ರಾಜ್ಯ

ಬಿಎಂಟಿಸಿ ಬಸ್ಸು ದರದಲ್ಲಿ ಹೆಚ್ಚಳ ಇಲ್ಲ- ಎನ್. ಎ. ಹ್ಯಾರಿಸ್

Nagaraja AB

ಬೆಂಗಳೂರು: ಬಿಎಂಟಿಸಿ ಬಸ್ಸು ದರ ಹೆಚ್ಚಿಸುವ ಬಗ್ಗೆ ಯಾವುದೇ ಚಿಂತನೆ ನಡೆಸಿಲ್ಲ ಎಂದು ಇತ್ತೀಚಿಗೆ ಬಿಎಂಟಿಸಿ ನೂತನ ಅಧ್ಯಕ್ಷ ಎನ್. ಎ. ಹ್ಯಾರಿಸ್ ಹೇಳಿದ್ದಾರೆ.

ಬಿಎಂಟಿಸಿ ಹೊಸ  ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಸದ್ಯ  ಬಸ್ಸು ಟಿಕೆಟ್ ದರ ಹೆಚ್ಚಿಸುವ ಬಗ್ಗೆ ಯಾವುದೇ ಆಲೋಚನೆ ನಡೆಸಿಲ್ಲ. ಡೀಸೆಲ್  ಬೆಲೆಯಲ್ಲಿ ಹೆಚ್ಚಳವಾಗಿರುವುದು ಬಿಎಂಟಿಸಿ ನಷ್ಟಕ್ಕೆ ಕಾರಣವಾಗಿದೆ. ಆದಾಗ್ಯೂ, ಸಾರ್ವಜನಿಕರಿಗೆ ಹೊರೆ ಮಾಡುವುದಿಲ್ಲ ಎಂದರು.

ಬಿಎಂಟಿಸಿಗೆ ರಿಯಾಯಿತಿ ದರದಲ್ಲಿ ಡೀಸೆಲ್ ನೀಡಬೇಕೆಂದು ರಾಜ್ಯಸರ್ಕಾರವನ್ನು  ಒತ್ತಾಯಿಸಿದ್ದು, ಟಿಕೆಟ್ ದರವನ್ನು ಯಾವುದೇ ಕಾರಣಕ್ಕೂ ಹೆಚ್ಚಿಸುವುದಿಲ್ಲ ಎಂದು ಹೇಳಿದರು.

ಮೆಟ್ರೋ ನಿಲ್ದಾಣಗಳಲ್ಲಿ ಹೆಚ್ಚಿನ ಸಂಖ್ಯೆಯ ಫೀಡರ್ ಬಸ್ಸುಗಳು ಹಾಗೂ ಹೆಚ್ಚಿನ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗಿದ್ದರೂ ಕೊನೆಯ ಸ್ಥಳದವರೆಗೂ ಬಸ್ಸು ಸೇವೆ ಕಲ್ಪಿಸಲು ಚಿಂತನೆ ನಡೆಸುತ್ತಿರುವುದಾಗಿ ಎನ್. ಎ. ಹ್ಯಾರಿಸ್ ತಿಳಿಸಿದರು.

SCROLL FOR NEXT