ಚಿಕ್ಕಮಗಳೂರು: ಚಾರ್ಮುಡಿ ಘಾಟ್ ನ ಬೆಟ್ಟದ ಮೇಲೆ ಸೆಲ್ಫಿ ಹಿಡಿದುಕೊಳ್ಳಲು ಹೋದ ಯುವಕ 100 ಅಡಿ ಮೇಲಿನಿಂದ ಜಾರಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಚಿಕ್ಕಮಗಳೂರಿನಲ್ಲಿ ಮಳೆಯಾಗುತ್ತಿದ್ದು ಚಾರ್ಮುಡಿ ಘಾಟ್ ನಲ್ಲಿ ಬೆಟ್ಟಗಳಲ್ಲಿ ಅಲ್ಲಲ್ಲಿ ನೀರು ಜೋರಾಗಿ ಹರಿಯುತ್ತಿದೆ. ಇದನ್ನು ಕಂಡ ಯುವಕನೊರ್ವ ಮೇಲಿನಿಂದ ಸೆಲ್ಫಿ ತೆಗೆದುಕೊಂಡರೆ ಚೆನ್ನಾಗಿರುತ್ತದೆ ಎಂದು ಬೆಟ್ಟದ ಮೇಲಕ್ಕೆ ಹತ್ತಿದ್ದಾನೆ. ಆದರೆ ಮಧ್ಯೆ ಕಾಲು ಜಾರಿದ್ದರಿಂದ 100 ಅಡಿ ಮೇಲಿನಿಂದ ಕೆಳಕ್ಕೆ ಉರುಳಿಕೊಂಡು ಬಂದಿದ್ದಾನೆ.
ಇನ್ನು ಬೇರೆ ಪ್ರವಾಸಿಗರು ನೀರು ಹರಿಯುತ್ತಿದ್ದನ್ನು ವಿಡಿಯೋ ಮಾಡುವಾಗ ಯುವಕ ಬೀಳುತ್ತಿರುವ ದೃಶ್ಯ ಸೆರೆಯಾಗಿದೆ. ಸದ್ಯ ಯುವಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಆತನ ಪರಿಸ್ಥಿತಿ ಗಂಭೀರವಾಗಿದೆ.