ರಾಜ್ಯ

ಎಚ್ ಎಎಲ್ ವಿಮಾನ ನಿಲ್ದಾಣದಲ್ಲಿ ತರಬೇತಿ ಯುದ್ಧ ವಿಮಾನ ಮಿರೇಜ್ 2000 ಪತನ, ಪೈಲಟ್ ಗಳ ಸಾವು

Srinivasamurthy VN
ಬೆಂಗಳೂರು: ಎಚ್ ಎಎಲ್ ವಿಮಾನ ನಿಲ್ದಾಣದಲ್ಲಿ ಭಾರತೀಯ ಸೇನೆಯ ತರಬೇತಿ ಲಘು ಯುದ್ಧ ವಿಮಾನ ಪತನವಾಗಿದ್ದು, ಘಟನೆಯಲ್ಲಿ ಇಬ್ಬರು ಪೈಲಟ್ ಗಳು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಭಾರತೀಯ ವಾಯು ಸೇನೆಯ ತರಬೇತಿ ಲಘು ಯುದ್ಧ ವಿಮಾನ ಮಿರಾಜ್ 2000 ಪತನವಾಗಿದ್ದು, ವಿಮಾನದೊಳಗಿದ್ದ ಇಬ್ಬರು ತರಬೇತಿ ಪೈಲಟ್ ಗಳ ಪೈಕಿ ಓರ್ವ ಪೈಲಟ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಮತ್ತೋರ್ವ ಪೈಲಟ್ ಚಿಕಿತ್ಸೆ ಆಸ್ಪತ್ರೆಗೆ ದಾಖಲಿಸಿದಾಗ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಮೃತ ಪೈಲಟ್ ಗಳನ್ನು ಸ್ಕಾಡ್ರನ್ ಲೀಡರ್ ಗಳಾದ ಸಿದ್ಧಾರ್ಥ್ ನೇಗಿ ಮತ್ತು ಅಬ್ರಾಲ್ ಎಂದು ಗುರುತಿಸಲಾಗಿದೆ.
ವಿಚಾರ ತಿಳಿಯುತ್ತಿದ್ದಂತೆಯೇ ಎಚ್ ಎಎಲ್ ಪೊಲೀಸರು ಘಟನಾ ಸ್ಥಳಕ್ಕೆ ದೌಡಾಯಿಸಿದ್ದು, ಅಗ್ನಿಶಾಮಕ ದಳದ ಎರಡು ವಾಹನಗಳೂ ಸ್ಥಳಕ್ಕೆ ದೌಡಾಯಿಸಿ ವಿಮಾನಕ್ಕೆ ಹೊತ್ತಿದ್ದ ಬೆಂಕಿ ನಂದಿಸಿವೆ. ಬೆಳಗ್ಗೆ ಅತಿಯಾದ ಮಂಜು ಆವರಿಸಿದ್ದರಿಂದ ಪೈಲಟ್ ಗಳಿಗೆ ಮಾರ್ಗ ಕಾಣದೇ ಈ ಅಪಘಾತ ಸಂಭವಿಸಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಪ್ರಸ್ತುತ ಸ್ಥಳಕ್ಕೆ ದೌಡಾಯಿಸಿರುವ ವಾಯುಸೇನೆ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ. 
SCROLL FOR NEXT