಶ್ರಿತರ ಕೇಂದ್ರವನ್ನಾಗಿ ಪರಿವರ್ತನೆಗೊಳಿಸಲಾಗಿದೆ. ಈಗಾಗಲೇ ಇದರ ಕಾಮಗಾರಿ ಪೂರ್ಣಗೊಂಡಿದೆ ಎಂದು ಹೇಳಲಾಗುತ್ತಿದೆ. 

1992ರಲ್ಲಿ ರಾಜ್ಯ ಸಮಾಜ ಕಲ್ಯಾಣ ಇಲಾಖೆಯು ನೆಲಮಂಗಲ ಸಮೀಪದ ಸೊಂಡೆಕೊಪ್ಪದಲ್ಲಿ ಎಸ್'ಸಿ, ಎಸ್ಟಿ, ಒಬಿಪಿ ವಿದ್ಯಾರ್ಥಿಗಳ ವಸತಿ ನಿಲಯವನ್ನು ಸ್ಥಾಪನೆ ಮಾಡಿತ್ತು. ವಿದ್ಯಾರ್ಥಿಗಳು ಕಡಿಮಯಾದ ಹಿನ್ನಲೆಯಲ್ಲಿ 2008ರಲ್ಲಿ ಇದನ್ನು ಮುಚ್ಚಲಾಗಿತ್ತು. ಅದನ್ನು ನಿರಾಶ್ರಿತರ ಕೇಂದ್ರವಾಗಿ ಬದಲಾಯಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು. ಸಮಾಜ ಕಲ್ಯಾಣ ಇಲಾಖೆ ಒಪ್ಪಿಗೆ ಪಡೆದ ಬಳಿಕ ಗೃಹ ಇಲಾಖೆ ಅದರ ನವೀಕರಣಕ್ಕೆ ಚಾಲನೆ ನೀಡಿತ್ತು. 

ಕಟ್ಟಡಲ್ಲಿ ಆರು ಕೊಠಡಿಗಳು, ಒಂದು ಅಡುಗೆ ಮನೆ, ಉಗ್ರಾಣ ಹಾಗೂ ಶೌಚಾಲಯಗಳಿವೆ. ಇದು ನಿರ್ಬಂಧಿತ ಪ್ರದೇಶವಾಗಿದ್ದು, ಸುತ್ತಲು 4 ಸುತ್ತು ತಂತಿ ಬೇಲಿಯನ್ನು ಹಾಕಲಾಗಿದೆ. ಅಲ್ಲದೆ, 10 ಅಡಿ ಎತ್ತರದ ಗೋಡೆಗಳ ನಿರ್ಮಾಣ ಮಾಡಲಾಗಿದೆ. ಕಟ್ಟಡದ ಎರಡೂ ಕಡೆ ವೀಕ್ಷಣಾ ಗೋಪುರ ಕಟ್ಟಲಾಗಿದ್ದು, ದಿನದ 24 ಗಂಟೆಗಳೂ ಕೂಡ ಭದ್ರತಾ ಸಿಬ್ಬಂದಿಗಳು ಹದ್ದಿನ ಕಣ್ಣಿಡಲಿದ್ದಾರೆ. 

ಮೊದಲು ಈ ಪ್ರದೇಶ ಮಹಿಳಾ ಹಾಸ್ಟೆಲ್ ಆಗಿತ್ತು. 6 ತಿಂಗಳ ಹಿಂದಷ್ಟೇ ಕಾಮಗಾರಿ ಆರಂಭಗೊಂಡಿದ್ದು, ಜನವರಿ ಮೊದಲ ವಾರದಲ್ಲಿ ನಿರಾಶ್ರಿತ ಕೇಂದ್ರಗಳಿಗೆ ಚಾಲನೆ ದೊರಕುವ ಸಾಧ್ಯತೆಗಳಿವೆ ಎಂದು ನಿರ್ಮಾಣಕಾರ್ಯದ ಉಸ್ತುವಾರಿ ಹೇಳಿದ್ದಾರೆ. 

ಈಗಾಗಲೇ ಕೇಂದ್ರಗಳಲ್ಲಿ ದಿನಸಿ ಸಾಮಾಗ್ರಿಗಳನ್ನು ಇರಿಸಲಾಗುತ್ತಿದ್ದು, ಯಾವುದೇ ಸಮಯದಲ್ಲಿ ಬೇಕಾದರೂ ಕೇಂದ್ರಗಳಿಗೆ ಚಾಲನೆ ಸಿಗಬಹುದು. ಹೊಸವರ್ಷದ ದಿನದಂದೇ ಚಾಲನೆ ಸಿಕ್ಕರೂ ಸಿಗಬಹುದು. ಈಗಾಗಲೇ ಐವರು ಪೊಲೀಸರ ಜೀಪ್ ಕೇಂದ್ರಗಳ ಮೇಲೆ ಕಣ್ಗಾವಲಿರಿಸಿದೆ ಎಂದು ವರದಿಗಳು ತಿಳಿಸಿವೆ. 

ಸ್ಥಳವನ್ನು ಗ್ರಾಮ ಪಂಚಾಯತಿ ಕಚೇರಿಗೆ ಬಳಸಿಕೊಳ್ಳಲು ನಿರ್ಧರಿಸಿದ್ದೆವು. ಆದರೆ, ಸಮಾಜ ಕಲ್ಯಾಣ ಇಲಾಖೆ ನಮ್ಮ ಮಾಹಿತಿ ನೀಡದೆಯೇ ನಿರ್ಧಾರ ಕೈಗೊಂಡಿದೆ. ಇದೀಗ ಸ್ಥಳದಲ್ಲಿ ನಿರಾಶ್ರಿತ ಕೇಂದ್ರ ನಿರ್ಮಾಣಗೊಂಡಿದೆ ಎಂಜುಮಾಜಿ ಜಿಲ್ಲಾ ಪಂಚಾಯತ್ ಸದಸ್ಯರೊಬ್ಬರು ಹೇಳಿದ್ದಾರೆ. 

ಈ ಹಿಂದೆ ಹೇಳಿಕೆ ನೀಡಿದ್ದ ಗೃಹ ಸಚಿವ ಬಸವರಾಜ ಬೊಮ್ಮಾಯಿಯವರು, ಶೀಘ್ರದಲ್ಲಿಯೇ ರಾಜ್ಯದಲ್ಲಿಯೂ ಎನ್ಆರ್'ಸಿ ಜಾರಿಗೆ ತರಲಾಗುತ್ತದೆ ಎಂದು ಹೇಳಿದ್ದರು. 

SCROLL FOR NEXT