ರಾಜ್ಯ

ನರಗುಂದ: ಯಜಮಾನನ ಸಾವಿನ ಸುದ್ದಿಯನ್ನು ಮನೆಯವರಿಗೆ ತಲುಪಿಸಿದ ಎತ್ತು!

Sumana Upadhyaya

ಗದಗ: ತಮ್ಮ ಎತ್ತು ಸದ್ದು ಮಾಡುತ್ತಾ, ಕೂಗುತ್ತಾ ಮನೆಯ ಕಡೆ ಓಡಿ ಬರುತ್ತಿರುವಾಗ ಸಿದ್ದನಗೌಡ ಗೌಡರ್ ಕುಟುಂಬದವರಿಗೆ ಏನೋ ನಡೆದಿದೆ ಎಂದು ಗೊತ್ತಾಯಿತು. ಎತ್ತಿನ ಜೊತೆ ಗದ್ದೆಗೆ ಹೋಗಿದ್ದ ಸಿದ್ದನಗೌಡ ಇರಲಿಲ್ಲ. ಅವರು ನರಗುಂದದ ಸ್ಥಳೀಯರೊಂದಿಗೆ ಗದ್ದೆ ಕಡೆ ಓಡಿ ಹೋಗಿ ನೋಡಿದಾಗ ಸಿದ್ದನಗೌಡ ಗೌಡರ್ ಶವವಾಗಿ ಬಿದ್ದಿದ್ದರು. ಅವರ ತಲೆಗೆ ತೀವ್ರ ಸ್ವರೂಪದ ಪೆಟ್ಟಾಗಿತ್ತು.

37 ವರ್ಷದ ರೈತ ಸಿದ್ದನಗೌಡ ತಮ್ಮ ಗದ್ದೆಯಲ್ಲಿ ಕೊಯ್ದ ಭತ್ತವನ್ನು ಎತ್ತಿನಗಾಡಿಗೆ ತುಂಬುತ್ತಿದ್ದಾಗ ಬಿದ್ದು ತಲೆಗೆ ಏಟಾಗಿ ಮೃತಪಟ್ಟಿದ್ದಾರೆ. ಮನೆಯವರಿಗೆ ಸಿದ್ದನಗೌಡ ಅವರ ವಿಷಯ ತಲುಪಿಸಿದ್ದು ಈ ಮೂಕ ಎತ್ತು. ಕಳೆದ ನಾಲ್ಕು ವರ್ಷಗಳಿಂದ ಈ ಎತ್ತನ್ನು ಸಿದ್ದನಗೌಡ ಕುಟುಂಬದವರು ಸಾಕುತ್ತಿದೆ.

ಗದ್ದೆ ಇರುವುದು ಸಿದ್ದನಗೌಡ ಅವರ ಮನೆಯಿಂದ ಎರಡು ಕಿಲೋ ಮೀಟರ್ ದೂರದಲ್ಲಿ. ಸಿದ್ದನಗೌಡ ಗಾಡಿಯಿಂದ ಬಿದ್ದ ವೇಳೆ ಗದ್ದೆಯಲ್ಲಿ ಯಾರೂ ಇರಲಿಲ್ಲ. ಹೀಗಾಗಿ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೆ ಮೃತಪಟ್ಟಿರಬಹುದು ಎಂದು ಗ್ರಾಮಸ್ಥ ಶಿವಲಿಂಗು ಹೇಳುತ್ತಾರೆ.

ಆರಂಭದಲ್ಲಿ ಎತ್ತಿಗೆ ಏನೋ ಗಾಯವಾಗಿದೆ ಎಂದು ನಾವು ಅಂದುಕೊಂಡಿದ್ದೆವು. ಹೀಗಾಗಿ ಅದು ಕೂಗುತ್ತಿದೆ ಎಂದು ಭಾವಿಸಿದೆವು. ಆದರೆ ಗಾಡಿಯಲ್ಲಿ ಸಿದ್ದನಗೌಡ ಇಲ್ಲದಾಗ ಕುಟುಂಬದವರಿಗೆ ಏನೋ ಅನಾಹುತ ನಡೆದಿದೆ ಎಂದು ಸಂಶಯ ಬಂದಿತ್ತು ಎನ್ನುತ್ತಾರೆ ಶಿವಲಿಂಗು.

ಸಿದ್ದನಗೌಡ ಮೃತಪಟ್ಟ ನಂತರ ಗ್ರಾಮಸ್ಥರಿಗೆ ಮತ್ತು ಪಟ್ಟಣದವರಿಗೆ ಆ ಎತ್ತು ಮತ್ತು ಎತ್ತಿನ ಗಾಡಿ ಸುದ್ದಿಯ ವಿಷಯವಾಗಿದೆ. ಸಿದ್ದನಗೌಡ ಅವರ ಪತ್ನಿ ರತ್ನವ್ವ ಪೊಲೀಸರಿಗೆ ದೂರು ನೀಡಿದ್ದಾರೆ.

SCROLL FOR NEXT