ಬೆಂಗಳೂರು: ಭಾನುವಾರ ಸಂಜೆ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಬೈಕ್ ಸವಾರನೊಬ್ಬ ಸಾವನ್ನಪ್ಪಿರುವ ಘಟನೆ ನಗರದ ಕನ್ನಿಂಗ್ಹ್ಯಾಮ್ ರಸ್ತೆಯಲ್ಲಿ ನಡೆದಿದೆ. ಬೈಕ್ ಚಲಾಯಿಸುವಾಗ ಅಜಾಗರೂಕತೆಯೇ ಈ ಅಪಘಾತಕ್ಕೆ ಕಾರಣವಾಗಿದೆ ಎಂದು ತನಿಖೆ ನಡೆಸಿರುವ ಹೈಗ್ರೌಡ್ಸ್ ಪೋಲೀಸರು ಹೇಳಿದ್ದಾರೆ.
ಮೃತನನ್ನು ಚಲನಚಿತ್ರ ವಿತರಕನಾಗಿದ್ದ ಅಜಯ್ ಚಂದಾನಿ ಎಂದು ಗುರುತಿಸಲಾಗಿದೆ.ಅವರು ತಾಯಿ ಮೀನಾ ಚಂದಾನಿ ಅವರೊಂದಿಗೆ ಸ್ಯಾಂಕಿ ರಸ್ತೆ ಬಳಿಯ ಅಬ್ಶಾಟ್ ಲೇಔಟ್ ನಲ್ಲಿ ವಾಸವಿದ್ದರು.
ಭಾನುವಾರ ಸಂಜೆ 5.30 ಕ್ಕೆ ಚಂದಾನಿ ತನ್ನ ಸ್ಪೋರ್ಟ್ಸ್ ಬೈಕ್‌ನಲ್ಲಿ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರು ಅತಿಯಾದ ವೇಗದಲ್ಲಿ ಬೈಕ್ ಚಲಾಯಿಸುತ್ತಿದ್ದರು. ಆಗ ಅಕಸ್ಮಾತ್ ತನ್ನ ನಿಯಂತ್ರಣ ಕಳೆದುಕೊಂಡಿದ್ದಾರೆ.ಆಗ ಬೈಕ್ ವಿದ್ಯುತ್ ಕಂಬಕ್ಕೆ ಗುದ್ದಿದೆ, ಸವಾರ ಚಂದಾನಿ ಬೈಕಿನಿಂದ ಎಸೆಯಲ್ಪಟ್ಟು ಅಪಾರ್ಟ್ ಮೆಂಟ್ ಒಂದರ ಗೊಡೆಗೆ ಡಿಕ್ಕಿಯಾಗಿದ್ದಾರೆ.
ಅಪಘಾತದಲ್ಲಿ ಗಾಯಾಳುವಾಗಿದ್ದ ಅವರನ್ನು ತಕ್ಷಣ ಟ್ರಾಫಿಕ್ ಪೋಲೀಸರ ಸಹಾಯದಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅಲ್ಲಿ ಚಿಕಿತ್ಸೆ ಫಲನೀಡದೆ ಮೃತಪಟ್ಟಿದ್ದಾರೆ.
. ಘಟನೆಯ ಬಗ್ಗೆ ಚಂದಾನಿಯ ತಾಯಿಗೆ ಮಾಹಿತಿ ನೀಡಲಾಗಿದ್ದು, ಸೋಮವಾರ ಮರಣೋತ್ತರ ಪರೀಕ್ಷೆ ನಡೆಸಲಾಗುವುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics