ಬೆಂಗಳೂರು: ಬೆಂಗಳೂರಿನ ಬನಶಂಕರಿ ಬಡಾವಣೆಯಲ್ಲಿ ಸುಮಾರು ನಾಲ್ಕು ಎಕರೆ ಭೂಮಿಯ ಡಿನೋಟಿಫಿಕೇಷನ್ ಮಾಡಿದ್ದರೆನ್ನಲಾದ ಪ್ರಕರಣಕ್ಕೆ ಸಂಬಂಧಿಸಿ ಜನಪ್ರತಿನಿಧಿಗಳ ನ್ಯಾಯಾಲಯ ಸಿಎಂ ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ 19 ಆರೋಪಿಗಳನ್ನು ವಿಚಾರಣೆ ನಡೆಸುವಂತೆ ಆದೇಶಿಸಿದೆ.
ಈ ಹಿಂದೆ 2006-07ರ ಅವಧಿಯಲ್ಲಿ ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ವೇಳೆ ಬನಶಂಕರಿ ಬಡಾವಣೆಯ ನಾಲ್ಕು ಎಕರೆ ಭೂಮಿಯನ್ನು ಡಿನೋಟಿಫೈ ಮಾಡಿದ್ದರೆಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಎಂ.ಎಸ್.ಮಹದೇವಸ್ವಾಮಿ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು.
ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಧೀಶ ರಾಮಚಂದ್ರ ಡಿ. ಹೆಬ್ಬಾರ್ ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿ 19 ಆರೋಪಿಗಳು ವಿಚಾರಣೆಗೆ ಒಲಪಡಬೇಕೆಂದು ಆದೇಶಿಸಿದ್ದಾರೆ.
ಡಿನೋಟಿಫಿಕೇಷನ್ ಸಂಬಂಧ ಲೋಕಾಯುಕ್ತ ಪೋಲೀಸರು ಸಲ್ಲಿಸಿದ್ದ ಬಿ ರಿಪೋರ್ಟ್ ಅನ್ನು ವಜಾಗೊಳಿಸಿರುವ ನ್ಯಾಯಾಲಯ ಸಿಎಂ ಕುಮಾರಸ್ವಾಮಿಯವರನ್ನು ವಿಚಾರಣೆಗೆ ಒಲಪಡೆಬೇಕೆಂದು ಆದೇಶಿಸಿದೆ.
ಬನಶಂಕರಿ ಐದನೇ ಹಂತದಲ್ಲಿರುವ ಹಲಗೆವಡೇರಹಳ್ಳಿಯ ಬಿಡಿಎ ಬಡಾವಣೆಗಾಗಿ ವಶಪಡಿಸಿಕೊಳ್ಳಲಾಗಿದ್ದ ಭೂಮಿಯನ್ನು ೨೦೦೬-೦೭ರ ಅವಧಿಯಲ್ಲಿ ಅಕ್ರಮ ಡಿನೋಟಿಫೈ ಮಾಡಿರುವುದಾಗಿ ಆರೋಪವಿತ್ತು. ಅಂದು ಮುಖ್ಯಮಂತ್ರಿಗಳಾಗಿದ್ದ ಕುಮಾರಸ್ವಾಮಿ ಇಲಾಖೆಗಳ ಮನವಿಯನ್ನು ಲೆಕ್ಕಿಸದೆ ಭೂಮಿಯ ಡಿನೋಟಿಫೈ ಮಾಡಿದ್ದರೆನ್ನಲಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos