ಸಂಗ್ರಹ ಚಿತ್ರ 
ರಾಜ್ಯ

ಕರ್ನಾಟಕ ನಗರಗಳಲ್ಲಿನ ಶೇ. 57ರಷ್ಟು ಮನೆಗಳು ಮಾತ್ರ ಉತ್ತಮ ನೈರ್ಮಲ್ಯ ಸೌಲಭ್ಯ ಹೊಂದಿದೆ: ವರದಿ

ಕರ್ನಾಟಕದ ನಗರ ಪ್ರದೇಶಗಳಲ್ಲಿ ಕೇವಲ ಶೇ.57ರಷ್ಟು ಮನೆಗಳು ಮಾತ್ರ ಉತ್ತಮ ನೈರ್ಮಲ್ಯ ಸೌಲಭ್ಯಗಳನ್ನು ಹೊಂದಿದೆ ಎಂದು ಅದ್ಯಯನವೊಂದು ಬಹಿರಂಗಪಡಿಸಿದೆ.

ಬೆಂಗಳೂರು: ಕರ್ನಾಟಕದ ನಗರ ಪ್ರದೇಶಗಳಲ್ಲಿ ಕೇವಲ ಶೇ.57ರಷ್ಟು ಮನೆಗಳು ಮಾತ್ರ ಉತ್ತಮ ನೈರ್ಮಲ್ಯ ಸೌಲಭ್ಯಗಳನ್ನು ಹೊಂದಿದೆ ಎಂದು ಅದ್ಯಯನವೊಂದು ಬಹಿರಂಗಪಡಿಸಿದೆ. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅರ್ಬನ್ ಅಫೇರ್ಸ್ ನ ನಿರ್ದೇಶಕ ಜಗನ್ ಶಾ ಈ ಮಾಹಿತಿ ನೀಡಿದ್ದಾರೆ. ಅವರು ಬೆಂಗಳೂರಿನಲ್ಲಿ ನಡೆಯುತ್ತಿರುವ ಎರಡು ದಿನಗಳ ಕಾಲದ ಅಗತ್ಯ ನೀರು ಹಾಗೂ ನೈರ್ಮಲ್ಯ ಕುರಿತ ರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದ್ದಾರೆ.
ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಕೇವಲ ಶೇ.42ರಷ್ಟು  ಸುಧಾರಿತ ನೈರ್ಮಲ್ಯ ಸೌಲಭ್ಯಗಳನ್ನು ಹೊಂದಿವೆ.ಚಿಕ್ಕ ರಾಜ್ಯಗಳಾದ ಈಶಾನ್ಯ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಲಲ್ಲಿ ಉತ್ತಮ ನೈರ್ಮಲ್ಯ ಸೌಲಭ್ಯವಿದೆ. ಅಲ್ಲದೆ, ಸುಧಾರಿತ ಕುಡಿಯುವ ನೀರಿನ ಮೂಲದ ಕುರಿತಂತೆ ಹೇಳುವುದಾದರೆ ನಗರ ಪ್ರದೇಶಗಳಲ್ಲಿ 89ಶೇ. ಸೌಲಭ್ಯವಿದ್ದರೆ ಗ್ರಾಮೀಣ ಭಾಗಗಳಲ್ಲಿ 88 ಶೇ. ಇದೆ. 015-16ರ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಆಧಾರದಲ್ಲಿ ಈ ಅಂಕಿ ಸಂಖ್ಯೆ ನೀಡಲಾಗಿದೆ. "ಕರ್ನಾಟಕ, ಮತ್ತು ವಿಶೇಷವಾಗಿ ಬೆಂಗಳೂರು, ದೇಶದ ಅತ್ಯಂತ ಹಳೆಯ ನೀರಿನ ಸರಬರಾಜು ಮತ್ತು ಒಳಚರಂಡಿ ಮಂಡಳಿಗಳನ್ನು ಹೊಂದಿದೆ," ಎಂದು ಅವರು ಹೇಳಿದರು.
 ಭಾರತದಲ್ಲಿ ನೀರು ಮತ್ತು ನೈರ್ಮಲ್ಯವನ್ನು ಸುಧಾರಿಸುವ ರಾಷ್ಟ್ರೀಯ ನೀತಿಗಳು ಮತ್ತು ಉಪಕ್ರಮಗಳು ಹಾಗೂ ಅಕ್ಟೋಬರ್ ನಲ್ಲಿ ನಿರೂಪಿಸಲಾದ ರಾಷ್ಟ್ರೀಯ ನಗರ ನೈರ್ಮಲ್ಯ ನೀತಿಯಲ್ಲಿನ ಬದಲಾವಣೆಗಳು, ನಿರೀಕ್ಷೆಗಳ ಕುರಿತು ಸಮಾವೇಶದಲ್ಲಿ ಚರ್ಚಿಸಲಾಗಿದೆ
ಇದು ರಾಜ್ಯದ ನಿರ್ಮಲೀಕರಣ ತಂತ್ರಗಳು ಮತ್ತು ನಗರ ನೈರ್ಮಲ್ಯ ಯೋಜನೆಗಳನ್ನು ಅಭಿವೃದ್ಧಿಪಡಿಸುವ ಉದ್ದೇಶ ಹೊಂದಿದೆ, ಘನ ಹಾಗೂ ದ್ರವ ತ್ಯಾಜ್ಯಗಳ ಸಮರ್ಪಕ ನಿರ್ವಹಣೆ ತೆರೆದ ಮಲವಿಸರ್ಜನೆ ಮುಕ್ತ ನಗರ ನಿರ್ಮಾಣ ಮಾಡುವ ಉದ್ದೇಶದ ಕುರಿತಂತೆ ಅವರು ಮಾತನಾಡಿದ್ದಾರೆ."ದೇಶದ ಸುಮಾರು 3,500 ನಗರಗಳು ಒಳಚರಂಡಿ ಜಾಲವನ್ನು ಹೊಂದಿಲ್ಲ. ಈ ಸೌಲಭ್ಯ ಕಲ್ಪಿಸಲು ನಾವು ಸೂಕ್ತ ಸಂಪನ್ಮೂಲವನ್ನೂ ಹೊಂದಿಲ್ಲ.ಇನ್ನು ಎಲ್ಲೆಡೆ ನೀರಿನ ಕೊರತೆ ಇದೆ, ವಾತಾವರಣ ಬದಲಾವಣೆಯ ಕಾರಣ ಅಂತರ್ಜಲ ಮಟ್ಟ ಹಾಗೂ ನೀರಿನ ಒರತೆಗಳು ಶೀಘ್ರವಾಗಿ ಒಣಗುತ್ತಿದೆ.ಅನೇಕ ಭಾಗಗಳಲ್ಲಿ ನೀರಿನ ಅಭಾವ ಎದುರಾಗುತ್ತಿದೆ.
ಗಾಳಿಯಿಂದ ನೀರಿನ ಉತ್ಪಾದನೆ
ಎಲಿಕ್ಸಿರ್ ನೀರು ೯ಎಚ್2ಓಗಾಳಿಯಿಂದ ಶುದ್ಧ ಕ್ಷಾರೀಯ ಕುಡಿಯುವ ನೀರನ್ನು ಉತ್ಪಾದಿಸುವ ವಾಯುಮಂಡಲದ ನೀರಿನ ಜನರೇಟರ್ ಅನ್ನು ಸಮ್ಮೇಳನದಲ್ಲಿ ನಗರಾಭಿವೃದ್ದಿ ಸಚಿವ ಯುಟಿ ಖಾದರ್ ಪ್ರದರ್ಶಿಸಿದ್ದಾರೆ. ನೀರಿನ ಜನರೇಟರ್ ದಿನಕ್ಕೆ 10 ಲೀಟರ್ ನಿಂದ  5,000 ಲೀಟರುಗಳವರೆಗೆ ವಿವಿಧ ಸಾಮರ್ಥ್ಯದಲ್ಲಿ ಬಳಕೆಗೆ ಸಿಗಲಿದೆ.ಇದು ಗಾಳಿಯಲ್ಲಿ ತೇವಾಂಶವನ್ನು ಬಳಸಿ ನೀರನ್ನು ಉತ್ಪಾದಿಸಬಲ್ಲದು.ನಂತರ 13 ಹಂತಗಳಲ್ಲಿ ಇದನ್ನು ಶೋಧಿಸಿ ಬಳಕೆ ಮಾಡಲಾಗುತ್ತದೆ.ಇದರ ಏರ್ ಪಿಲ್ಲರ್ ಗಳನ್ನು ಪ್ರತಿ 12 ತಿಂಗಳುಗಳಿಗೊಮ್ಮೆ ಬದಲಾಯಿಸಬೇಕಾಗುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT