ರಾಜ್ಯ

ಚಿನ್ನದಲ್ಲಿ ಮಿನಿ ವಿಶ್ವಕಪ್ ಟ್ರೋಫಿ ನಿರ್ಮಿಸಿದ ಬೆಂಗಳೂರಿನ ಅಕ್ಕಸಾಲಿಗ

Lingaraj Badiger
ಬೆಂಗಳೂರು: ಸದ್ಯ ದೇಶಾದ್ಯಂತ ವಿಶ್ವಕಪ್ ಕ್ರಿಕೆಟ್ ಜ್ವರ ಆವರಿಸಿದ್ದು, ಟೀಂ ಇಂಡಿಯಾ ಈ ಬಾರಿ ವಿಶ್ವಕಪ್ ಗೆದ್ದು ಬರಲಿ ಎಂಬ ಆಶಯದೊಂದಿಗೆ ಬೆಂಗಳೂರಿನ ಯುವ ಅಕ್ಕಸಾಲಿಗರೊಬ್ಬರು ಚಿನ್ನದಲ್ಲಿ ಆಕರ್ಷಕವಾದ ಮಿನಿ ವಿಶ್ವಕಪ್ ಟ್ರೋಫಿ ತಯಾರಿಸಿದ್ದಾರೆ.
ನಿನ್ನೆಯಷ್ಟೇ ಭಾರತ, ಬಾಂಗ್ಲಾದೇಶ ವಿರುದ್ಧ ಭರ್ಜರಿ ಗೆಲುವು ಸಾಧಿಸುವ ಮೂಲಕ ಸೆಮಿ ಫೈನಲ್ ಪ್ರವೇಶಿಸಿದ್ದು, ಇದೇ ಖುಷಿಯಲ್ಲಿ ನಗರದ ಅಕ್ಕಸಾಲಿಗ ನಾಗರಾಜ್ ರೇವಣಕರ್ ಅವರು 0.490 ಮಿಲಿ ಗ್ರಾಂ ಶುದ್ಧ ಚಿನ್ನದಲ್ಲಿ ಮಿನಿ ವಿಶ್ವಕಪ್ ಟ್ರೋಫಿ ನಿರ್ಮಿಸಿದ್ದಾರೆ. 
1.5 ಸೆಂಟಿ ಮೀಟರ್ ಎತ್ತರದ ಈ ಪುಟ್ಟ ಕಪ್ ತಯಾರಿಸಿರುವ ನಾಗರಾಜ್ ಅವರು ದೊಡ್ಡ ಕ್ರಿಕೆಟ್ ಅಭಿಮಾನಿಯಾಗಿದ್ದು, ಈ ಬಾರಿ ಭಾರತ ವಿಶ್ವಕಪ್ ಗೆದ್ದೇ ಗೆಲ್ಲುತ್ತದೆ ಎಂಬ ವಿಶ್ವಾಸದಲ್ಲಿದ್ದಾರೆ.
ಭಾರತ ತಂಡ ವಿಶ್ವಕಪ್ ಗೆದ್ದರೆ ಈ ಚಿನ್ನದ ಕಪ್ ಅನ್ನು ಕಾಣಿಕೆಯಾಗಿ ನೀಡಬೇಡು ಎಂದುಕೊಂಡಿದ್ದೇನೆ. ಆದರೆ ಹೇಗೆ ತಲುಪಿಸುವುದು ಎಂಬುದು ಗೊತ್ತಿಲ್ಲ. ಒಂದು ವೇಳೆ ಟೀಂ ಇಂಡಿಯಾ ಈ ಮಿನಿ ಕಪ್ ತಲುಪಿಸಲು ಸಾಧ್ಯವಾಗದಿದ್ದರೆ ಅದನ್ನು ನನ್ನ ಬಳಿಯೇ ಇಟ್ಟುಕೊಳ್ಳುತ್ತೇನೆ. ಈ ಪುಟ್ಟ ವಿಶ್ವಕಪ್ ಟ್ರೋಫಿಯನ್ನು ನೋಡಲು ಹಲವು ಜನ ನಮ್ಮ ಅಂಗಡಿಗೆ ಬರುತ್ತಿದ್ದಾರೆ ಎಂದು ನಾಗರಾಜ್ ರೇವಣಕರ್ ಅವರು ಹೇಳಿದ್ದಾರೆ.
SCROLL FOR NEXT