ಸಾಂದರ್ಭಿಕ ಚಿತ್ರ 
ರಾಜ್ಯ

ನರ್ಸರಿಗೆ ಅಡ್ಮಿಷನ್ ಮಾಡಿದ್ರೆ ಮಾತ್ರ 1ನೇ ಕ್ಲಾಸಿಗೆ ಸೀಟು; ಇದು ಬೆಂಗಳೂರಿನ ಬಹುತೇಕ ಖಾಸಗಿ ಶಾಲೆಗಳ ನಿಯಮ!

ನಗರದ ಬಹುತೇಕ ಖಾಸಗಿ ಶಾಲೆಗಳಲ್ಲಿ ಒಂದನೇ ತರಗತಿಗೆ ಪ್ರವೇಶ ಮಾಡಲು ಮುಂದಾಗಿರುವ ...

ಬೆಂಗಳೂರು: ನಗರದ ಬಹುತೇಕ ಖಾಸಗಿ ಶಾಲೆಗಳಲ್ಲಿ ಒಂದನೇ ತರಗತಿಗೆ ಪ್ರವೇಶ ಮಾಡಲು ಮುಂದಾಗಿರುವ ಬಹುತೇಕ ಪೋಷಕರಿಗೆ ಸಮಸ್ಯೆ ಎದುರಾಗಿದೆ. ಅನೇಕ ಖಾಸಗಿ ಶಾಲೆಗಳಲ್ಲಿ ಒಂದನೇ ತರಗತಿಗೆ ಹೊಸ ಮಕ್ಕಳನ್ನು ದಾಖಲಿಸಿಕೊಳ್ಳಲು ಒಪ್ಪುತ್ತಿಲ್ಲ. ನರ್ಸರಿಯಿಂದಲೇ ತಮ್ಮ ಶಾಲೆಗಳಲ್ಲಿ ಕಲಿತ ಮಕ್ಕಳಿಗೆ ಆದ್ಯತೆ ನೀಡುತ್ತಿವೆ.

ನಿಮಗೆ ಒಂದನೇ ತರಗತಿಯಲ್ಲಿ ಸುಲಭವಾಗಿ ದಾಖಲಾಗಲು ಮಕ್ಕಳನ್ನು ನರ್ಸರಿಗೇ ಸೇರಿಸಿ ಎಂದು ಹಲವು ಶಾಲೆಗಳು ಒತ್ತಾಯ ಮಾಡುತ್ತಿವೆ. ಇದು ಬಹುತೇಕ ಪೋಷಕರಿಗೆ ತಲೆನೋವಾಗಿ ಪರಿಣಮಿಸಿದೆ.

ನಾವು ಮಕ್ಕಳನ್ನು ಮನೆ ಹತ್ತಿರದ ಮಾಂಟೆಸ್ಸರಿ ಶಾಲೆಗೆ ಕಳುಹಿಸಿದ್ದು ಈ ವರ್ಷ ಒಂದನೇ ಕ್ಲಾಸಿಗೆ ಹಾಕಬೇಕು. 5 ಖಾಸಗಿ ಶಾಲೆಗಳಿಗೆ ಹೋದೆವು, ಆದರೆ ಅಲ್ಲಿ ಈಗಾಗಲೇ ಸಾಕಷ್ಟು ವಿದ್ಯಾರ್ಥಿಗಳಿದ್ದಾರೆ, ಸೀಟು ಇಲ್ಲ ಎಂದು ಕಳಿಸಿದ್ದಾರೆ ಎಂದು ಶಿಲ್ಪಾ ಪ್ರಶಾಂತ್ ಎಂಬುವವರು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ.

ಬೇರೆ ಶಾಲೆಯಿಂದ ಬಂದ ವಿದ್ಯಾರ್ಥಿಗಳಿಗೆ ಖಾಸಗಿ ಶಾಲೆಗಳು ಪ್ರತ್ಯೇಗ ವಿಭಾಗ ಆರಂಭಿಸಬೇಕು ಎಂದು ಮತ್ತೊಬ್ಬ ಪೋಷಕರು ಹೇಳುತ್ತಾರೆ. ಬೆಂಗಳೂರಿನ ದಕ್ಷಿಣ ಭಾಗದಲ್ಲಿ ನಾವು ಏಳು ಶಾಲೆಗಳನ್ನು ಸಂಪರ್ಕಿಸಿದ್ದೇವೆ. ಆದರೆ ನನ್ನ ಮಗುವನ್ನು ದಾಖಲಿಸಿಕೊಳ್ಳಲು ಯಾರೂ ಸಿದ್ದರಿಲ್ಲ. ಹೀಗಾಗಿ ಇಷ್ಟವಿಲ್ಲದ ಶಾಲೆಯಲ್ಲಿ ಸೇರಿಸಬೇಕಾದ ಅನಿವಾರ್ಯತೆ ಬಂದಿದೆ ಎಂದರು.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಹಯೋಗ ಮಂಡಳಿಯ ಪ್ರಧಾನ ಕಾರ್ಯದರ್ಶಿ ಡಿ ಶಶಿ ಕುಮಾರ್, ಸರ್ಕಾರ ಸೂಚಿಸಿದ ವಯಸ್ಸಿಗೆ ಅನುಗುಣವಾಗಿ ಶಾಲೆಗಳು ಮಕ್ಕಳನ್ನು ದಾಖಲಾತಿ ಮಾಡಿಕೊಳ್ಳಬೇಕು. ಪೋಷಕರಿಗೆ ಅದೇ ಶಾಲೆ ಬೇಕೆಂದರೆ ನರ್ಸರಿಯಿಂದಲೇ ದಾಖಲಾತಿ ಮಾಡಿಕೊಳ್ಳಬೇಕು ಎನ್ನುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT