ಕ್ಯಾಂಟೀನ್ ನಲ್ಲಿ ಆಹಾರ ಸೇವಿಸುತ್ತಿರುವ ಮಕ್ಕಳು
ಕೊಪ್ಪಳ: ಹೊಟೇಲ್ ಉದ್ಯಮ ಇತ್ತೀಚೆಗೆ ವಾಣಿಜ್ಯೀಕರಣಗೊಳ್ಳುತ್ತಿರುವ ಸಂದರ್ಭದಲ್ಲಿ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲ್ಲೂಕಿನ ಸರ್ಕಾರಿ ಜ್ಯೂನಿಯರ್ ಕಾಲೇಜಿನ ಹೊರಗೆ ಇರುವ ಕ್ಯಾಂಟೀನ್ ಕಳೆದ 30 ವರ್ಷಗಳಿಂದ ಅಗ್ಗದ ದರದಲ್ಲಿ ಗ್ರಾಹಕರಿಗೆ ತಿನಿಸುಗಳನ್ನು ನೀಡುತ್ತಾ ಬಂದಿದೆ.
ಮಹಾರಾಷ್ಟ್ರ ಮೂಲದ ಮಾಲಮ್ಮ ಎಂಬುವವರು ಈ ಕ್ಯಾಂಟೀನನ್ನು ನಡೆಸಿಕೊಂಡು ಬರುತ್ತಿದ್ದು ಬೆಳಗಿನ ಉಪಹಾರದಲ್ಲಿ ಇಡ್ಲಿ, ಸಾಂಬಾರು, ಚಟ್ನಿ ಹಾಗೂ ಉಪ್ಮಗೆ ತಲಾ 5 ರೂಪಾಯಿ, ಮಿರ್ಚಿ ಮತ್ತು ಉಪ್ಮವನ್ನು 3 ರೂಪಾಯಿಗೆ ಪಲಾವನ್ನು ಕೇವಲ 10 ರೂಪಾಯಿಗಳಿಗೆ ನೀಡುತ್ತಿದ್ದಾರೆ.
ತಿನಿಸುಗಳ ರುಚಿಯಲ್ಲಿ ಯಾವುದೇ ಕೊರತೆಯಿರುವುದಿಲ್ಲ. ಶುಚಿ ರುಚಿಯಾದ ಆಹಾರಗಳಿಂದ ಅಕ್ಕಪಕ್ಕದ ಗ್ರಾಹಕರು ಬರುತ್ತಿದ್ದು ಕಳೆದ 30 ವರ್ಷಗಳಿಂದ ಈ ಕ್ಯಾಂಟೀನನ್ನು ಮಲ್ಲಮ್ಮ ನಡೆಸಿಕೊಂಡು ಹೋಗುತ್ತಿದ್ದಾರೆ. ಪಕ್ಕದ ಸರ್ಕಾರಿ ಶಾಲೆಯ ಮಕ್ಕಳು ಸಹ ಈ ಕ್ಯಾಂಟೀನ್ ಗೆ ಬರುತ್ತಾರೆ. ಕಾಲೇಜು ಪ್ರಾಂಶುಪಾಲ ಹಡಿಮಣಿ ಮಲಮ್ಮನ ಈ ಕಾಯಕವನ್ನು ಶ್ಲಾಘಿಸುತ್ತಾರೆ. ಒಂದು ವೇಳೆ ಮಕ್ಕಳು ಬಂದು ತಿಂಡಿ ತಿಂದು ಹೋದರೂ ಆಗಲೇ ಹಣ ನೀಡಬೇಕೆಂದೇನಿಲ್ಲ. ಹಣ ಮತ್ತೆ ಕೊಡಿ ಎಂದು ಹೇಳುತ್ತಾರೆ ಈ ಮಹಾತಾಯಿ.
ಈ ಕ್ಯಾಂಟೀನ್ ನಲ್ಲಿ ತಿಂದು ಹೋದ ಹಲವು ಮಕ್ಕಳು ಇಂದು ದೊಡ್ಡವರಾಗಿ ವೃತ್ತಿಯಲ್ಲಿದ್ದು ಅವರು ತಮ್ಮ ಮನೆಗೆ ಮಲಮ್ಮನನ್ನು ಕರೆಸಿ ಅಭಿಮಾನದಿಂದ ಸನ್ಮಾನಿಸಿ ಕಳುಹಿಸುತ್ತಾರಂತೆ.
ಕಳೆದ 30 ವರ್ಷಗಳಲ್ಲಿ ಮಲಮ್ಮ ಈ ಕಾಯಕ ಮಾಡುತ್ತಾ ತಮ್ಮಿಬ್ಬರು ಹೆಣ್ಣು ಮಕ್ಕಳು ಮತ್ತು ಗಂಡು ಮಕ್ಕಳಿಗೆ ಮದುವೆ ಮಾಡಿಸಿ ಸಣ್ಣ ಮನೆಯನ್ನು ಕೂಡ ಕಟ್ಟಿಸಿಕೊಂಡಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos