ರಾಜ್ಯ

ಸ್ವಚ್ಛ ಭಾರತದಿಂದ ಪ್ರೇರಣೆ: ಈ ಗ್ರಾಮದಲ್ಲಿ ಯಶಸ್ವಿಯಾಗಿದೆ ಸ್ವಚ್ಛ ಶನಿವಾರ ಯೋಜನೆ! 

Srinivas Rao BV

ಬೆಂಗಳೂರು: ಸ್ವಚ್ಛ ಭಾರತದಿಂದ ಪ್ರೇರಣೆ ಪಡೆದ ಗ್ರಾಮನಸ್ಥರು ತಮ್ಮ ಗ್ರಾಮವನ್ನು ಸ್ವಚ್ಛವಾಗಿರಿಸಿಕೊಳ್ಳುವುದಕ್ಕೆ ಸ್ವಚ್ಛ ಶನಿವಾರ ಯೋಜನೆ ರೂಪುಗೊಳಿಸಿದ್ದು, ಅತ್ಯಂತ ಯಶಸ್ವಿಯಾಗಿದೆ. 

ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಇಂಥದ್ದೊಂದು ಯೋಜನೆ ಕೈಗೊಂಡಿದ್ದು, ಸ್ವಯಂ ಸೇವಕರು ಪ್ರತಿ ತಿಂಗಳ ಶನಿವಾರದಂದು ಗ್ರಾಮವನ್ನು ಸ್ವಚ್ಛಗೊಳಿಸುವ ಕೆಲಸ ಮಾಡುತ್ತಾರೆ. 

ಸ್ವಚ್ಛ ಭಾರತ್ ನೋಡಲ್ ಅಧಿಕಾರಿ ಕಿಶೋರ್ ಕುಮಾರ್ ಈ ಸ್ವಚ್ಛ ಶನಿವಾರ ಕಾರ್ಯಕ್ರಮದ ರುವಾರಿಯಾಗಿದ್ದು, ಪೂರ್ವ ಬೆಂಗಳೂರಿನ ಗ್ರಾಮಗಳಲ್ಲಿ ಮೊದಲ ಬಾರಿಗೆ ಜಾರಿಗೆ ತಂದಿದ್ದರೆಂದು ಗ್ರಾಮ ಪಂಚಾಯಿತಿ ಅಧಿಕಾರಿಗಳು ಹೇಳಿದ್ದಾರೆ. 

ಒಮ್ಮೆ ಈ ಯೋಜನೆ ಯಶಸ್ವಿಯಾಗುತ್ತಿದ್ದಂತೆಯೇ 96 ಗ್ರಾಮ ಪಂಚಾಯ್ತಿಗಳಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ, ದಕ್ಷಿಣವನ್ನು ಹೊರತುಪಡಿಸಿ ಉಳಿದೆಲ್ಲಾ ಗ್ರಾಮಪಂಚಾಯ್ತಿಗಳೂ ಇದನ್ನು ಅಳವಡಿಸಿಕೊಂಡಿದೆ. ಈ ಪ್ರಕಾರವಾಗಿ ಪ್ರತಿ 3 ನೇ ಶನಿವಾರ ಸ್ವಚ್ಛ ಶನಿವಾರವನ್ನಾಗಿ ಆಚರಣೆ ಮಾಡಲಾಗುತ್ತಿದೆ ಎಂದು ಸ್ವಚ್ಛ ಭಾರತ್ ಮಿಷನ್ ನೋಡಲ್ ಅಧಿಕಾರಿ ಡಾ.ಸಿದ್ದರಾಮಯ್ಯ ಹೇಳಿದ್ದಾರೆ. ಪ್ರತಿ ತಿಂಗಳೂ ಗ್ರಾಮಪಂಚಾಯ್ತಿಗಳ ಮುಖ್ಯಸ್ಥರು ಸಭೆ ನಡೆಸುತ್ತಾರೆ. ಆ ತಿಂಗಳಲ್ಲಿ ಸ್ವಚ್ಛಗೊಳಿಸಬೇಕಿರುವ ಒಂದು ಗ್ರಾಮವನ್ನು ಆಯ್ಕೆ ಮಾಡಲಾಗುತ್ತದೆ. ಸ್ವಚ್ಛ ಶನಿವಾರ ಯೋಜನೆಗೆ ಯುವಕರು, ಹಿರಿಯರು ಸೇರಿದಂತೆ ಎಲ್ಲರಿಂದಲೂ ಸಕಾರಾತ್ಮಕ ಪ್ರತಿಸ್ಪಂದನೆ ದೊರೆತಿದೆ. 

SCROLL FOR NEXT