ನಡೆದಾಡುವ ದೇವರ ಜತೆ ಕಲಾಂ 
ರಾಜ್ಯ

ನಡೆದಾಡುವ ದೇವರ ಜತೆ ಕಲಾಂ ನಂಟು, ಶ್ರೀಗಳ ಕುರಿತು ವಿಮಾನದಲ್ಲೇ ಕವಿತೆ ರಚಿಸಿದ್ದ ಅಬ್ದುಲ್ ಕಲಾಂ!

ನಡೆದಾಡುವ ದೇವರು, ತ್ರಿವಿಧ ದಾಸೋಹಿ ಸಿದ್ದಗಂಗಾ ಮಠದ ಹಿರಿಯ ಶ್ರೀಗಳಾದ ಡಾ. ಶಿವಕುಮಾರ ಸ್ವಾಮಿಗಳು ಇಂದು ಶಿವೈಕ್ಯರಾಗಿದ್ದಾರೆ.

ತುಮಕೂರು: ನಡೆದಾಡುವ ದೇವರು, ತ್ರಿವಿಧ ದಾಸೋಹಿ ಸಿದ್ದಗಂಗಾ ಮಠದ ಹಿರಿಯ ಶ್ರೀಗಳಾದ ಡಾ. ಶಿವಕುಮಾರ ಸ್ವಾಮಿಗಳು ಇಂದು ಶಿವೈಕ್ಯರಾಗಿದ್ದಾರೆ. ತಮ್ಮ ಕಾಯಕ ನಿಷ್ಠೆ ಸಮಾಜ ಸೇವೆಯಿಂದ ಭಕ್ತರು, ಸಾಮಾನ್ಯ ಜನರ ಮನೆದೇವರಂತಾಗಿದ್ದ ಶ್ರೀಗಳ ದರ್ಶನಕ್ಕೆ ಆಗಮಿಸಿದ್ದ ಭಾರತದ ಮಾಜಿ ರಾಷ್ಟ್ರಪತಿ, ಭಾರತ ರತ್ನ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಒಮ್ಮೆ ಸ್ವಾಮೀಜಿ ಕುರಿತಂತೆ ಕವಿತೆಯನ್ನು ರಚಿಸಿದ್ದರು ಎನ್ನುವುದು ಅಚ್ಚರಿಯಾದರೂ ಸತ್ಯ.
ಇನ್ನೂ ವಿಶೇಷವೆಂದರೆ ಗುರುವಂದನೆ ಕಾರ್ಯಕ್ರಮಕ್ಕಾಗಿ ಆಗಮಿಸುತ್ತಿದ್ದ ಕಲಾಂ ತಾವು ವಿಮಾನದಲ್ಲಿದ್ದಾಗಲೇ ಆ ಹಿರಿಯರ ಕುರಿತಂತೆ ಈ ಕವಿತೆ ರಚಿಸಿದ್ದರು.ಆಗ ರಾಷ್ಟ್ರಪತಿಗಳಾಗಿದ್ದ ಕಲಾಂ ಅವರ ಕಾರ್ಯದರ್ಶಿ ಸುತ್ತೂರು ಶ್ರೀಗಳಿಗೆ ಕರೆ ಮಾಡಿ "ರಾಷ್ಟ್ರಪತಿ ಕಲಾಂ ಸ್ವಾಮೀಜಿ ಕುರಿತಂತೆ ಕವಿತೆ ರಚಿಸಿದ್ದಾರೆ.ಇದನ್ನು ಮಠಕ್ಕೆ ಫ್ಯಾಕ್ಸ್ ಮೂಲಕ ತಲುಪಿಸಲಾಗುತ್ತದೆ. ತಕ್ಷಣ ಅದನ್ನು ಕನ್ನಡಕ್ಕೆ ತರ್ಜುಮೆ ಮಾಡಿ ಕಾರ್ಯಕ್ರಮದಲ್ಲಿ ಹಾಡಲು ಸಾಧ್ಯವೆ?"ಎಂದೂ ಪ್ರಶಿನಿಸಿದ್ದಾರೆ.
ಆಗ ಅದಕ್ಕೊಪ್ಪಿದ ಶ್ರೀಗಳು  ಗೊ.ರು ಚನ್ನಬಸಪ್ಪ ಅವರೊಡನೆ ಮಾತನಾಡಿದಾಗ ಚೆನ್ನಬಸಪ್ಪ ಕಲಾಂ ಬರೆದಿದ್ದ ಕವಿತೆಯನ್ನು ಕನ್ನಡಕ್ಕೆ ಅನುವಾದ ಮಾಡಿ ಕೊಡುತ್ತಾರೆ. ಹಾಗೂ ಆ ಕವಿತೆಯನ್ನು ಅಂದಿನ ಗುರುವಂದನೆ ಕಾರ್ಯಕ್ರಮದಲ್ಲಿ ಹಾಡಲಾಗಿತ್ತು.
ಅಬ್ದುಲ್ ಕಲಾಂ ಹೀಗೆ ತಮ್ಮ ಗುರುಗಳ ಮೇಲಿನ ಪ್ರೀತಿಯನ್ನು ಕವಿತೆಯ ಮೂಲಕ ಸಮರ್ಪಿಸಿ ಸಂತಸಗೊಂಡ  ಆ ಕ್ಷಣ ಕಲಾಂ ಜೀವನದಲ್ಲಿ ಎಂದಿಗೂ ಮರೆಯಲಾಗದ್ದಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯದಲ್ಲಿ ಮಳೆ ಅಭಾವ, ನಾಲ್ಕು ಕಂದಾಯ ವಿಭಾಗಗಳಲ್ಲಿ ಮೋಡ ಬಿತ್ತನೆ: 27 ಕೋಟಿ ರೂ. ವೆಚ್ಚ- ಜಲ ಸಂಪನ್ಮೂಲ ಸಚಿವ ಚಲುವರಾಯಸ್ವಾಮಿ!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

Congress ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿ, ಬಂಧನ ಭೀತಿ!

ಭಾರತದಲ್ಲಿ ಫುಡ್‌ ಕಂಪನಿಗಳ ಲಾಬಿ: ಚಿಪ್ಸ್ ಮತ್ತು ಕೂಲ್ ಡ್ರಿಂಕ್ಸ್ ಮೇಲೆ ‘ರೆಡ್‌ ಅಲರ್ಟ್’ ಪ್ರಸ್ತಾವ ಕೈಬಿಟ್ಟ FSSAI, ಆಗಿದ್ದೇನು?

'ಬ್ರೋ, ನೀವು ಸುಮ್ಮನೆ ಸಮಯ ವ್ಯರ್ಥ ಮಾಡುತ್ತಿದ್ದೀರಿ': ಎರಡನೇ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ನಾಯಕನ ಕಾಲೆಳೆದ ಸರ್ಫರಾಜ್ ಖಾನ್!