ರಾಜ್ಯ

ಪ್ರಸಿದ್ದ ಆಭರಣ ಶೋರೂಂಗಳ ಮೇಲೆ ಐಟಿ ದಾಳಿ: 125 ಕೋಟಿ ರೂ. ಅಕ್ರಮ ಸಂಪತ್ತು ಪತ್ತೆ

Raghavendra Adiga
ಬೆಂಗಳೂರು: ಮಹಾರಾಷ್ಟ್ರ, ಕೇರಳ ಮತ್ತು ಆಂಧ್ರಪ್ರದೇಶದ ಡಿಜಿಐಟಿಗಳ ನೆರವಿನೊಡನೆ ದಾಯ ತೆರಿಗೆ - ಕರ್ನಾಟಕ ಮತ್ತು ಗೋವಾದ ಆದಾಯ ತೆರಿಗೆ ನಿರ್ದೇಶನಾಲಯ (ಡಿಜಿಐಟಿ) ದ ತನಿಖಾ ವಿಭಾಗವು  ರಾಜ್ಯದಾದ್ಯಂತ ಚಿನ್ನದ ಅಂಗಡಿ ಮೇಲೆ ನಡೆಸಿದ್ದ ದಾಳಿಯಲ್ಲಿ ದೊಡ್ಡ ಪ್ರಮಾಣದ ಅಕ್ರಮ ಸಂಪತ್ತು ಪತ್ತೆಯಾಗಿದೆ. ಕಳೆದ ವಾರ ಎರಡು ಪ್ರಸಿದ್ಧ ಆಭರಣ ಶೋ ರೂಂಗಳಾದ  'ಸುಲ್ತಾನ್' ಮತ್ತು 'ಸಿಟಿ ಗೋಲ್ಡ್' ಮೇಲೆ ಸರಣಿ ದಾಳಿ ನಡೆಸಲಾಗಿತ್ತು.
ಎರಡೂ ಆಭರಣ ಮಾರಾಟ ಸಮೂಹವು ಸುಮಾರು 125 ಕೋಟಿ ರೂ.ಗಳ  ದಾಖಲೆ ಇಲ್ಲದ  ಆದಾಯವನ್ನು ಹೊಂದಿದ್ದಾಗಿ ಹೆಸರು ಹೇಳಲು ಇಚ್ಚಿಸದ ಮೂಲಗಳಿಂದ ಪತ್ರಿಕೆಗೆ ಮಾಹಿತಿ ಲಭಿಸಿದೆ.ಶೋಧ ಮತ್ತು ವಶಪಡಿಸಿಕೊಳ್ಳುವ ಕಾರ್ಯಾಚರಣೆಯಲ್ಲಿ ಎರಡು ಆಭರಣ  ಮಾರಾಟ ಸಮೂಘಗಳು ಮುಂಬಯಿಯಿಂದ ಲೆಕ್ಕವಿಲ್ಲದ ಮರುಬಳಕೆಯ ಚಿನ್ನವನ್ನು ನೂರಾರು ಕೋಟಿ ಮೌಲ್ಯ ಕೊಟ್ಟು  ಖರೀದಿಸುತ್ತಿದ್ದವು ಎಂದು ಯ್ತಿಳಿದುಬಂದಿದೆ.
"ಎರಡೂ ಶೋ ರೂಂ ಗಳಲ್ಲಿ ಲೆಕ್ಕ ಪುಸ್ತಕದ ಆಚಿನ ನಗದು ಮಾರಾಟವು ನೂರಾರು ಕೋಟಿಗಳಲ್ಲಿರಬಹುದು. ಈ ವಿಷಯವು ತನಿಖೆಯಲ್ಲಿದೆ, ”ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಡಿಜಿಐಟಿ, ಕರ್ನಾಟಕ ಮತ್ತು ಗೋವಾ ಕಳೆದ ವಾರ ಬೆಂಗಳೂರು, ಉಡುಪಿ, ಮಂಗಳೂರು ಮತ್ತು ಶಿವಮೊಗ್ಗಗಳಲ್ಲಿನ ‘ಸುಲ್ತಾನ್’ ಮತ್ತು ‘ಸಿಟಿ ಗೋಲ್ಡ್’ ನ ಶೋ ರೂಂಗಳಲ್ಲಿ ಏಕಕಾಲದಲ್ಲಿ ಶೋಧ ಕಾರ್ಯಾಚರಣೆ ನಡೆಸಿತ್ತು. ಕೇರಳ, ಆಂಧ್ರಪ್ರದೇಶ ಮತ್ತು ಮುಂಬೈಗಳಲ್ಲಿ  ಸಹ ಏಕಕಾಲಕ್ಕೆ ದಾಳಿ ನಡೆಸಲಾಯಿತು. "ಇದು  ಸಾಮೂಹಿಕ ಪ್ರಯತ್ನವಾಗಿದ್ದು ಭಾರೀ ಯಶಸ್ಸು ಕಂಡಿದೆ"ಅಧಿಕಾರಿ ಹೇಳಿದರು.
SCROLL FOR NEXT