ಅತಿಥಿ ಉಪನ್ಯಾಸಕರಿಗೆ 9,000 ರೂ ಬದಲು 50,000 ವೇತನ ನೀಡಿ: ರಾಜ್ಯ ಸರ್ಕಾರಕ್ಕೆ ಯುಜಿಸಿ
ಅತಿಥಿ ಉಪನ್ಯಾಸಕರಿಗೆ 9,000 ರೂಪಾಯಿ ಗರಿಷ್ಟ ವೇತನ ನೀಡುವ ಬದಲು 50,000 ರೂಪಾಯಿ ಗರಿಷ್ಟ ವೇತನ ನೀಡಿ ಎಂದು ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದೆ.
ವಿವಿಧ ವಿಶ್ವವಿದ್ಯಾನಿಲಯಗಳ ಸರ್ಕಾರಿ ಪದವಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುವವರಿಗೆ ಪ್ರದಿ ದಿನಕ್ಕೆ 1,500 ರೂಪಾಯಿಯಂತೆ ಅಥವಾ ಪ್ರತಿ ತಿಂಗಳು 50,000 ರೂಪಾಯಿ ವೇತನ ನಿಗದಿಪಡಿಸಲು ಸೂಚನೆ ನೀಡಿದೆ. ಈಗ ಪ್ರತಿ ತಿಂಗಳಿಗೆ 9.000-12,000 ರೂಪಾಯಿ ವೇತನ ನೀಡಲಾಗುತ್ತಿದೆ.
ರಾಜ್ಯದ ಸರ್ಕಾರಿ ಪದವಿ ಕಾಲೇಜಿನಲ್ಲಿ 12,000 ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರಿದ್ದು, ಯುಜಿಸಿ ಉಪನ್ಯಾಸಕರ ವೇತನಕ್ಕೆ ಸರಿಸಮನಾದ ವೇತನವನ್ನು ನೀಡಬೇಕೆಂದು ಆಗ್ರಹಿಸುತ್ತಿದ್ದಾರೆ.
7 ನೇ ವೇತನ ಆಯೋಗದ ಶಿಫಾರಸ್ಸಿನಡಿಯಲ್ಲಿ ಯುಜಿಸಿ ಈ ನಿರ್ಧಾರ ಕೈಗೊಂಡಿದ್ದು. ಅತಿಥಿ ಉಪನ್ಯಾಸಕರಿಗೆ 9,000 ರೂಪಾಯಿ ಗರಿಷ್ಟ ವೇತನ ನೀಡುವ ಬದಲು 50,000 ರೂಪಾಯಿ ಗರಿಷ್ಟ ವೇತನ ನೀಡಿ ಎಂದು ಸೂಚನೆ ನೀಡಿದೆ.