ಗಂಗಾಧರ್ ಮತ್ತು ಶ್ರೀನಿವಾಸ್ ಅವರಿಗೆ ಪರೋಪಕಾರಿ ಪ್ರಶಸ್ತಿ 
ರಾಜ್ಯ

ಪೊಲೀಸ್ ಪೇದೆ ಜೀವ ರಕ್ಷಿಸಿದ ಬಿಎಂಟಿಸಿ ಚಾಲಕ- ನಿರ್ವಾಹಕರಿಗೆ ಪರೋಪಕಾರಿ ಪ್ರಶಸ್ತಿ!

ಪಘಾತದಲ್ಲಿ ಗಾಯಗೊಂಡು ರಸ್ತೆ ಬದಿ ಬಿದ್ದಿದ್ದ ಗಾಯಾಳುವನ್ನು ಸಕಾಲಕ್ಕೆ ಆಸ್ಪತೆಗೆ ಸೇರಿಸಿ ಮಾನವೀಯತೆ ಮೆರೆದ ಬಿಎಂಟಿಸಿ ಚಾಲಕ ವೈ.ಎನ್‌. ಗಂಗಾಧರ್‌ ಮತ್ತು ...

ಬೆಂಗಳೂರು: ಅಪಘಾತದಲ್ಲಿ ಗಾಯಗೊಂಡು ರಸ್ತೆ ಬದಿ ಬಿದ್ದಿದ್ದ ಗಾಯಾಳುವನ್ನು ಸಕಾಲಕ್ಕೆ ಆಸ್ಪತೆಗೆ ಸೇರಿಸಿ ಮಾನವೀಯತೆ ಮೆರೆದ ಬಿಎಂಟಿಸಿ ಚಾಲಕ ವೈ.ಎನ್‌. ಗಂಗಾಧರ್‌ ಮತ್ತು ನಿರ್ವಾಹಕ ಟಿ. ಶ್ರೀನಿವಾಸ್‌ ಅವರನ್ನು ಇಡೀ ರಾಜ್ಯದ ಜನತೆ ಪ್ರಶಂಸಿತ್ತು, 
ಹಾಸ್‌ಮ್ಯಾಟ್‌ ಆಸ್ಪತ್ರೆ ಈ ವರ್ಷದ ಹಾಸ್‌ ಮ್ಯಾಟ್‌ ಪರೋಪಕಾರಿ ಪ್ರಶಸ್ತಿ ಪ್ರಕಟಿಸಿದ್ದು ಅಪಘಾತದಲ್ಲಿ ಮಾನವೀಯತೆ ಮೆರೆದ ಬಿಎಂಟಿಸಿ ಬಸ್‌ ಚಾಲಕ ವೈ.ಎನ್‌.ಗಂಗಾಧರ್‌ ಮತ್ತು ನಿರ್ವಾಹಕ ಟಿ.ಶ್ರೀನಿವಾಸ್‌ ಉತ್ತಮ ಪರೋಪಕಾರಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. 
ಕಳೆದ ಡಿ. 29ರ ರಾತ್ರಿ  ಕೆಲಸ ಮುಗಿಸಿಕೊಂಡು ಹೋಗುವಾಗ ಯಲಹಂಕ - ನೆಲಮಂಗಲ ಮಾರ್ಗದಲ್ಲಿ ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದ ಪೇದೆ ಸಿದ್ದರಾಜು ಆಯತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ರಸ್ತೆ ಬದಿ ರಕ್ತದ ಮಡುವಿನಲ್ಲಿ ನೋವಿನಿಂದ ನರಳುತ್ತಿದ್ದ ಅವರನ್ನು ಜನರು ನೋಡಿಕೊಂಡು ಹೋಗುತ್ತಿದ್ದರು ಆದರೆ ಯಾರೂ ನೆರವಿಗೆ ಧಾವಿಸಲಿಲ್ಲ.  ಎಲ್ಲರೂ ವಿಡಿಯೋ ಮಾಡಿಕೊಳ್ಳುತ್ತಿದ್ದರು, 
ಈ  ಸಮಯದಲ್ಲಿ ರೂಟ್‌ ನಂ. 407 ರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗಂಗಾಧರ್‌ ಮತ್ತು ಶ್ರೀನಿವಾಸ್‌ ಸಿದ್ದರಾಜು ಸ್ಥಿತಿ ನೋಡಿ, ಬಸ್‌ನಲ್ಲಿಯೇ ಸಿದ್ದರಾಜು ಅವರನ್ನು ಆಸ್ಪತ್ರೆಗೆ ಕರೆದು ಸಕಾಲಕ್ಕೆ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

BDA ಯೋಜನಾ ಪ್ರಾಧಿಕಾರದ ಜವಾಬ್ದಾರಿ ಹಸ್ತಾಂತರ: GBA ವಿರೋಧಿಸುವವರು ಪಾಲಿಕೆ ಚುನಾವಣೆ ಬಹಿಷ್ಕರಿಸಲಿ; ಡಿಕೆಶಿ ಸವಾಲು

ಮೈಸೂರು ಪೊಲೀಸರಿಗೆ CM ಪುತ್ರನ ಕಾಟ: ಯಾವುದೇ ವರ್ಗಾವಣೆಯಾಗಬೇಕಾದರೂ ಯತೀಂದ್ರಗೆ ಟ್ಯಾಕ್ಸ್ ಕಟ್ಟಬೇಕು; ಪ್ರತಾಪ್ ಸಿಂಹ

ಬಾಂಬೆ ಮಾದರಿಯಲ್ಲಿ ಕೊಳಗೇರಿ ಪುನಶ್ಚೇತನಕ್ಕೆ ಸಮಿತಿ ರಚನೆ: GBA ವ್ಯಾಪ್ತಿಗೆ ಆನೇಕಲ್ ಸೇರಿಸುವುದು ಕಷ್ಟ; ಡಿಕೆ ಶಿವಕುಮಾರ್

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

SCROLL FOR NEXT