ರಾಜ್ಯ

ಆರ್. ಅಶೋಕ್ ಹೆಸರು ಬಳಸಿ ಸಾಮಾಜಿಕ ತಾಣದಲ್ಲಿ ನಕಲಿ ಪೋಸ್ಟ್: ಇಬ್ಬರ ವಿರುದ್ಧ ಎಫ್ಐಆರ್

Raghavendra Adiga
ಬೆಂಗಳೂರು: ಬಿಜೆಪಿ ನಾಯಕ ಆರ್ ಅಶೋಕ್ ಅವರ ಹೆಸರನ್ನು ದುರುಪಯೋಗಪಡಿಸಿಕೊಂಡು ಸಾಮಾಜಿಕ ಮಾದ್ಯಮಗಳಲ್ಲಿ ನಕಲಿ ಸಂದೇಶಗಳನ್ನು ಪೋಸ್ಟ್ ಮಾಡಿದ ಆರೋಪದ ಮೇಲೆ ಬೆಂಗಳೂರು ಬಸವೇಶ್ವರ ನಗರ ಪೋಲೀಸರು ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಿಜೆಪಿ ನಾಯಕನ ಅನುಯಾಯಿ ಕೋದಂಡರಾಮ್ ಸಲ್ಲಿಸಿದ್ದ ದೂರಿನ ಹಿನ್ನೆಲೆಯಲ್ಲಿ ಈ ಪ್ರಕರಣ ದಾಖಲಾಗಿದೆ.
ಆರ್. ಅಶೋಕ್ ಮುಖ್ಯಂತ್ರಿ ಎಚ್.ಡಿ. ಕುಮಾರಸ್ವಾಮಿ ಅಮೆರಿಕಾ ಪ್ರವಾಸ, ಆದಿಚುಂಚನಗಿರಿ ಮಠದ ಹಾಗೂ ಅಮೆರಿಕಾದಲ್ಲಿ ನಿರ್ಮಾಣಗೊಳ್ಳುವ ಕಾಲಭೈರವೇಶ್ವರ ಸ್ವಾಮಿ ದೇವಾಲಯದ ನಿರ್ಮಾಣದ ವಿರುದ್ಧ ಮಾತನಾಡಿರುವಂತೆ ನಕಲಿ ಹೇಳಿಕೆಗಳನ್ನು ಸೃಷ್ಟಿಸಿ ಸಾಮಾಜಿಕ ತಾಣಗಳಲ್ಲಿ ಹರಿಬಿಟ್ಟಿದ್ದರೆಂಬ ಆರೋಪ ಕೇಳಿಬಂದಿದೆ.
ಒಕ್ಕಲಿಗ ಸಮುದಾಯದ ವಾಟ್ಸ್ ಅಪ್ ಗ್ರೂಪ್ ನಲ್ಲಿ  ಪ್ರಸಾರವಾದ ಪೋಸ್ಟ್‌ಗಳಲ್ಲಿ, ಅಶೋಕ್ ಮಠದ ವಿರುದ್ಧ ಹೇಳಿಕೆ  ನೀಡಿದ್ದಾಗಿ ಪ್ರಸಾರವಾಗಿದೆ.
ಇದೀಗ ಪೋಲೀಸರು ದೂರಿನ ಹಿನ್ನೆಲೆ  ಐಪಿಸಿ ಸೆಕ್ಷನ್ 295 ರ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
SCROLL FOR NEXT