ರಾಜ್ಯ

ಅಪಘಾತ ಪ್ರಕರಣ: ಗೀತಾ ವಿಷ್ಣು ಮಾದಕದ್ರವ್ಯ ಸೇವನೆ ಸಿಸಿಬಿ ಚಾರ್ಜ್ ಶೀಟ್ ನಲ್ಲಿ ಬಹಿರಂಗ

Raghavendra Adiga
ಬೆಂಗಳೂರು: 2017ರಲ್ಲಿ ನಡೆದ ಅಪಘಾತ ಪ್ರಕರಣ ಸಂಬಂಧ ಸಿಸಿಬಿ ಪೋಲೀಸರು ರಾಜಕಾರಣಿ, ಉದ್ಯಮಿ ದಿ. ಡಿಕೆ ಆದಿಕೇಶವಲು ಅವರ ಮೊಮ್ಮಗ ಗೀತಾ ವಿಷ್ಣು ವಿರುದ್ಧ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ ದಾಖಲಿಸಿದ್ದಾರೆ. ಇದರಲ್ಲಿ ಗೀತಾ ವಿಷ್ಣು ಮರಿಜುವಾನಾ ಸೇವನೆ ಮಾಡಿ ಕಾರು ಚಲಾಯಿಸುತ್ತಿದ್ದ. ಹಾಗಾಗಿ ಎಸ್ಯುವಿ ಕಾರು ಓಮ್ನಿ ವ್ಯಾನ್ ಗೆ ಅಪ್ಪಳಿಸಿ ಆರು ಜನರಿಗೆ ಗಾಯಗಳಾಗಿದ್ದವು ಎಮ್ದು ವಿವರಿಸಲಾಗಿದೆ.
ಸೆಪ್ಟೆಂಬರ್ 28, 2017 ರಂದು ಸಂಭವಿಸಿದ್ದ ಘಟನೆಯ ಕುರಿತಂತೆ ಸಿಸಿಬಿ ಪೋಲೀಸರು ಸೋಮವಾರ 600 ಪುಟಗಳ ದೋಷಾರೋಪಪಟ್ಟಿಯನ್ನು ನಗರದ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಆರೋಪಿಯು ಮಾದಕವಸ್ತು ಸೇವನೆ ಮಾಡಿದ್ದ ಕಾರಣ ಈ ಅಪಘಾತ ನಡೆದಿದೆ.ಇಬ್ಬರು ಮಕ್ಕಳನ್ನು ಒಳಗೊಂಡು ಆರು ಮಂದಿ ಗಾಯಗೊಂಡಿದ್ದಾರೆ.ಗೀತಾ ವಿಷ್ಣು ಕಾರ್ ಬಿಟ್ಟು ಪರಾರಿಯಾಗಿದ್ದ ವೇಳೆ ಪೋಲೀಸರು ಅವನ ಎಸ್ಯುವಿ ಅನು ವಶಕ್ಕೆ ಪಡೆಇದ್ದರು. ಇದರಲ್ಲಿ  110 ಗ್ರಾಂ ಮರಿಜುವಾನಾ ಇರುವುದು ಪತ್ತೆಯಾಗಿತ್ತು/ ಮೊದಲು ಪೋಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ವಿಷ್ಣು ವಿಠ್ಠಲ್ ಮಲ್ಯ ರಸ್ತೆಯ ಆಸ್ಪತ್ರೆಗೆ ದಾಖಲಾಗಿದ್ದನು. ಆದರೆ ಅಂತಿಮವಾಗಿ ಅಕ್ಟೋಬರ್  4 ರಂದು ಮಡಿಕೇರಿಯಲ್ಲಿ ಅವನನ್ನು ಬಂಧಿಸಲಾಗಿತ್ತು.
SCROLL FOR NEXT