ರಾಜ್ಯ

ಶತ್ರು ರಾಷ್ಟ್ರದ ಉಗ್ರರ ಕ್ಯಾಂಪ್ ಧ್ವಂಸಗೊಳಿಸಿದ ಐಎಎಫ್ ಜೆಟ್ : ಪಾಕ್ ಗೆ ಪ್ರಬಲ ಸಂದೇಶ !

Shilpa D
ಬೆಂಗಳೂರು: ಪುಲ್ವಾಮ ದಾಳಿಗೆ ಪ್ರತಿಕಾರವಾಗಿ ಭಾರತ ಸರ್ಜಿಕಲ್‌ ಸ್ಟ್ರೈಕ್‌ ನಡೆಸುವ ಮೂಲಕ ಪಾಕಿಸ್ತಾನಕ್ಕೆ ಪ್ರಬಲ ಸಂದೇಶ ರವಾನಿಸಿದೆ, ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಅಥವಾ ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ಶಿಬಿರಗಳನ್ನು ನಾಶ ಮಾಡಲು ಭಾರತ ಸರ್ವ ಸನ್ನದ್ದವಾಗಿದೆ,
ಪಾಕಿಸ್ತಾನ ಭಾರತದಿಂದ ವೈಮಾನಿಕ ದಾಳಿ ನಿರೀಕ್ಷಿಸಿರಲಿಲ್ಲ, ಸೆಪ್ಟಂಬರ್ 28 2016 ರಲ್ಲಿ ನಡೆದಂತೆ ಸರ್ಜಿಕಲ್  ಸ್ಟ್ರೈಕ್ ನಡೆಯಬಹುದೆಂದು ಊಹಿಸಿತ್ತು, ಆದರೆ ಭಾರತದ ಈ ಅಚ್ಚರಿಯ ನಿರ್ಧಾರ ಪಾಕಿಸ್ತಾನವನ್ನು ದಂಗು ಬಡಿಸಿದೆ ಎಂದು ಮಾಜಿ ಐಎಎಫ್ ಫೈಲಟ್ ಒಬ್ಬರು ತಿಳಿಸಿದ್ದಾರೆ.
ಪುಲ್ವಾಮ ಉಗ್ರರ ದಾಳಿಯ ನಂತರ ಇದನ್ನು ನಿರೀಕ್ಷಿಸಲಾಗಿತ್ತು. ಕಳೆದ ಬಾರಿ ನಡೆದಂತೆ ಸರ್ಜಿಕಲ್ ಸ್ಟ್ರೈಕ್ ಮಾಡಲಾಗುತ್ತೆದೆಂದು ಎಣಿಸಲಾಗಿತ್ತು. ಆದರೆ ಎಲ್ಲರ ನಿರೀಕ್ಷೆ ಹುಸಿಗೊಳಿಸಿ ವೈಮಾನಿಕ ದಾಳಿ ನಡೆಸಿದ್ದು ಆಶ್ಚರ್ಯ ಮೂಡಿಸಿದೆ ಎಂದು  ನಿವೃತ್ತ ಏರ್ ಮಾರ್ಷಲ್ ಪಿಲಿಪ್ ರಾಜ್ ಕುಮಾರ್ ತಿಳಿಸಿದ್ದಾರೆ.  ಇವರು 1965ರಲ್ಲಿ ಭಾರತ-ಪಾಕಿಸ್ತಾನ ಯುದ್ದ ನಡೆದ ವೇಳೆ ಐಎಎಫ್ ಪೈಲಟ್ ಆಗಿ ಕೆಲಸ ಮಾಡಿದ್ದರು.
ಏರ್ ಸ್ಟ್ರೈಕ್ ನಿಂದ ಉಂಟಾದ ಹಾನಿಯ ಮೌಲ್ಯಮಾಪನ ಬಹಳ ಮುಖ್ಯವಾಗಿದೆ, ವಾಯುಪಡೆಯು ಛಾಯಾಚಿತ್ರ ವಿಚಕ್ಷಣ ವಿಮಾನವನ್ನು ಕಳುಹಿಸುತ್ತಿತ್ತು  ಆ ವಿಮಾನ ಹಾನಿಗೊಳಗಾದ ಸ್ಥಳದ ಫೋಟೋ ತೆಗೆದು ಕಳುಹಿಸುತ್ತಿತ್ತು,
ಆದರೆ ಈಗ ಐಎಎಫ್ ಸ್ಯಾಟಲೈಟ್ ಫೋಟೋ ಮತ್ತು ಮಾನವ ಗುಪ್ತಚರರನ್ನು ಕಳುಹಿಸಿ ಏರ್ ಸ್ಟ್ರೈಕ್ ನಿಂದಾದ ಹಾನಿ ಫೋಟೋ ತೆಗೆಸುತ್ತದೆ, ಹೀಗಾಗಿ ಸರ್ಕಾರ ವಿವರ ಬಿಡುಗಡೆ ಗೊಳಿಸುವವರೆಗೂ ನಾವು ಕಾಯಬೇಕು ಎಂದು ಅವರು ತಿಳಿಸಿದ್ದಾರೆ.
ಪುಲ್ವಾಮಾ ದಾಳಿಯ ನಂತರ ಭಾರತ ಸೈಲೆಂಟ್ ಆಗಿತ್ತು, ಈ ವೇಳೆಯಲ್ಲಿ ಶತ್ರುಗಳ ಹುಟ್ಟಡಗಿಸಲು ವೈಮಾನಿಕ ದಾಳಿ ನಡೆಸಿ ಪ್ರಬಲ ಸಂದೇಶ ರವಾನಿಸಿದ್ದಾರೆ,. ಮೊದಲ ಬಾರಿಗೆ ಯುದ್ದವಲ್ಲದ ಸನ್ನಿವೇಶದಲ್ಲಿ ಐಎಎಫ್ ಜೆಟ್ ಶತ್ರುದೇಶದ ಉಗ್ರ ಕ್ಯಾಂಪ್ ಗೆ ನುಗ್ಗಿದೆ ಎಂದು ನಿವೃತ್ತ ವಿಂಗ್ ಕಮಾಂಡರ್ ವಿ,ಎಂ ರಘುನಾಥ್ ಹೇಳಿದ್ದಾರೆ, ವಿಎಂ ರಘುನಾಥ್ 1987-89ರಲ್ಲಿ ನಡೆದ ಐಪಿಕೆಎಫ್ ಮಿಷನ್ ಮಿಸೈಲ್ ಮಾರ್ಗದರ್ಶಿಯಾಗಿ ಕೆಲಸ ಮಾಡಿದ್ದರು. 
SCROLL FOR NEXT