ರಾಜ್ಯ

ಕೊನೆಯ ದಿನ ಯಶಸ್ವಿ ಪ್ರದರ್ಶನದೊಂದಿಗೆ, ಏರ್​ ಶೋಗೆ ತೆರೆ

Srinivasamurthy VN
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಲೋಹದ ಹಕ್ಕಿಗಳ 2019ರ ಏರ್ ಶೋಗೆ ತೆರೆಬಿದ್ದಿದೆ. ಕೊನೆಯ ದಿನವಾದ ಇಂದು ಎಲ್ಲ ಪ್ರದರ್ಶನಗಳೂ ಯಶಸ್ವಿ ನಡೆದಿವೆ.
ಏರ್ ಶೋ ಹಲವು ಅವಘಡಗಳ ನಡುವೆಯೂ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಕಳೆದ ಐದು ದಿನಗಳಿಂದ ನಡೆದ ಏರೋ ಇಂಡಿಯಾ 2019 ವೈಮಾನಿಕ ಪ್ರದರ್ಶನಕ್ಕೆ ವಿದ್ಯುಕ್ತ ತೆರೆ ಬಿದ್ದಿದೆ. ಏರ್​ ಶೋ ಸ್ಥಳದಲ್ಲಿ ಅವಘಡ ಸಂಭವಿಸಿದರೂ ಇಂದು ಏರ್​ ಶೋ ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದಿದ್ದರು. 
ಅಂತಿಮ ದಿನವಾದ ಇಂದು ದುರಂತದ ಬಳಿಕವೂ ಮತ್ತೆ ಸೂರ್ಯಕಿರಣ್ ತಂಡ ತಮ್ಮ ಸಾಹಸ ಪ್ರದರ್ಶನ ತೋರಿದ್ದು ವಿಶೇಷವಾಗಿತ್ತು. ಬೆಂಕಿ ಅವಘಡ ಹೊರತುಪಡಿಸಿ 2019ರ ಏರ್​ ಶೋ ಅದ್ಧೂರಿಯಾಗಿ ನಡೆಯಿತು. ಏರ್​ ಶೋನ ಕೊನೆಯ ದಿನದಲ್ಲಿ ಸೂರ್ಯಕಿರಣ್, ಸಾರಂಗ್, ತೇಜಸ್, ರಫೇಲ್, ಎಫ್ 16 ಹಾರಾಟ ನಡೆಸಿ ನೋಡುಗರನ್ನು ರಂಜಿಸಿದವು.
ಅವಘಡಗಳ ಕಂಡ ಪ್ರಸಕ್ತ ಸಾಲಿನ ಏರೋ ಇಂಡಿಯಾ-2019 ಅಂತಾರಾಷ್ಟ್ರೀಯ ವೈಮಾನಿಕ ಪ್ರದರ್ಶನಕ್ಕೆ ಭಾನುವಾರ ತೆರೆಬಿದಿತ್ತು. ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿದ್ದ ಏರೋ ಇಂಡಿಯಾ ಈ ಬಾರಿ ಭಾರಿ ಸಮಸ್ಯೆಗಳನ್ನು ಕಂಡಿತು.  ಉದ್ಘಾಟನೆಗೂ ಮುನ್ನವೇ ವಿಮಾನಗಳ ಡಿಕ್ಕಿಯಾಗಿ ಪೈಲಟ್‌ ಮೃತಪಟ್ಟರೆ, ಸಮಾರೋಪ ಹಿಂದಿನ ದಿನ ಅಂದರೆ ಶನಿವಾರ 300ಕ್ಕೂ ಹೆಚ್ಚು ವಾಹನಗಳು ಪಾರ್ಕಿಂಗ್‌ ಲಾಟ್‌ ನಲ್ಲಿ ಅಗ್ನಿಗಾಹುತಿಯಾದವು. ಹೀಗಾಗಿ ನಿನ್ನೆ ವೈಮಾನಿಕ ಪ್ರದರ್ಶನ ತಾತ್ಕಾಲಿಕವಾಗಿ ಸ್ಥಗಿತವಾಗಿತ್ತು.
ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ನಮ್ಮ ವಿಜ್ಞಾನಿಗಳು, ಸಂಶೋಧಕರು, ಅಸಾಧಾರಣ ಸಾಧನೆ ಮಾಡಿದ್ದಾರೆ. ಬೆಂಗಳೂರು ಮೂಲದ ಇಸ್ರೋ ಜಗತ್ತಿನ ಗಮನ ಸೆಳೆದಿದೆ. ಮೊದಲ ಪ್ರಯತ್ನದಲ್ಲೇ ಮಂಗಳಯಾನವನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದ ಕೀರ್ತಿ ಇಸ್ರೋಗೆ ಸಲ್ಲುತ್ತದೆ ಎಂದು ಹೇಳಿದರು.  ಕೊನೆಯ ದಿನವಾದ ಭಾನುವಾರ ದೇಶ-ವಿದೇಶಗಳ ಸಮರ ವಿಮಾನಗಳ ಹಾಗೂ ಹೆಲಿಕಾಪ್ಟರ್‌ ಗಳು ಬಾನಂಗಳದಲ್ಲಿ ನಡೆಸಿದ ವಿವಿಧ ಚಮತ್ಕಾರಗಳನ್ನು ಕಣ್ಣು ತುಂಬಿಕೊಳ್ಳಲು ಭಾರಿ ಜನಸಾಗರವೇ ಹರಿದು ಬಂದಿತ್ತು. 
SCROLL FOR NEXT