ಭಾರತ್ ಬಂದ್: ಒತ್ತಾಯ ಪೂರ್ವಕವಾಗಿ ಅಂಗಡಿ ಮುಚ್ಚಿಸಲು ಬಂದವರಿಗೆ ಹಿಗ್ಗಾ-ಮುಗ್ಗಾ ಝಾಡಿಸಿದ ವ್ಯಾಪಾರಿ! 
ರಾಜ್ಯ

ಭಾರತ್ ಬಂದ್: ಅಂಗಡಿ ಮುಚ್ಚಿಸಲು ಬಂದವರಿಗೆ ಹಿಗ್ಗಾ-ಮುಗ್ಗಾ ಝಾಡಿಸಿದ ವ್ಯಾಪಾರಿ, ವಿಡಿಯೋ ವೈರಲ್!

ಭಾರತ್ ಬಂದ್ ವೇಳೆ ಒತ್ತಾಯ ಪೂರ್ವಕವಾಗಿ ಅಂಗಡಿ ಮುಚ್ಚಿಸಲು ಮುಂದಾದ ಪ್ರತಿಭಟನಾ ನಿರತರಿಗೆ ವ್ಯಾಪಾರಿಯೊಬ್ಬರು ಭರ್ಜರಿ ಕ್ಲಾಸ್ ತೆಗೆದುಕೊಂಡ ಘಟನೆ ಕುಂದಾಪುರದ ಗುಜ್ಜಾಡಿಯಲ್ಲಿ ನಡೆದಿದೆ.

ಕುಂದಾಪುರ: ಭಾರತ್ ಬಂದ್ ವೇಳೆ ಒತ್ತಾಯ ಪೂರ್ವಕವಾಗಿ ಅಂಗಡಿ ಮುಚ್ಚಿಸಲು ಮುಂದಾದ ಪ್ರತಿಭಟನಾ ನಿರತರಿಗೆ ವ್ಯಾಪಾರಿಯೊಬ್ಬರು ಭರ್ಜರಿ ಕ್ಲಾಸ್ ತೆಗೆದುಕೊಂಡ ಘಟನೆ ಕುಂದಾಪುರದ ಗುಜ್ಜಾಡಿಯಲ್ಲಿ ನಡೆದಿದೆ. 
ಕೇಂದ್ರ ಸರ್ಕಾರದ ಮಸೂದೆಗಳನ್ನು ವಿರೋಧಿಸಿ ಕಾರ್ಮಿಕ ಒಕ್ಕೂಟ ಸಂಘಟನೆಗಳು (ಎಡಪಕ್ಷಗಳು) ಜ.8-9 ರಂದು ಭಾರತ್ ಬಂದ್ ಗೆ ಕರೆ ನೀಡಿದ್ದವು. ದೇಶಾದ್ಯಂತ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ವೇಳೆ ಹಲವೆಡೆ ಒತ್ತಾಯಪೂರ್ವಕವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಲು ಯತ್ನ ನಡೆದಿರುವ ವರದಿಯೂ ಆಗಿದ್ದು, ಕುಂದಾಪುರದಲ್ಲಿ ಇಂಥಹದ್ದೇ ಘಟನೆ ನಡೆದಿದೆ. 
ಒತ್ತಾಯಪೂರ್ವಕವಾಗಿ ಅಂಗಡಿ ಮುಚ್ಚಿಸಲು ಬಂದ ಪ್ರತಿಭಟನಾ ನಿರತರನ್ನು ಹಿಗ್ಗಾ-ಮುಗ್ಗಾ ಝಾಡಿಸಿದ ವ್ಯಾಪಾರಿ " ಒಳ್ಳೆಯದಕ್ಕೆ ಪ್ರತಿಭಟನೆ ನಡೆಸಿ ಬೆಂಬಲ ಕೊಡುತ್ತೇವೆ, ಹೋಗಿ ಶಬರಿಮಲೆಯಲ್ಲಿ 1,000 ವರ್ಷದಿಂದ ನಡೆದುಬಂದ ಸಂಪ್ರದಾಯ ಮುರಿಯುತ್ತಿರುವುದನ್ನು ಪ್ರತಿಭಟಿಸಿ ಬೆಂಬಲಿಸುತ್ತೇವೆ, ನಾವು ಕಮ್ಯುನಿಷ್ಟರಿಗೆ ಬೆಂಬಲ ನೀಡುವುದಿಲ್ಲ ಎಂದು ಹೇಳಿದ್ದಾರೆ. 
"ದೇಶದ ಬಗ್ಗೆ ಚಿಂತನೆ ಮಾಡಿ ಮೋದಿ ಸರ್ಕಾರ ಸಾಕಷ್ಟು ಸವಲತ್ತುಗಳನ್ನು ನೀಡಿದೆ. ಬನ್ನಿ 2014-2019 ವರೆಗೆ ಬೆಲೆ ಇಳಿಕೆಯಾಗಿರುವ ಅಂಕಿ-ಅಂಶ ನೀಡುತ್ತೇನೆ" ಎಂದು  ವ್ಯಾಪಾರಿ ಪ್ರತಿಭಟನಾ ನಿರತರ ಬೆವರಿಳಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಮಧ್ಯಾಹ್ನ 2.30ಕ್ಕೆ ಸಿದ್ದರಾಮಯ್ಯ ರಾಜೀನಾಮೆ; 3 ಗಂಟೆಗೆ ಪತ್ರಿಕಾಗೋಷ್ಠಿ; ಮುಂದಿನ CM ಡಿ.ಕೆ ಶಿವಕುಮಾರ್

ಮೋದಿಯವರ ಇತ್ತೀಚಿನ ಫಾರಿನ್ ಟ್ರಿಪ್ಪಿನಿಂದ ಭಾರತಕ್ಕೇನು ಲಾಭ? (ಹಣಕ್ಲಾಸು)

ಕಾಂಗ್ರೆಸ್‌ ಪವರ್ ಪಾಲಿಟಿಕ್ಸ್‌ಗೆ ಮತ್ತೊಂದು ಟ್ವಿಸ್ಟ್: ರಾಜ್ಯಪಾಲರ ಭೇಟಿಗೆ ಸಿದ್ದರಾಮಯ್ಯ ಸಮಯ ಕೇಳಿಲ್ಲ; ರಾಜೀನಾಮೆ ಊಹಾಪೋಹಕ್ಕೆ ಲೋಕಭವನ ಸ್ಪಷ್ಟನೆ..!

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: 4 ಇರಾನ್ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕಾ, ಹೋರ್ಮುಜ್‌ನಲ್ಲಿ ಉದ್ವಿಗ್ನತೆ ತೀವ್ರ..!

ಕ್ಲೈಮ್ಯಾಕ್ಸ್‌ ಹಂತಕ್ಕೆ ಕುರ್ಚಿ ಕದನ: ಸಿಎಂ ಸ್ಥಾನಕ್ಕೆ ಡಿಕೆ ಶಿವಕುಮಾರ್ ಹೆಸರು ಫೈನಲ್?, ಮೇ 31ಕ್ಕೆ ಪ್ರಮಾಣವಚನ ಸಾಧ್ಯತೆ

SCROLL FOR NEXT