ಸಂಗ್ರಹ ಚಿತ್ರ 
ರಾಜ್ಯ

ಹೊಸ ವರ್ಷಾಚರಣೆ: ತುರ್ತು ಸೇವೆಗೆ 23 ಆರೋಗ್ಯ ಕವಚ 108 ವಾಹನ ಸಜ್ಜು

ಹೊಸ ವರ್ಷಾಚರಣೆಯ ವೇಳೆ ಸಂಭವಿಸುವ ರಸ್ತೆ ಅಪಘಾತಗಳಿಂದ ಉಂಟಾಗುವ ಜೀವ ಹಾನಿಯನ್ನು ತಡೆಯಲು ಜಿಲ್ಲೆಯಾದ್ಯಂತ 23  ಆರೋಗ್ಯ ಕವಚ 108 ಅಂಬ್ಯುಲೆನ್ಸ್ ಗಳ ಸೇವೆಯನ್ನು ಸುಸಜ್ಜಿತಗೊಳಿಸಲಾಗಿದೆ ಎಂದು 108 ಜಿಲ್ಲಾ ವ್ಯವಸ್ಥಾಪಕ ಸಂತೋಷ ಬೋಡಾ ತಿಳಿಸಿದ್ದಾರೆ. 

ಬಾಗಲಕೋಟೆ: ಹೊಸ ವರ್ಷಾಚರಣೆಯ ವೇಳೆ ಸಂಭವಿಸುವ ರಸ್ತೆ ಅಪಘಾತಗಳಿಂದ ಉಂಟಾಗುವ ಜೀವ ಹಾನಿಯನ್ನು ತಡೆಯಲು ಜಿಲ್ಲೆಯಾದ್ಯಂತ ೨೩  ಆರೋಗ್ಯ ಕವಚ ೧೦೮ ಅಂಬ್ಯುಲೆನ್ಸ್ ಗಳ ಸೇವೆಯನ್ನು ಸುಸಜ್ಜಿತಗೊಳಿಸಲಾಗಿದೆ ಎಂದು 108 ಜಿಲ್ಲಾ ವ್ಯವಸ್ಥಾಪಕ ಸಂತೋಷ ಬೋಡಾ ತಿಳಿಸಿದ್ದಾರೆ. 

ಸಾಮಾನ್ಯ ದಿನಗಳಿಗಿಂತ ಹೊಸ ವರ್ಷದ ಆಚರಣೆಗಳಲ್ಲಿ ಶೇ.30 ರಿಂದ 35 ರಷ್ಟು ಅಪಘಾತದ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ 23 ಅಂಬುಲೇನ್ಸ್ ಗಳನ್ನು ಸುಸಜ್ಜಿತಗೊಳಿಸಲಾಗಿದೆ. 108 ಅಂಬ್ಯುಲೆನ್ಸ್ ಸೇವೆಯು ಕರ್ನಾಟಕ ರಾಜ್ಯ ಪೋಲಿಸ್ ಇಲಾಖೆಯೊಂದಿಗೆ ನಿಕಟ ಸಹಕಾರವನ್ನು ಹೊಂದಿದ್ದು, ಇದು ದೊಡ್ಡ ಪ್ರಮಾಣದಲ್ಲಿ ಹೊಸ ವರ್ಷಾಚರಣೆ ನಡೆಯುವ ನಗರಗಳಲ್ಲಿರುವ ಪೋಲಿಸ್ ನಿಯಂತ್ರಣ ಕೇಂದ್ರದ ಹಿರಿಯ ಅಧಿಕಾರಿಗಳಿಗೆ ನೇರ ಸಂಪರ್ಕ ಕಲ್ಪಿಸುವ ಮೂಲಕ ಅವಘಡ ಸಂಭವಿಸಿದ ಸ್ಥಳಕ್ಕೆ ತ್ವರಿತವಾಗಿ ತಲುಪುವ ನಿಟ್ಟಿನಲ್ಲಿ ನೆರವಾಗುತ್ತದೆ. 

ಹೊಸ ವರ್ಷದ ರಾತ್ರಿ 11.45 ರಿಂದ 12.20 ವರೆಗೆ ಮೋಬೈಲ್ ಫೋನ್ ಸಂಪರ್ಕಗಳು ಬ್ಯೂಸಿ ಮತ್ತು ಜಾಸ್ತಿಯಾಗುವ ಸಂಭವವಿರುವುದರಿಂದ ಪೋಲಿಸ್ ನಿಸ್ತಂತು (WiFi) ಜಾಲದ ಮೂಲಕ ಅವಘಡಗಳಿಗೆ ಸಂಭಂದಿಸಿದ ಮಾಹಿತಿಯನ್ನು ಸ್ವೀಕರಿಸುವುದಕ್ಕಾಗಿ ಅಂಬ್ಯುಲೆನ್ಸ್ ಗಳನ್ನು ಹತ್ತಿರದ ಪೋಲಿಸ್ ಠಾಣೆ, ಆಸ್ಪತ್ರೆ ಮತ್ತು ಅಗ್ನಿಶಾಮಕ ಇತ್ಯಾದಿಗಳಲ್ಲಿ ನಿಯೊಜಿಸಲಾಗಿದೆ. ಕಳೆದ ವರ್ಷಗಳಲ್ಲಿ ನಡೆದಿರುವ ಅವಘಡಗಳ ವರದಿ ಹಿನ್ನಲೆಯಲ್ಲಿ ಅಂಬುಲೇನ್ಸ್ಗಳನ್ನು ಸಜ್ಜುಗೊಳಿಸಲಾಗಿದೆ.

ಹೆಚ್ಚಿನ ತುರ್ತು ಪರಿಸ್ಥಿತಿಗಳನ್ನು ನಿರೀಕ್ಷಿಸುವ ಪ್ರದೇಶಗಳಲ್ಲಿ ಹೆಚ್ಚುವರಿ ಅಂಬ್ಯುಲೆನ್ಸ್ ಗಳನ್ನು ನಿಯೋಜಿಸಲಾಗುವುದು. ಹೆಚ್ಚುವರಿ ಸೇವೆಗಾಗಿ ಕಾಲ್‌ಸೆಂಟರ್ ಮತ್ತು ಅಂಬ್ಯುಲೆನ್ಸ್ ಸಿಬ್ಬಂದಿಯ ಸಾಪ್ತಾಹಿಕ ರಜೆಗಳನ್ನು ರದ್ದುಗೊಳಿಸಲಾಗಿದೆ. ಮುಂಜಾಗೃತವಾಗಿಯೇ ಎಲ್ಲಾ ಅಂಬ್ಯುಲೆನ್ಸ್ಗಳಲ್ಲಿ ಇಂಧನ, ಆಮ್ಲಜನಕ, ವೈದ್ಯಕೀಯ ಉಪಕರಣಗಳನ್ನು ಇರಿಸಲಾಗಿದೆ.

ಹೆಚ್ಚಿನ ಸಂಖ್ಯೆಯ ಸಾವು ನೋವುಗಳು, ಅನಾಹುತಗಳ ಮಾಹಿತಿಯು ಪೋಲಿಸ್, ಅಗ್ನಿಶಾಮಕ ಸೇವೆ ಮತ್ತು ಆರೋಗ್ಯ ಇಲಾಖೆಗಳೊಂದಿಗೆ ಹಂಚಿಕೊಳ್ಳಲಾಗುತ್ತಿದ್ದು, 108 ತುರ್ತು ಪ್ರತಿಸ್ಪಂದನ ಕೇಂದ್ರಕ್ಕೆ ಕರೆಗಳ ಸಂಖ್ಯೆ ಅತ್ಯಧಿಕವಾದಂತೆ ತುರ್ತು ಪ್ರತಿ ಸ್ಪಂದನ ಕೇಂದ್ರಕ್ಕೆ ಹೆಚ್ಚುವರಿ ತುರ್ತು ಪ್ರತಿ ಸ್ಪಂದನ ಕೇಂದ್ರ ವೈದ್ಯರುಗಳನ್ನು ಒದಗಿಸುವದೂ ಸೇರಿದಂತೆ ಹೆಚ್ಚುವರಿ ಸಂಪನ್ಮೂಲಗಳನ್ನು ಒದಗಿಸಕೊಡಲಾಗುವದು. 108ಗೆ ಕರೆ ಮಾಡಿದಾಗ ಸಂಪರ್ಕ ಸಿಗದಿದ್ದಲ್ಲಿ 108ನ ಜಿಲ್ಲಾ ವ್ಯವಸ್ಥಾಪಕರು ಮೊನಂ.(೯೮೮೬೩೮೬೯೯೯) 988638999 ಗೆ ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

ಸಂಭಾಲ್ ದೇವಸ್ಥಾನದಿಂದ ಸಾಯಿಬಾಬಾ ವಿಗ್ರಹಕ್ಕೆ ಗೇಟ್ ಪಾಸ್! ಗಂಗಾ ನದಿಯಲ್ಲಿ ವಿಸರ್ಜನೆ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

SCROLL FOR NEXT