ಪೇಜಾವರ ಶ್ರೀಗಳು 
ರಾಜ್ಯ

ಪೇಜಾವರ ಶ್ರೀಗಳ 9 ದಿನಗಳ ಜೀವನ್ಮರಣ ಹೋರಾಟ: ಅರೋಗ್ಯ ನಿರ್ಲಕ್ಷ್ಯಿಸಿದ್ರಾ ಶ್ರೀಗಳು?

ತೀವ್ರ ಉಸಿರಾಟದ ಸಮಸ್ಯೆ ಹಾಗೂ ನ್ಯುಮೋನಿಯಾದಿಂದ ಬಳಲುತ್ತಿದ್ದ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ(88) ಭಾನುವಾರ ಪೇಜಾವರ ಮಠದಲ್ಲಿ ನಿಧನರಾಗಿದ್ದಾರೆ. ಸತತ 9 ದಿನಗಳಿಂದ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಶ್ರೀಗಳು ಚಿಕಿತ್ಸೆಗೆ ಸ್ಪಂದಿಸದೆ ಉಸಿರು ಚೆಲ್ಲಿದ್ದಾರೆ. 

ಉಡುಪಿ: ತೀವ್ರ ಉಸಿರಾಟದ ಸಮಸ್ಯೆ ಹಾಗೂ ನ್ಯುಮೋನಿಯಾದಿಂದ ಬಳಲುತ್ತಿದ್ದ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ(88) ಭಾನುವಾರ ಪೇಜಾವರ ಮಠದಲ್ಲಿ ನಿಧನರಾಗಿದ್ದಾರೆ. ಸತತ 9 ದಿನಗಳಿಂದ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಶ್ರೀಗಳು ಚಿಕಿತ್ಸೆಗೆ ಸ್ಪಂದಿಸದೆ ಉಸಿರು ಚೆಲ್ಲಿದ್ದಾರೆ. 

ಡಿಸೆಂಬರ್ 19 ರಂದು ರಾತ್ರಿ 9.30ಕ್ಕೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಾಗ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನ್ಯುಮೋನಿಯಾ ಇದೆ, ತಕ್ಷಣ ಚಿಕಿತ್ಸೆ ಆರಂಭಿಸಬೇಕು ಎಂದು ವೈದ್ಯರು ಸೂಚಿಸಿದರೂ ಶ್ರೀಗಳು ಅಲಕ್ಷ್ಯಿಸಿದರು. 

ಬೆಳಗ್ಗೆ ಬೇಗ ದೇವರ ಪೂಜೆ ಮುಗಿಸಿ ಬರುತ್ತೇನೆ ಎಂದು ಮಠಕ್ಕೆ ಹಿಂದಿರುಗಿದ ಶ್ರೀಗಳು, ಬೆಳಗ್ಗೆ ಅದೇ ಆಸ್ಪತ್ರೆಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಂದಿದ್ದರು. ಆವೇಳೆಗಾಗಲೇ ಅವರ ಆರೋಗ್ಯ ಗಂಭೀರವಾಗಿತ್ತು ಎಂದು ಹೇಳಲಾಗಿದೆ.

ಡಿ.20ರಂದು ನಸುಕಿನ 3 ಗಂಟೆಗೆ ಪೇಜಾವರ ಶ್ರೀಗಳು ಅಸ್ವಸ್ಥರಾದರು. ನಂತರ ಅವರನ್ನು ಕೆಎಂಸಿಗ ಆಸ್ಪತ್ಕೆಗೆ ದಾಖಲಿಸಲಿಸಲಾಯಿತು, ನ್ಯುಮೋನಿಯಾ ಸೋಂಕು ಪತ್ತೆಯಾಗಿತ್ತು.

ಶ್ರೀಗಳ ಆರೋಗ್ಯ ಗಂಭೀರವಾದ ಮೇಲೆ  ವೆಂಟಿಲೇಟರ್ ಅಳವಡಿಸಲಾಯಿತು, ಡಾ. ಸುಧಾ ವಿದ್ಯಾಸಾಗರ ನೇತೃತ್ವದ ವೈದ್ಯರ ತಂಡದಿಂದ ಚಿಕಿತ್ಸೆ ಆರಂಭಿಸಿತು

ಡಿಸೆಂಬರ್ 21ರಂದು ಚಿಕಿತ್ಸೆಗೆ ಸ್ಪಂದಿಸಿದ ಶ್ರೀಗಳು,  ಡಿಸೆಂಬರ್  22ರಂದು ಬೆಂಗಳೂರಿನ ಮಣಿಪಾಲ್ ವೈದ್ಯರ ಆಗಮನ, ಡಿಸೆಂಬರ್ 23ರಂದು ರಕ್ತದೊತ್ತಡ ನಿಯಂತ್ರಣ, ಏಮ್ಸ್‌ ವೈದ್ಯರ ನೆರವು

ಡಿಸೆಂಬರ್ 24ರಂದು ಚಿಕಿತ್ಸೆಗೆ ಅಲ್ಪ ಸ್ಪಂದನೆ, ಸ್ವಲ್ಪ ಚೇತರಿಕೆ, ಡಿಸೆಂಬರ್ 25ರಂದು ಶ್ವಾಸಕೋಶ ನಿಧಾನವಾಗಿ ಚೇತರಿಕೆ, ಪ್ರಜ್ಞಾಹೀನ ಸ್ಥಿತಿ ತಲುಪಿದ ಶ್ರೀಗಳು.

ಡಿಸೆಂಬರ್ 26ರಂದು  ಮತ್ತೆ ಆರೋಗ್ಯ ದಿಢೀರ್ ಏರುಪೇರು, ಗಂಭೀರ, ಡಿಸೆಂಬರ್ 27ರಂದು ಆರೋಗ್ಯ ತೀರಾ ಗಂಭೀರ, ದೇಹಸ್ಥಿತಿ ಇಳಿಮುಖ

ಡಿಸೆಂಬರ್ 28ಕ್ಕೆ ಮಿದುಳು ನಿಷ್ಕ್ರಿಯ.  ಡಿಸೆಂಬರ್ 29ರಂದು ಮಠಕ್ಕೆ ಶ್ರೀಗಳ ಸ್ಥಳಾಂತರ. ಬೆಳಗ್ಗೆ 9.20ಕ್ಕೆ ನಿಧನವಾಗಿದ್ದರೆಂದು ಅಧಿಕೃತ ಘೋಷಣೆ ಮಾಡಲಾಯಿತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

CJP protest: ಮಮತಾ ಬ್ಯಾನರ್ಜಿ, ನೇಹಾ ಬೋರಾ, ಯೋಗೇಂದ್ರ ಯಾದವ್ ವಶಕ್ಕೆ ಪಡೆದ ಪೊಲೀಸರು

CEC ಜ್ಞಾನೇಶ್ ಕುಮಾರ್ ವಿರುದ್ಧ ಸಿಜೆಪಿ ಪ್ರತಿಭಟನೆ ವೇಳೆ 2 ಪೊಲೀಸರಿಗೆ ಕಲ್ಲೇಟು!